ಹೊಸನಗರ: ಸಾಮಾಜಿಕ ಕ್ಷೇತ್ರದಲ್ಲಿ ಅದರಲ್ಲೂ ಪ್ರಮುಖವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನಾಂಗದ ಏಳಿಗೆಗಾಗಿ ಅಸ್ಪೃಶ್ಯತೆ ನಿರ್ಮೂಲನೆ ಹಾಗೂ ದೌರ್ಜನ್ಯ ತಡೆಯುವ ಚಟುವಟಿಕೆಗಳಲ್ಲಿ ಸ್ವಯಂ ಪ್ರೇರಣೆಯಿಂದ ನಿರಂತರ ತೋಡಗಿಕೊಂಡ ವ್ಯಕ್ತಿ ಬಾಬು ಜಗಜೀವನ್ರಾಮ್ರವರು ಎಂದು ತಹಶೀಲ್ದಾರ್ ವಿ.ಎಸ್ ರಾಜೀವ್ರವರು ಹೇಳಿದರು.
ಇಲ್ಲಿನ ತಾಲ್ಲೂಕು ಕಛೇರಿಯ ಆವರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಬಾಬು ಜಗಜೀವನ್ರಾಮ್ರವರ 115ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗಿದ್ದು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ಅರ್ಪಿಸಿ ಮಾತನಾಡಿದರು.
ಅಸ್ಪೃಶ್ಯತೆ ನಿವಾರಣೆ, ಜೀತ ಪದ್ದತಿ ನಿರ್ಮೂಲನೆ, ಮಹಿಳ ಮತ್ತು ಮಕ್ಕಳ ರಕ್ಷಣೆಗೆ ನಡೆಸಿದ ಹೋರಾಟ, ದಲಿತರ ಪರವಾಗಿ ಹೋರಾಟ ನಡೆಸಿದ ಇವರು ಸಾಹಿತ್ಯ ಚಿಂತಕರರಾಗಿದ್ದು ಇವರು ಭಾರತ ದೇಶದ ಉಪಪ್ರದಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದು ಈ ದೇಶದಲ್ಲಿ ಹಸಿರು ಕ್ರಾಂತಿಯ ನೇಕರರಾಗಿ, ಕೃಷಿ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ನೀಡಿದ ಇವರು ಮಾನವತಾವಾದಿಯಾಗಿದ್ದರು ಎಂದರು.
ಈ ಸಮಾರಂಭದಲ್ಲಿ ತಾಲ್ಲೂಕು ಕಛೇರಿಯ ಶಿರಾಸ್ತೆದಾರ್ ಶ್ರೀಕಾಂತ್ ಹೆಗಡೆ, ಪ್ರಥಮ ದರ್ಜೆ ಗುಮಾಸ್ಥರಾದ ವಿನಯ್ ಎಂ ಆರಾಧ್ಯ, ಚಿರಾಗ್, ಜಗದೀಶ್, ಸಮಾಜ ಕಲ್ಯಾಣ ಇಲಾಖೆಯ ಕಛೇರಿಯ ಅಧೀಕ್ಷಕರಾದ ನಂದಿನಿ, ತಾಲ್ಲೂಕು ಕಛೇರಿಯ ಸಿಬ್ಬಂದಿಗಳಾದ ಸರೋಜಿನಿ, ಕಲ್ಪನ, ರಾಘವೇಂದ್ರ, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕರಾದ ಸುರೇಶ್, ಸರ್ವೆ ಇಲಾಖೆಯ ಮಲ್ಲಿಕಾರ್ಜುನ್ ಬನಸಾಳೆ, ಪಿಡಬ್ಲ್ಯುಡಿ ಕಛೇರಿಯ ಸಿಬ್ಬಂದಿಯಾದ ಯೋಗೇಂದ್ರ, ಆರೋಗ್ಯ ಇಲಾಖೆಯ ಕರಿಬಸಮ್ಮ ವಿವಿಧ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
Related