ಹೊಸನಗರದ ದೀವರ ಸಂಘದ ಎಲ್ಲಾ ಆಸ್ತಿಯನ್ನು ನಾರಾಯಣಗುರು ಮಠಕ್ಕೆ ನೀಡಲಿ ಇಲ್ಲವಾದರೆ ಅಧ್ಯಕ್ಷ ಬಿ.ಪಿ ರಾಮಚಂದ್ರ ರಾಜೀನಾಮೆ ನೀಡಲಿ ; ಮಾಜಿ ಶಾಸಕ ಬಿ.ಸ್ವಾಮಿರಾವ್ ಆಗ್ರಹ

0
1235

ಹೊಸನಗರ: 1925ರಲ್ಲಿ ಹೊಸನಗರದಲ್ಲಿ ದೀವರ ಸಂಘ ಸ್ಥಾಪಿಸಿ ಪಟ್ಟಣ ಪಂಚಾಯಿತಿಯಿಂದ ಪಾಯಪ್ಪ ಶೆಟ್ಟರ ಹೆಚ್ಚಿನ ಶ್ರಮದಿಂದ ಬಸ್ ಸ್ಟ್ಯಾಂಡ್ ಎದುರಿನಲ್ಲಿ 100×50 ಅಡಿಯ ಜಾಗವನ್ನು ಮಂಜೂರಾತಿ ಮಾಡಿಸಿಕೊಂಡು ನಮ್ಮ ಹಿರಿಯ ತಲೆಮಾರಿನವರ ಸಹಕಾರದಿಂದ 20 ವಾಣಿಜ್ಯ ಮಳಿಗೆ ಹಾಗೂ 20 ದೀವರ ವಿದ್ಯಾರ್ಥಿನಿಲಯವನ್ನು ಸ್ಥಾಪಿಸುವುದರ ಜೊತೆಗೆ ಈ ಸಂಘದ ಏಳಿಗೆಗಾಗಿ ಸಾಕಷ್ಟು ಜನ ಪರ ಜಾತಿಯವರು ಸಹಾಯ ಮಾಡಿದ್ದು ಆದರೆ ಈಗ ಇರುವ ಹೊಸನಗರ ತಾಲ್ಲೂಕು ದೀವರ ಅಧ್ಯಕ್ಷರಾದ ಬಿ.ಪಿ ರಾಮಚಂದ್ರರವರು ಯಾವುದೇ ಲೆಕ್ಕಪತ್ರಗಳನ್ನು ನೀಡದೆ 15 ವರ್ಷಗಳಿಂದ ವಾರ್ಷಿಕ ಸಭೆಯನ್ನು ನಡೆಸದ್ ಇರುವುದು ಹಾಗೂ ದೀವರ ಸಂಘದ ಏಳಿಗೆಗಾಗಿ ಹಗಲಿರುಳು ದುಡಿದ ನನಗೆ ಅವಮಾನ ಪಡಿಸುತ್ತಿದ್ದು ಹೊಸನಗರದ ದೀವರ ಸಂಘದ ಎಲ್ಲ ಆಸ್ತಿಯನ್ನು ನಾರಾಯಣಗುರು ಮಠಕ್ಕೆ ನೀಡಲಿ ಎಂದು ಆಗ್ರಹಿಸಿದ್ದಾರೆ.

