23.2 C
Shimoga
Sunday, November 27, 2022

ಹೊಸನಗರದ ಗ್ರಂಥಾಲಯದಲ್ಲಿ 50 ಸಾವಿರಕ್ಕಿಂತಲೂ ಹೆಚ್ಚು ಪುಸ್ತಕಗಳಿದ್ದರೂ ಓದುಗರ ಸಂಖ್ಯೆ ವಿರಳ ; ಹಾಲಗದ್ದೆ ಉಮೇಶ್


ಹೊಸನಗರ: ಪಟ್ಟಣದ ಗ್ರಂಥಾಲಯ ಶಾಖೆಯಲ್ಲಿ ಈ ಹಿಂದೆ ಗ್ರಂಥಾಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅಶೋಕ್ ಗುಳೆದ್‌ರವರ ಪರಿಶ್ರಮದಿಂದ ಸುಮಾರು 50 ಸಾವಿರಕ್ಕಿಂತೂ ಹೆಚ್ಚು ಪುಸ್ತಕಗಳು ಹಾಗೂ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್‌ರವರ ಪರಿಶ್ರಮದಲ್ಲಿ ನೂತನ ಕಟ್ಟಡಗಳನ್ನು ನಿರ್ಮಿಸುವುದರ ಜೊತೆಗೆ ಗ್ರಂಥಾಲಯಕ್ಕೆ ಇರುವಂತಹ ಶಿಸ್ತುಗಳಿದ್ದರೂ ಇತ್ತೀಚಿನ ದಿನಗಳಲ್ಲಿ ಗ್ರಂಥಾಲಯಕ್ಕೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಹಾಲಗದ್ದೆ ಉಮೇಶ್‌ರವರು ಹೇಳಿದರು.

ಪಟ್ಟಣದ ಗ್ರಂಥಾಲಯ ಶಾಖೆಯಲ್ಲಿ ನವೆಂಬರ್ 14ರಿಂದ 20ರವರೆಗೆ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಪುಸ್ತಕಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ನಾಡಿನ ಇತಿಹಾಸ ಹಾಗೂ ದಾರ್ಶನಿಕರ ಜೀವನಚರಿತ್ರೆಗಳನ್ನು ಕುರಿತ ಜ್ಞಾನ ಭಂಡಾರಗಳನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಗ್ರಂಥಾಲಯಗಳಲ್ಲಿ ನಿರಂತರವಾಗಿ ಅಭ್ಯಾಸ ಮಾಡಿ ಮುಂದಿನ ಜನಾಂಗಕ್ಕೆ ದಾರಿ ದೀಪ ಮಾಡಿಕೊಡುವುದರಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಓದಿನಲ್ಲಿ ಆಸಕ್ತಿಯಿರುವವರಿಗೆ ನಿಜವಾದ ಆಸ್ತಿ ಎಂದರೆ ಜ್ಞಾನಭಂಡಾರ ಹಾಗೂ ಶಿಕ್ಷಣ ಅವುಗಳನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಓದಿನ ಆಸಕ್ತಿ ಹೊಂದಿರುವವರು ತನ್ನೊಳಗೆಯೆ ಗ್ರಂಥಾಲಯವನ್ನು ಅಡಗಿಸಿಕೊಂಡಿರುತ್ತಾರೆ ಆದ್ದರಿಂದ ಗ್ರಂಥಾಲಯಗಳಿಗೆ ಓದುಗರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ಪುಸ್ತಕ ಭಂಡಾರದ ಸವಿಯನ್ನು ತಾನು ಉಂಡು ಇನ್ನೊಬ್ಬರಿಗೆ ಉಣ ಬಡಿಸಲಿ ಎಂದರು.


ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಪತ್ರ ಬರಹಗಾರ ಎನ್ ಶ್ರೀಧರ ಉಡುಪ ಹಾಗೂ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷರಾದ ಎನ್ ದತ್ತಾತ್ರೇಯ ಉಡುಪರವರು ಮಾತನಾಡಿ, ನಾಡಿನ ಹೆಸರಾಂತ ಕವಿಗಳು ಸಾಹಿತಿಗಳು ವಿಶಷ್ಟವಾಗಿ ಪುಸ್ತಕಗಳನ್ನು ರಚನೆ ಮಾಡಿದ್ದಾರೆ. ಅವುಗಳ ಅಧ್ಯಯನವನ್ನು ಪ್ರತಿಯೊಬ್ಬರು ಕರಗತ ಮಾಡಿಕೊಳ್ಳಬೇಕು ಎಂದು ಓದಿನ ಹವ್ಯಾಸ ನೂರಾರು ಜಾತಿಗಳನ್ನು ಹೊಂದಿರುವ ಭಾರತ ಭಾವೈಕ್ಯತಾ ದೇಶ ಇಲ್ಲಿ ಸರ್ವರಿಗೂ ಸಮಾನವಾದ ಹಕ್ಕಿದೆ. ಸಂವಿಧಾನದ ಆಶಯದೊಂದಿಗೆ ಇಂದು ದೇಶ ನಡೆಯುತ್ತಿದೆ ಅದೇ ರೀತಿಯಲ್ಲಿ ಗ್ರಂಥಾಲಯವು ಸಹ ಜಾತಿ-ಮತ ಬೇಧವಿಲ್ಲದೆ ಆಗಮಿಸುವ ದೊಡ್ಡ ಜ್ಞಾನ ಭಂಡಾರ ಎಂದು ನಾವು ಸುಮಾರು 20ವರ್ಷಗಳಿಂದ ಹೊಸನಗರಕ್ಕೆ ಬರುವಂಥಹ ಕನ್ನಡ ದಿನ ಪತ್ರಿಕೆಗಳನ್ನು ಸ್ಥಳೀಯ ದಿನ ಪತ್ರಿಕೆಗಳನ್ನು ಹಾಗೂ ಕನ್ನಡ ಪುಸ್ತಕಗಳನ್ನು ಪ್ರತಿ ತಿಂಗಳು ಹಣ ನೀಡಿ ಮನೆಗೆ ತರಿಸಿ ಓದುತ್ತಿದ್ದೇವೆ ಇದರಿಂದ ಪತ್ರಿಕೆಯು ಉಳಿಯುತ್ತದೆ ಹಾಗು ಸ್ಥಳೀಯ ಏಜೆಂಟರ ಸಂಸಾರವೂ ಉಳಿಯುತ್ತದೆ.

ಸಾಮಾನ್ಯವಾಗಿ ಜನರು ಬೆಳಿಗ್ಗೆ 6ಗಂಟೆಗೆ ಪ್ರತಿಕೆಯ ಏಜೆಂಟರು ಮನೆ ಬಾಗಿಲಿಗೆ ಪತ್ರಿಕೆಯನ್ನು ತಂದು ಹಾಕುತ್ತಾರೆ ಆದರೆ ಪತ್ರಿಕೆಯ ತಿಂಗಳ ಚಂದಾಹಣ ಪಡೆಯಲು ಸಾತಾಯಿಸುತ್ತಾರೆ ಇದು ಸರಿಯಲ್ಲ ನಮಗೆ ದಿನನಿತ್ಯ ಓದಲು ಪತ್ರಿಕೆ ಹೇಗೆ ಬೇಕೋ ಅದೇ ರೀತಿ ಪತ್ರಿಕೆ ಚಂದಾ ಹಣವನ್ನು ನೀಡಿದರೆ ಪತ್ರಿಕೆ ಬೆಳೆಯುತ್ತದೆ. ಏಜೆಂಟರು ಬದುಕಲು ಸಹಾಯವಾಗುತ್ತದೆ ಎಂದರು.


ಈ ಸಂದರ್ಭದಲ್ಲಿ ನಿವೃತ್ತ ಕೃಷಿ ಇಲಾಖೆಯ ಸಹಾಯಕ ಕಾರ್ಯದರ್ಶಿ ಮಹಾಬಲಗೌಡ, ಗ್ರಂಥಾಲಯದ ನೌಕರರಾದ ಪ್ರೀಯಲತಾ, ರೂಪ, ಗೌರಮ್ಮ ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!