ಹೊಸನಗರದಲ್ಲಿ ಸರಳ ರೀತಿಯಲ್ಲಿ 73ನೇ ಗಣರಾಜ್ಯೋತ್ಸವ ದಿನಾಚರಣೆ | ನಮ್ಮದು ಸರ್ವತಂತ್ರ ಭಾರತ ದೇಶಕ್ಕೆ ನಮ್ಮದೇ ಆಡಳಿತ ನಾವು ಸ್ವತಂತ್ರವಾಗಿ ಬದುಕುತ್ತಿದ್ದೇವೆ: ತಹಶೀಲ್ದಾರ್ ವಿ.ಎಸ್. ರಾಜೀವ್

0
608

ಹೊಸನಗರ: ನಮ್ಮದು ಸರ್ವತಂತ್ರ ಭಾರತ ದೇಶಕ್ಕೆ ನಮ್ಮದೇ ಆಡಳಿತ ನಾವು ಸ್ವತಂತ್ರವಾಗಿ ಬದುಕುತ್ತಿದ್ದೇವೆ ಎನ್ನುವ ಶಪಥವನ್ನು ಸಮಸ್ತ ಭಾರತಿಯರೂ ಕೈಗೊಂಡ ಪವಿತ್ರ ದಿನವನ್ನು ಗಣರಾಜ್ಯೋತ್ಸವ ಎಂದು ಕರೆಯುತ್ತಿದ್ದು ಇಂದು 73ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೊಸನಗರದ ತಹಶೀಲ್ದಾರ್ ವಿ.ಎಸ್. ರಾಜೀವ್‌ರವರು ಹೇಳಿದರು.

ಪಟ್ಟಣದ ನೆಹರು ಮೈದಾನದಲ್ಲಿ ದೇಶದಲ್ಲಿ ಕೊರೊನಾ ಇರುವುದರಿಂದ ಅತೀ ಸರಳವಾಗಿ ಗಣರಾಜ್ಯೋತ್ಸವವನ್ನು ಆಚರಿಸಿದ್ದು ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮ ನೆರೆವೇರಿಸಿ ಮಾತನಾಡಿ, ನಾವು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ರಾಷ್ಟ್ರದ ಸಾರ್ವಭೌಮತೆಯೊಂದಿಗೆ ನಮ್ಮದೇ ಆದ ಆಡಳಿತ ವ್ಯವಸ್ಥೆಯನ್ನು ಅಳವಡಿಸಿಕೊಂಡು ಬದುಕುತ್ತಿದ್ದೇವೆ ನಾವೆಲ್ಲರೂ ಭಾರತ ದೇಶದ ಪ್ರಜೆಯಾಗಿರುವುದಕ್ಕೆ ಹೆಮ್ಮೆಯಾಗಿರುತ್ತದೆ ಭಾರತೀಯರು ಶಿಸ್ತು ಸಂಯಮದಿಂದ ಇರಲು ಸಂವಿಧಾನವು ಒಂದು ಕಾರಣವಾಗಿದ್ದು ನಾವು ಶಿಕ್ಷಣ ಕಲಿಯುತ್ತಿರುವುದಕ್ಕೆ ಸಂವಿದಾನದ ಪುಟಗಳೇ ಸಾಕ್ಷಿಯಾಗಿದೆ. ಭಾರತ ದೇಶದಲ್ಲಿ ಸಂವಿಧಾನ ಜಾರಿಗೆ ಬಂದಮೇರೆಗೆ ಈ ದೇಶದ ಪ್ರತಿಯೊಬ್ಬರು ಮೂಲಭೂತ ಸೌಕರ್ಯ ಹಕ್ಕುಗಳಾದ ಸಮಾನತೆ, ಸ್ವಾತಂತ್ರ್ಯ, ಧರ್ಮ ಸಂಸ್ಕೃತಿ ಶಿಕ್ಷಣ ಮತ್ತು ಇತರೆ ಹಕ್ಕುಗಳು ಸಿಕ್ಕಿರುವುದು ಸ್ವತಂತ್ರ ಭಾರತಕ್ಕೊಂದು ಸದೃಢ ಸಂವಿಧಾನ ಕಟ್ಟಿಕೊಟ್ಟಿದ್ದು ಡಾ|| ಬಿ.ಆರ್ ಅಂಬೇಡ್ಕರ್ ನೇತೃತ್ವದ ಅನೇಕ ಹಿರಿಯರ ತಂಡ ಅವರ ಅವಿರತ ಪ್ರಯತ್ನದ ಫಲವಾಗಿ ವಿಶ್ವಕ್ಕೆ ಮಾದರಿಯಾಗಿರುವ ಸಂವಿಧಾನ ರೂಪುಗೊಂಡಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.

