ಹೊಸನಗರದಲ್ಲಿ ಪ್ರತಿ ಬುಧವಾರ ಇರಲ್ಲ ಕರೆಂಟ್ ! KEB ಅಂದ್ರೆ ‘ಕರೆಂಟ್ ಇರಲ್ಲ ಬಿಡಿ’ ಇದು ಹೊಸನಗರಕ್ಕೆ ನಿಜ ಅನ್ವರ್ಥನಾಮ !!

0
573

ಹೊಸನಗರ : ಜಲವಿದ್ಯುತ್ ಯೋಜನೆಗಳು ಇಡಿ ಹೊಸನಗರ ತಾಲೂಕನ್ನು ಆಪೋಶನ ಪಡೆದು ರಾಜ್ಯಕ್ಕೆ ವಿದ್ಯುತ್ ಸೌಲಭ್ಯ ಒದಗಿಸಿದ್ದರು ದೀಪದ ಬುಡ ಕತ್ತಲೆಬಂತೆ ಇಡಿಯ ತಾಲೂಕು ವಿದ್ಯುತ್ ಸಂಪರ್ಕದಿಂದ ವಂಚಿತರಾಗಿರುವುದು ಈ ಭಾಗದ ಜನರ ದುರಾದೃಷ್ಟವಾಗಿದೆ.

ಇಡಿಯ ರಾಜ್ಯಕ್ಕೆ ವಿದ್ಯುತ್ ಸಂಪರ್ಕ ನೀಡಿದ್ದರು ಈ ಭಾಗದ ಜನತೆ ದುರದೃಷ್ಟವೆಂಬಂತೆ ತಾಲೂಕಿನ ಕೆಲವು ಗ್ರಾಮಗಳು ಇನ್ನೂ ವಿದ್ಯುತ್ ಸಂಪರ್ಕ ಕಾಣದಿರುವುದು ದುರಂತವೆನಿಸಿದೆ.

ಹೊಸನಗರದಲ್ಲಿ ವಿದ್ಯುತ್ ಸಂಪರ್ಕ ಕಾಣುವುದು ಅಪರೂಪ. ಇಬ್ಬನಿಯಂತ ಮಳೆ ಬಂದರೆ ಸಾಕು ಕರೆಂಟ್ ಮಂಗಮಾಯವಾಗಿ ಬಿಡುತ್ತದೆ. ಈಗ ಕಳೆದ ಕೆಲವು ವಾರಗಳಿಂದ ಪ್ರತಿ ಬುಧವಾರ ತಾಲೂಕಿನ ಜನತೆ ಅಧಿಕೃತವಾಗಿ ವಿದ್ಯುತ್ ಸೌಲಭ್ಯದಿಂದ ವಂಚಿತರಾಗುತ್ತಿದ್ದು ಉಳಿದ ದಿನಗಳಲ್ಲೂ ಸಹ ಪೂರ್ಣ ಪ್ರಮಾಣದ ವಿದ್ಯುತ್‌ನಿಂದ ವಂಚಿತರಾಗುತ್ತಿದ್ದಾರೆ.

ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು, ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರು ಸಹ ಇಲ್ಲಿಯ ವಿದ್ಯುತ್ ಸಮಸ್ಯೆ ನಿರಂತರ ಹಾಗೂ ಜೀವಂತವಾಗಿರುವುದು ಈ ಭಾಗದ ಜನರ ದೌರ್ಭಾಗ್ಯವಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here