23.2 C
Shimoga
Sunday, November 27, 2022

ಹೊಸನಗರದಲ್ಲೊಂದು ಹೃದಯವಿದ್ರಾವಕ ಘಟನೆ ; ವಯೋವೃದ್ದ ತಾಯಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದ ಮಗ ಹೃದಯಾಘಾತದಿಂದ ಸಾವು !

ಹೊಸನಗರ: ವಯೋವೃದ್ದ ತಾಯಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದ ಮಗ ತೀವ್ರವಾದ ಹೃದಯಾಘಾತದಿಂದ ಮೃತಪಟ್ಟ ಘಟನೆ ತಾಲೂಕಿನ ಸುಳಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಲ್ಲುಸಾಲೆ ಎಂಬಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಹಲ್ಲುಸಾಲೆ ಗ್ರಾಮದ ಕೃಷಿಕ ತಿಮ್ಮಪ್ಪಗೌಡ (58)
ತನ್ನ ವಯೋವೃದ್ದ ತಾಯಿ ಚಿನ್ನಮ್ಮ (78) ಶನಿವಾರ ದೈವಾಧೀನರಾದ ಹಿನ್ನಲೆಯಲ್ಲಿ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದ 30 ನಿಮಿಷದೊಳಗೆ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.


ಮೃತ ತಿಮ್ಮಪ್ಪ ಅವರಿಗೆ ಪತ್ನಿ, ಓರ್ವ ಪುತ್ರ ಇದ್ದಾರೆ. ಈ ಹೃದಯವಿದ್ರಾವಕ ಘಟನೆಯಿಂದ ಇಡೀ ಗ್ರಾಮವೇ ಸ್ಥಬ್ದವಾಗಿತ್ತು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!