ನಮ್ಮ ಗಣರಾಜ್ಯದ ಇಂದಿನ ಅಸ್ತಿತ್ವಕ್ಕೆ ನಮ್ಮ ಸಂವಿಧಾನವೇ ಅವಿಚ್ಛಿನ್ನ ದೇಶ ಪ್ರೆಮ ಮತ್ತು ಅದ್ಬುತ ಅನುಭವೀ ಪಾಂಡಿತ್ಯದಿಂದಾಗಿ ನಮಗೆ ಈ ಸಂವಿಧಾನ ದೊರೆತಿದೆ ವಿಶ್ವದಲ್ಲೀಯೇ ಅತ್ಯಂತ ಸುದೀರ್ಘವಾದ ಅತ್ಯಂತ ಸುಸಂಬದ್ಧವಾದ ಲಿಖಿತ ಸಂವಿಧಾನ ನಮ್ಮದು ನ್ಯಾಯವೆಂದರೆ ಸ್ವಾತಂತ್ರ್ಯ ಸಮಾನತೆ ಮತ್ತು ಸೌಹಾರ್ದ ಈ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಧ್ಯೇಯ ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆಯ ಬೇರುಗಳು ದೃಢವಾಗುವುದು ಇದರಿಂದಲೇ ಎಂಬ ನಂಬಿಕೆ ನಮ್ಮದಾಗಿದೆ ಪ್ರತಿಯೊಬ್ಬರು ಈ ದೇಶದ ಗಣರಾಜ್ಯವನ್ನಾಗಿ ರೂಪಿಸುವಲ್ಲಿ ತಮ್ಮ ತನು-ಮನ-ಧನಗಳಿಂದ ತ್ಯಾಗಗೈದ ಬಲಿದಾನ ನೀಡಿದ ನಾಯಕರುಗಳನ್ನು ಅಸಂಖ್ಯಾತ ಯೋಧರುಗಳನ್ನು ಹಾಗೂ ದೇಶಾಭಿಮಾನಿಗಳನ್ನು ನೆನೆಯುವುದು ಮತ್ತು ಅವರು ಆಶಿಸಿದಂತೆ ರಾಷ್ಟ್ರವನ್ನು ಅಭ್ಯುದಯದ ಪಥದಲ್ಲಿ ಮುನ್ನೆಡೆಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಿದೆ ಎಂದರು.

73ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಾಲಚಂದ್ರಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಗುಲಾಬಿ ಮರಿಯಪ್ಪ, ಉಪಾಧ್ಯಕ್ಷೆ ಕೃಷ್ಣವೇಣಿ, ಗಾಯಿತ್ರಿ ನಾಗರಾಜ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಆರ್.ಪ್ರವೀಣ್, ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ, ವೃತ್ತ ನಿರೀಕ್ಷಕರಾದ ಮಧುಸೂಧನ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ, ಎಸ್.ಐ ರಾಜೇಂದ್ರನಾಯ್ಕ್, ತಾಲ್ಲೂಕು ದೈಹಿಕ ಶಿಕ್ಷಣ ಪರೀವೀಕ್ಷಕರಾದ ಚಂದ್ರಬಾಬು, ನಾಡಹಬ್ಬ ಸಮಿತಿಯ ಸದಸ್ಯರಾದ ಶ್ರೀನಿವಾಸ್ ಕಾಮತ್, ಅಂಜನ್ ಟೆಕ್ಸ್ ಟೈಲ್ಸ್ ಮಾಲೀಕರಾದ ರಾಜಮೂರ್ತಿ, ಶ್ರೀಧರ ಉಡುಪ, ತಾಲ್ಲೂಕು ಕಛೇರಿಯ ಪ್ರಥಮ ದರ್ಜೆ ಗುಮಾಸ್ಥರಾದ ವಿನಯ್ ಎಂ ಆರಾದ್ಯ, ಚಿರಾಗ್, ಶ್ರೀಕಾಂತ್ ಹೆಗ್ಡೆ, ಶಾಹಿನಬಾನು, ಸಿಂಥೀಯ, ವರ್ತಕರ ಸಂಗದ ಅಧ್ಯಕ್ಷರಾದ ವಿಜೇಂದ್ರ ಶೇಟ್, ಅಬಕಾರಿ ಇನ್ಸ್‌ಪೆಕ್ಟರ್, ಉಪನೊಂದಣಾಧಿಕಾರಿಗಳು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here