ಹೊಸನಗರದಲ್ಲಿ ಜೆಸಿಐಯಿಂದ ಕೊರೊನಾ ವಾರಿಯರ್ಸ್‌ಗೆ ಸನ್ಮಾನ

0
653

ಹೊಸನಗರ: ಹೊಸನಗರ ಕೊಡಚಾದ್ರಿ ಇವರು ಸೆಪ್ಟೆಂಬರ್ 9 ರಿಂದ 15ರವರೆಗೆ ಅದ್ಧೂರಿಯಾಗಿ ಜೆಸಿ ಸಪ್ತಾಹ ಕಾರ್ಯಕ್ರಮವನ್ನು ಹೊಸನಗರದಲ್ಲಿ ಹಮ್ಮಿಕೊಂಡಿದ್ದು ಇದಕ್ಕೆ ಜೆಸಿಐ ಬಂಧನ್ ಎಂದು ನಾಮಕರಣ ಮಾಡಲಾಗಿದ್ದು ಕೊರೊನಾ ಲಸಿಕೆಯನ್ನು ಸಾರ್ವಜನಿಕರಿಗೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅದರಂತೆ ಇಂದು ಜೆಸಿಐ ಕಾರ್ಯಕರ್ತರು ಹೊಸನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ರಮೇಶ್ ಆಚಾರ್ ಹಾಗೂ ಸೂರ್ಯಕಲಾರವರನ್ನು ಅದ್ಧೂರಿಯಾಗಿ ಸನ್ಮಾನಿಸಿದರು.

ಈ ಕಾರ್ಯಕ್ರಮದಲ್ಲಿ ಸುಮಾರು 300ಜನರಿಗೆ ಕೊರೊನಾ ಲಸಿಕೆಯ ಪ್ರಯೋಜನ ಪಡೆದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ|| ಸುರೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಬಿ.ಜಿ ಚಂದ್ರಮೌಳಿ, ಪೂರ್ವವಲಯಾಧ್ಯಕ್ಷರಾದ ಡಿ.ಆರ್. ಗುರುವಿಕ್ರಮ್, ಸೀಮಾ ಕಿರಣ್, ಇನ್ನೂ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವರದಿ: ಹೆಚ್.ಎಸ್.ನಾಗರಾಜ್
ಜಾಹಿರಾತು

LEAVE A REPLY

Please enter your comment!
Please enter your name here