ಹೊಸನಗರ: ಇಲ್ಲಿನ ಮೆಸ್ಕಾಂ ಉಪವಿಭಾಗದಲ್ಲಿ ಮೇ. 20 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಎಫ್ 1 ಕಾಣಿಕಾಪುರ ಫೀಡರಿಗೆ ಹೆಚ್ಚುವರಿ ಫೀಡರ್ ನಿರ್ಮಿಸುವ ಕಾಮಗಾರಿ ಸಲುವಾಗಿ ಎಫ್ 4 ಕಾಳಿಕಾಪುರ ಫೀಡರ್ ವ್ಯಾಪ್ತಿಗೆ ಬರುವ ಜೇನಿ, ಮಾರುತೀಪುರ, ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ಮತ್ತು ಪಟ್ಟಣ ವ್ಯಾಪ್ತಿಯ ಭಾಗಶಃ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಆದ್ದರಿಂದ ಗ್ರಾಹಕರು ಸಹಕರಿಸುವಂತೆ ಹೊಸನಗರ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
Related