23.2 C
Shimoga
Sunday, November 27, 2022

ಹೊಸನಗರದ ಅತ್ತಿಕೊಡಿಗೆ ಸಭಾಭವನದ ಆವರಣದಲ್ಲಿ ನ. 6ರಂದು “ಲೀಕ್ ಔಟ್” ನಾಟಕ ; ಕೆ. ಇಲಿಯಾಸ್


ಹೊಸನಗರ: ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಅತ್ತಿಕೊಡಿಗೆ ಸಭಾಭವನದಲ್ಲಿ ಭಾನುವಾರ ಸಂಜೆ 5:30ಕ್ಕೆ ಅಕ್ಷತಾ ಪಂಡಾವಪುರ ಅವರ ಭಾವನೆಯ 60ನೇ ಪ್ರಯೋಗವಾದ “ಲೀಕ್ ಔಟ್” ನಾಟಕವನ್ನು ಏರ್ಪಡಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಕೆ ಇಲಿಯಾಸ್‌ರವರು ತಿಳಿಸಿದ್ದಾರೆ.


ಅವರು ಸುದ್ಧಿಗಾರರೊಂದಿಗೆ ಮಾತನಾಡಿ, ಇವರು ಬಿಗ್‌ಬಾಸ್ 6ನೇ ಆವೃತ್ತಿಯಲ್ಲಿ ಭಾಗವಹಿಸಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿರುವ ಅಕ್ಷತಾರವರು ನೇರ ಮನಸ್ಸಿನ ದಿಟ್ಟ ಹುಡುಗಿಯಾಗಿದ್ದು ಅನೇಕ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಇವರು “ಪಲ್ಲಟ” ಚಿತ್ರದ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. “ಪಿಂಕಿಎಲ್ಲಿ?” ಚಿತ್ರದ ಅಭಿನಯಕ್ಕಾಗಿ ಅಂತರಾಷ್ಟ್ರೀಯ ಮಟ್ಟದ ಪ್ರಶಂಸೆ ಮತ್ತು ಪ್ರಶಸ್ತಿ ಪಡೆದವರಾಗಿದ್ದು ಭಾನುವಾರ ಸಂಜೆ 5:30ಕ್ಕೆ ಹೊಸನಗರ ತಾಲ್ಲೂಕಿನ ಎಲ್ಲ ನಾಟಕ ಅಭಿಮಾನಿಗಳು ಹಾಗೂ ಸಾರ್ವಜನಿಕರು ಆಗಮಿಸಿ ಇವರ ಕಲೆಗೆ ಪ್ರೋತ್ಸಾಹ ನೀಡಬೇಕೆಂದು ಮತ್ತು ಈ ನಾಟಕದ ಪ್ರವೇಶ ಉಚಿತವಾಗಿರುತ್ತದೆ ಎಂದು ತಿಳಿಸಿದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!