ಹೊಸನಗರದ ಆರ್ಯ ಈಡಿಗ ಮಹಿಳಾ ಘಟಕದಿಂದ ನಟ ಪುನೀತ್ ರಾಜ್‌ಕುಮಾರ್ ರವರಿಗೆ ಶ್ರದ್ಧಾಂಜಲಿ

0
651

ಹೊಸನಗರ : ಕೋಟ್ಯಂತರ ಜನರ ಹೃದಯದಲ್ಲಿ ಸ್ಥಾನಗಳಿಸಿದ್ದ ಕನ್ನಡ ಚಲನಚಿತ್ರ ರಂಗದ ನಟ ಎಲ್ಲರ ಮೆಚ್ಚಿನ ಅಪ್ಪು ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ಮರಣ ಕನ್ನಡದ ಜನರನ್ನಲ್ಲದೆ ವಿಶ್ವದಾದ್ಯಂತ ಅಭಿಮಾನಿಗಳ ಭಾವನೆಗಳಿಗೆ ಅಂತ್ಯ ಹಾಡಿರುವುದು ತುಂಬಲಾರದ ನಷ್ಟವಾಗಿದೆ ಎಂದು ಹೊಸನಗರ ತಾಲೂಕು ಆರ್ಯ ಈಡಿಗ ಮಹಿಳಾ ಘಟಕ ಅಭಿಪ್ರಾಯಿಸಿದೆ.

ತಾಲೂಕು ಆರ್ಯ ಈಡಿಗ ಮಹಿಳಾ ಘಟಕದವರು ಇಂದು ಆರ್ಯ ಈಡಿಗ ಸಭಾಭವನದಲ್ಲಿ ಸಭೆ ಸೇರಿ ಸರಳತೆ ಮತ್ತು ಆದರ್ಶ ಬದುಕಿನ ರೂವಾರಿಯಾಗಿದ್ದ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಮರಣ ಯಾರು ಭರಿಸಲಾಗದ ನಷ್ಟವಾಗಿದೆ ಅವರ ವಿನಯತೆ ಅವರನ್ನು ಮೇರು ನಟನಾಗಿ ಬಿಂಬಿಸಿದ್ದು ಪ್ರತಿಭೆ ನಟನಾ ಕೌಶಲ್ಯದಿಂದ ಉತ್ತುಂಗಕ್ಕೇರಿದ ಅವರ ಸಾಧನೆಗಳಿಗೆ ಅವರೇ ಸರಿಸಾಟಿಯಾಗಿದ್ದರು ಎಂದರು.

ಈ ಶ್ರದ್ಧಾಂಜಲಿ ಸಭೆಯಲ್ಲಿ ತಾಲೂಕು ಆರ್ಯ ಈಡಿಗ ಮಹಿಳಾ ಘಟಕದ ವನಜಾಕ್ಷಿ, ತಾರಾ ಸುರೇಶ್, ಶಶಿ ಅನಸೂಯಾ ವೀಣಾ ಧನಲಕ್ಷ್ಮಿ ವಿಶಾಲ ರಮ್ಯ ವಸಂತಿ ಪ್ರಮೀಳಾ ಮೊದಲಾದವರು ಪಾಲ್ಗೊಂಡು ಮಾತನಾಡಿ ನಮ್ಮನ್ನಗಲಿದ ಪುನೀತ್ ರಾಜ್‍ಕುಮಾರ್ ಅವರಿಗೆ ಅಶ್ರುತರ್ಪಣ ಸಲ್ಲಿಸಿದರು.

ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಕೂರಂಬಳ್ಳಿ ಷಣ್ಮುಖಪ್ಪ, ಮಾಜಿ ಸದಸ್ಯ ಎರಗಿ ಉಮೇಶ್, ಕೆ.ಎಲ್ ತಿಮ್ಮಪ್ಪ, ಕೆ ಸುರೇಶ್ ಕುಮಾರ್, ಕೆರೆಕೊಪ್ಪ ಟೀಕಪ್ಪ ಮೊದಲಾದವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here