ಹೊಸನಗರದ ಜಿಪಂ ಇಂಜೀನಿಯರ್ ಕಛೇರಿಯ ಎದುರಿನ ನಾಗಬನದಲ್ಲಿ 30ನೇ ವರ್ಷದ ವಾರ್ಷಿಕೋತ್ಸವ

0
416

ಹೊಸನಗರ: ಇಲ್ಲಿನ ಹೊಸನಗರ-ಕುಂದಾಪುರ ರಸ್ತೆಯ ಜಿಲ್ಲಾ ಪಂಚಾಯಿತಿ ಇಂಜೀನಿಯರ್ ಕಛೇರಿಯ ಎದುರಿನ ನಾಗಬನದಲ್ಲಿ ದಿನಾಂಕ: 5.04.2021ನೇ ಸೋಮವಾರ ನಾಗಬನದ 30ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಸರಳ ರೀತಿಯಲ್ಲಿ ಏರ್ಪಡಿಸಲಾಗಿದೆ ಎಂದು ನಾಗಬನದ ಕಮಿಟಿಯ ಗೌರವಾಧ್ಯಕ್ಷರಾದ ಎಂ.ಎನ್ ಸುಧಾಕರ್ ಅಧ್ಯಕ್ಷರಾದ ಗಣಪತಿಯವರು ತಿಳಿಸಿದರು.

ಅವರು ನಾಗಬನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ ಕೊರೊನಾದ 2ನೇ ಅಲೆ ಅಬ್ಬರಿಸಿದ್ದು ನಾವು ಅದ್ಧೂರಿಯಾಗಿ ವಾರ್ಷಿಕೋತ್ಸವ ಆಚರಿಸಲು ಈ ಹಿಂದೆ ತಿರ್ಮಾನಿಸಿದ್ದು ಆದರೆ ಕೊರೊನಾ ದೇಶದಲ್ಲಿ ಹೆಚ್ಚಿರುವುದರಿಂದ ಈ ವರ್ಷ ಸರಳ ರೀತಿಯಲ್ಲಿ ಆಚರಿಸುವುದಾಗಿ ತೀರ್ಮಾನಿಸಿದ್ದು ದೇಶದಲ್ಲಿ ಕೊರೊನಾದ ಅಲೆ ಕಡಿಮೆಯಾದ ನಂತರ ಅದ್ಧೂರಿಯಾಗಿ ಕಾರ್ಯಕ್ರಮವನ್ನು ಆಚರಿಸಲಾಗುವುದು ಸೋಮವಾರ ಬೆಳಿಗ್ಗೆ ನಾಗಬನದಲ್ಲಿ ನಾಗದೇವರಿಗೆ ವಿಶೇಷ ಪೂಜಾ ಕಾರ್ಯಕ್ರಮ ಹಣ್ಣು-ಕಾಯಿ ನಂತರ ಮಹಾಮಂಗಾಳಾರತಿ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಯಲಿದೆ. ಪ್ರತಿ ವರ್ಷದಂತೆ ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರವನ್ನು ನಡೆಯುತ್ತಿದ್ದು ಆದರೆ ಈ ಬಾರಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ಹೊಸನಗರದ ಸಾರ್ವಜನಿಕರು ಸಹಕರಿಸಿ ಈ ವರ್ಷ ಸರಳವಾಗಿ ಆಚರಿಸುವುದಕ್ಕೆ ಬೇಸರಿಸದೇ ಮುಂದಿನ ದಿನದಲ್ಲಿ ಅದ್ಧೂರಿಯಾಗಿ ಆಚರಿಸಲು ಸಹಕರಿಸಬೇಕೆಂದು ಈ ಮೂಲಕ ಕೇಳಿಕೊಂಡರು.

ಈ ಸಂದರ್ಭದಲ್ಲಿ ದೇವಸ್ಥಾನ ಕಮಿಟಿಯ ಸದಸ್ಯರಾದ ಎಂ.ಎನ್.ಸುಧಾಕರ್, ಕೃಷ್ಣಮೂರ್ತಿ, ಪ್ರಕಾಶ್, ಈಶ್ವರ ಹಾಗೂ ದೇವಸ್ಥಾನ ಕಮಿಟಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

ವರದಿ: ಹೆಚ್.ಎಸ್.ನಾಗರಾಜ್
ಜಾಹಿರಾತು

LEAVE A REPLY

Please enter your comment!
Please enter your name here