ಹೊಸನಗರದಲ್ಲಿ 125.6 ಮಿ.ಮೀ ಮಳೆ ; ಅತಿವೃಷ್ಠಿಗೆ ತಾಲ್ಲೂಕು ಆಡಳಿತ ಸಜ್ಜು

0
588

ಹೊಸನಗರ: ತಾಲ್ಲೂಕಿನಲ್ಲಿ ಮೂರು ದಿನಗಳಿಂದ ವಿಪರೀತ ಮಳೆಯಾಗುತ್ತಿದ್ದು ಸೋಮವಾರ ಬೆಳಿಗ್ಗೆಯಿಂದ ಸುಮಾರು 125 ಮಿಲಿಮೀಟರ್‌ನಷ್ಟು ಮಳೆಯಾಗಿದೆ. ಆದರೆ, ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ಯಾವುದೇ ಅನಾಹುತವಾದ ಬಗ್ಗೆ ವರದಿಯಾಗಿಲ್ಲ.

ಹುಲಿಕಲ್‌ನಲ್ಲಿ 200.6 ಮಿಲಿಮೀಟರ್, ಅರಸಾಳುವಿನಲ್ಲಿ 26.4 ಮಿಲಿಮೀಟರ್ ಹಾಗೂ ರಿಪನ್‌ಪೇಟೆಯಲ್ಲಿ 28.4 ಮಿಲಿಲೀಟರ್ ಮಳೆಯಾಗಿದೆ.

ಅತಿವೃಷ್ಟಿಗೆ ತಾಲ್ಲೂಕು ಆಡಳಿತ ಸಜ್ಜು:

ತಾಲ್ಲೂಕಿನಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು ತಾಲ್ಲೂಕಿನಲ್ಲಿ ಅನಾಹುತ ಸಂಭವಿಸಿದ್ದಲ್ಲಿ ತಕ್ಷಣ ತಾಲ್ಲೂಕು ಕಛೇರಿಯ ಗ್ರಾಮ ಲೆಕ್ಕಾದಿಕಾರಿಗಳು ರೆವಿನ್ಯೂ ಇನ್ಸ್‌ಪೆಕ್ಟರ್ ಅಥವಾ ತಾಲ್ಲೂಕು ಕಛೇರಿಯ ಸಿಬ್ಬಂದಿಗಳ ಗಮನಕ್ಕೆ ತರಬೇಕೆಂದು, ತುರ್ತು ಅಗತ್ಯವಿದ್ದಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲು ತಾಲ್ಲೂಕು ಆಡಳಿತ ಸಿದ್ಧವಿದ್ದು ತಾಲ್ಲೂಕಿನಲ್ಲಿ ಎಲ್ಲಿಯಾದರೂ ಅತಿವೃಷ್ಠಿ ಸಮಸ್ಯೆಗೆ ತಾಲ್ಲೂಕು ಆಡಳಿತ ದಿನದ 24ಗಂಟೆಯು ಸಾರ್ವಜನಿಕ ಸೇವೆಗೆ ಸಿದ್ಧವಿದೆ ಎಂದು ತಹಶೀಲ್ದಾರ್ ವಿ.ಎಸ್ ರಾಜೀವ್‌ರವರು ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here