ಹೊಸನಗರದಲ್ಲಿ ವಿಶ್ವಗುರು ಬಸವೇಶ್ವರರ ಜಯಂತಿ ಆಚರಣೆ ; ಸಮಾಜದ ಅಂಕು-ಡೊಂಕು ಸರಿಪಡಿಸಲು ಬಸವೇಶ್ವರರ ಜೀವನ ಮುಡಿಪು

0
271

ಹೊಸನಗರ: ಕಾಯಕವೇ ಕೈಲಾಸ ಎಂದು ಸಾರಿದ ಭಕ್ತಿ ಚಳುವಳಿಯ ಸಂತ ಬಸವೇಶ್ವರರ ಜಯಂತಿ ಆಚರಣೆ ಸಂದರ್ಭದಲ್ಲಿ ಅವರು ತತ್ವಗಳ ಪಾಲನೆಗೆ ಮುಂದಾಗಬೇಕು ಎಂದು ಗ್ರೇಡ್2 ತಹಸೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ಹೇಳಿದರು.

ಅವರು ಇಲ್ಲಿನ ತಾಲೂಕು ಕಛೇರಿಯಲ್ಲಿ ಅಖಿಲ ಭಾರತೀಯ ವೀರಶೈವ ಮಹಾಸಭಾ ಹಾಗೂ ತಾಲೂಕು ಆಡಳಿತ ಮಂಗಳವಾರ ಏರ್ಪಡಿಸಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಸವಣ್ಣನವರು ಪುನರುಜ್ಜೀವನ ಗೊಳಿಸಿದ ಲಿಂಗಾಯತ ವೀರಶೈವ ಧರ್ಮದಲ್ಲಿ ಭಗವಾನ್ ಶಿವನನ್ನು ತಮ್ಮ ಸರ್ವೋಚ್ಚ ದೇವರೆಂದು ನಂಬಲಾಗುತ್ತದೆ. ಇಷ್ಟಲಿಂಗ ಧಾರಣೆ ಹಾಗೂ ಸ್ತ್ರೀ ಪುರುಷ ಸಮಾನತೆಗೆಇವರು ಮಹತ್ವ ನೀಡಿದರು. ಸಂಸತ್‌ ರಚನೆಯ ಕಲ್ಪನೆಯ ಹರಿಕಾರರು ಇವರಾಗಿರುವುದು ನಮ್ಮ ನಾಡಿನ ಹೆಮ್ಮೆ ಎಂದರು.

ಬಸವಣ್ಣನವರು ಹಲವು ಕ್ಷೇತ್ರಗಳಲ್ಲಿ ತಮ್ಮ ಪ್ರವೀಣ್ಯತೆ ಹೊಂದಿದ್ದರು ಎನ್ನುವುದು ಗಮನಾರ್ಹ. ರಾಜನೀತಿಜ್ಞ, ಸಮಾಜ ಸುಧಾರಕ, ಕವಿ, ತತ್ವಜ್ಞಾನಿಯಾಗಿ ವಿಶ್ವಗುರು ಎನಿಸಿಕೊಂಡಿದ್ದಾರೆ. ಸಮಾಜದಲ್ಲಿನ ತಪ್ಪುಗಳ ಕುರಿತು ಜಾಗೃತಿ ಮೂಡಿಸುವಲ್ಲಿ ಬಸವಣ್ಣನವರು ತಮ್ಮ ಜೀವನ ಮುಡಿಪಾಗಿಟ್ಟಿದ್ದರು ಎಂದರು.

ಪ್ರಮುಖರಾದ ದುಮ್ಮಾ ರೇವಣಪ್ಪಗೌಡ, ಮಲ್ಲಿಕಾರ್ಜುನ ಸ್ವಾಮಿ, ಕೊಗ್ರೆ ಬಸವರಾಜಗೌಡ, ಪ್ರಶಾಂತ, ಗಂಗಾಧರಯ್ಯ, ವಿನಯ ಎಂ ಆರಾಧ್ಯ, ಚಿರಾಗ್, ಶ್ರೀಮತಿ ಮಂಜುಳಾ, ಬಾಲಚಂದ್ರ, ಶಿವಪ್ಪ, ನಾಗರಾಜ್ ಕಿಣಿ, ನಾಡಹಬ್ಬ ಸಮಿತಿಯ ಸದಸ್ಯರಾದ ಶ್ರೀನಿವಾಸ್ ಕಾಮತ್, ಶ್ರೀಧರ ಉಡುಪ ಮತ್ತಿತರರುಇದ್ದರು

ಜಾಹಿರಾತು

LEAVE A REPLY

Please enter your comment!
Please enter your name here