ಹೊಸನಗರದ ಕ್ಷೇತ್ರ ಸಂಪನ್ಮೂಲ ಕಛೇರಿಯಲ್ಲಿ ವಿಶ್ರಾಂತ ಬಡ್ತಿ ಮುಖ್ಯ ಶಿಕ್ಷಕರಿಗೆ ಹೃದಯಸ್ಪರ್ಶಿ ಅಭಿನಂದನೆ

0
747

ಹೊಸನಗರ : ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀದೇತರ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಹೊಸನಗರ ತಾಲೂಕು ಘಟಕದವರು ಬಡ್ತಿ ಮುಖ್ಯ ಶಿಕ್ಷಕರಾಗಿ ತಾಲೂಕಿನ ವಿವಿಧೆಡೆ ಉತ್ತಮ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಯಡೂರು ಶಾಲೆಯ ಉದಯ ಭಾರತಿ, ಬ್ರಹ್ಮೇಶ್ವರ ಶಾಲೆಯ ಹರೀಶ್ ಭಟ್, ಅರಸಾಳು ಶಾಲೆಯ ಚಂದ್ರಶೇಖರ್, ನಿಟ್ಟೂರು ಶಾಲೆಯ ಮಂಜುನಾಥ್, ಜೇನಿ ಶಾಲೆಯ ಗುರುಶಾಂತಪ್ಪ ಅವರುಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ ಅವರು ಶಾಲು ಹೊದಿಸಿ ಅಭಿನಂದನ ಪತ್ರ ನೀಡಿ ಗೌರವಿಸಿ ಅವರುಗಳ ಸೇವೆಯನ್ನು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಮಾಜಿ ಶಿಕ್ಷಣ ಸಚಿವ ಮಲೆನಾಡ ಗಾಂಧಿ ಹೆಚ್ ಜಿ ಗೋವಿಂದೇಗೌಡ ಪ್ರಶಸ್ತಿ ವಿಜೇತ ಬಿದರಹಳ್ಳಿ ಶಾಲೆಯ ಮುಖ್ಯೋಪಾಧ್ಯಾಯ ಬಿ. ದೇವೇಂದ್ರಪ್ಪ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.

ಹೊಸನಗರ ತಾಲೂಕು ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರು ಮಾವಿನಕೊಪ್ಪ ಶಾಲೆಯ ಮುಖ್ಯೋಪಾಧ್ಯಾಯ ಕುಬೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದ ಸಮಾರಂಭವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ ಉದ್ಘಾಟಿಸಿದರು.

ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಹಿರೇಮಠ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕರಿಬಸಪ್ಪ ಶಿವಮೊಗ್ಗ ತಾಲೂಕು ಸಂಘದ ಅಧ್ಯಕ್ಷ ಚೆನ್ನಮಲ್ಲಪ್ಪ ಉಪಾಧ್ಯಕ್ಷೆ ವಿಜಯ, ಕಾರ್ಯದರ್ಶಿ ಮಂಜನಾಯಕ್, ರಾಜ್ಯ ಸಂಘಟನ ಕಾರ್ಯದರ್ಶಿ ಜಯಪ್ಪ, ದೈಹಿಕ ಶಿಕ್ಷಣ ಪರಿವೀಕ್ಷಕ ಚಂದ್ರಬಾಬು, ತಾಲೂಕು ಸಂಘದ ಉಪಾಧ್ಯಕ್ಷೆ ಲಿಲ್ಲಿ ಡಿಸೋಜಾ, ಖಜಾಂಚಿ ಕೆ ಗಣೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಮನಸ್ತಾಪ ಗುಂಪುಗಾರಿಕೆ ಸಂಘಟನೆಗಳಿಗೆ ಅಡ್ಡಿ ಆಗುವುದರಿಂದ ಇದು ಬಡ್ತಿ ಪ್ರಕ್ರಿಯೆಗೆ ಆತಂಕ ಉಂಟು ಮಾಡಲಿದೆ ಆದರಿಂದ ಸಂಘಟಿತರಾಗಿ ಒಮ್ಮತದಿಂದ ಕರ್ತವ್ಯ ವೆಸಗಬೇಕೆಂದು ಕರೆ ನೀಡಿದರು.

ಕಾರ್ಯದರ್ಶಿ ದುರ್ಗಪ್ಪ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕುಬೇಂದ್ರಪ್ಪ ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here