ಹೊಸನಗರದ ಪ್ರವಾಸಿ ಮಂದಿರದಲ್ಲಿಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದು ನನಗೆ 92ವರ್ಷದ ಹುಟ್ಟುಹಬ್ಬದ ದಿನವಾಗಿದ್ದು ಆದರೆ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ನನಗೆ ಈಗ ಇರುವ ದೀವರ ಸಂಘದವರು ತುಂಬಾ ಅವಮಾನ ಮಾಡುತ್ತಿದ್ದಾರೆ ಈ ದೀವರ ಸಂಘ ಕಟ್ಟಲು ಹಾಗೂ ಈ ವಾಣಿಜ್ಯ ಮಳಿಗೆ ನಿರ್ಮಿಸಲು ನಮ್ಮ ತಂದೆಯಾವರಾದ ಭೈರನಾಯ್ಕರು ಸ್ವಾತಂತ್ರ್ಯ ಪೂರ್ವದಲ್ಲಿ ಎಂ.ಆರ್.ಎ ಆಗಿದ್ದು ಹೊಸನಗರ ತಾಲ್ಲೂಕಿನಲ್ಲಿ ದೀವರ ಜನಾಂಗವು ಬಹುಸಂಖ್ಯಾತರಾಗಿದ್ದು ಆದರೆ ಈ ಜಾತಿ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸಮಾಜದಲ್ಲಿ ಅತಿ ಹಿಂದುಳಿದ ವರ್ಗವಾಗಿದ್ದು ಹಿಂದುಳಿದ ತಾಲ್ಲೂಕು ಸಹ ಆಗಿತ್ತು. ನಮ್ಮ ತಂದೆಯವರು ಕುಟುಂಬದ ಮುಖಂಡರುಗಳಾದ ಮಂಡಾಣಿ ದುಗ್ಗನಾಯ್ಕ, ಎರಗಿ ಗಿಡ್ಡನಾಯ್ಕ, ಕಾಪಿ ಬಿಳಿನಾಯ್ಕ, ಗುಡೋಡಿ ಗುಂಡನಾಯ್ಕ ಬಿದರಹಳ್ಳಿ ಸಿದ್ದನಾಯ್ಕ, ಕೊಡಸೆ ಕರಿನಾಯ್ಕ, ಗುಡ್ಡೆಕೊಪ್ಪದ ಬೂಮ್ಮನಾಯ್ಕ, ಹಾರೇಕೊಪ್ಪ ಹೊನ್ನೆನಾಯ್ಕ ಮುಂತಾದವರು ಸೇರಿ ಈ ಸಂಘವನ್ನು ಸ್ಥಾಪಿಸಲಾಗಿದ್ದು ನಾನು ಶಾಸಕರಾದ ಮೇಲೆ ಸಮುದಾಯದ ಋಣ ತೀರಿಸಲು 40 ಕೊಠಡಿಗಳುಳ್ಳ ವಾಣಿಜ್ಯ ಸಂಕೀರ್ಣವನ್ನು ನನ್ನ ಸ್ವಂತ ದುಡಿಮೆ ನನ್ನ ಕೃಷಿ ಆದಾಯವನ್ನು ಹಾಕಿ ನನ್ನ ಮನೆಯಲ್ಲಿರುವ ನಾಟಾ ಉಪಯೋಗಿಸಿ ಹೊಸನಗರದ ಮುಖಂಡರಾದ ಕಮಲಾಕರ, ರತ್ನಾಕರ್ ಶೆಟ್ಟಿ, ಮಹಾಬಲರಾವ್, ಮಹಮದ್ ಸಾಬ್, ಎಂ.ಡಿ ಉಸ್ಮಾನ್ ದುಗ್ಗೋಜಿರಾವ್ ಮುಂತಾದವರ ಸಹಕಾರದೊಂದಿಗೆ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ತಿಂಗಳಿಗೆ ಕನಿಷ್ಟ ಅಂದು 50ಸಾವಿರ ಬಾಡಿಗೆ ಸಂಘದ ಏಳಿಗೆಗಾಗಿ ಬಾಡಿಗೆ ಬರುವಂತೆ ಮಾಡಿದ್ದು ದೀವರ ಸಂಘದ ಕೆಲವು ಮುಖಂಡರು ಸ್ವಾಮಿರಾವ್ ಹಣ ಹೊಡೆದುಕೊಂಡು ತಿನ್ನುತ್ತಿದ್ದಾರೆ ಎಂದು ನನ್ನ ಮೇಲೆ ಅಪವಾದ ಹಾಕುವುದರ ಜೊತೆಗೆ ಈ ವಾಣಿಜ್ಯ ಮಳಿಗೆಯನ್ನು ತನ್ನ ಹೆಂಡತಿಯ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಅಪಪ್ರಚಾರ ಮಾಡಿದ್ದಾರೆ ಅಂದು ಈ ಸಂಘದ ಅಧ್ಯಕ್ಷನಾಗಿ ಸಾಕಷ್ಟು ಸಂಘದ ಏಳಿಗೆಗಾಗಿ ಜನಪರ ಕೆಲಸ ಮಾಡುವುದರ ಜೊತೆಗೆ ಸಂಘಕ್ಕೆ ಸಾಕಷ್ಟು ಆದಾಯ ಬರುವಂತೆ ಮಾಡಿ 2007ರಲ್ಲಿ ನಾನೇ ನನ್ನ ಸ್ವಂತ ಇಚ್ಛೆಯಿಂದ ದೀವರ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿವುದರ ಜೊತೆಗೆ ಇಂದಿನ ಶಾಸಕರಾದ ಹರತಾಳು ಹಾಲಪ್ಪನವರ ಮುಖಂತರವೇ ನಾನೇ ಸಂಘದ ಅಧ್ಯಕ್ಷರನ್ನಾಗಿ ಬಿ.ಪಿ ರಾಮಚಂದ್ರರವರನ್ನು ಹಾಗೂ 15ಜನ ಸದಸ್ಯರನ್ನು ಆಯ್ಕೆ ಮಾಡಿ ಸಂಘದ ಏಳಿಗೆಯ ದೃಷ್ಠಿಯಿಂದ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿಕೊಂಡು ಹೋಗೋಣ ಎಂದಿದ್ದು ಆದರೆ ಅಂದು ಆಯ್ಕೆ ಮಾಡಿದ ಕೆಲವು ಸದಸ್ಯರನ್ನು ಹೊರಹಾಕಿ ಇವರಿಗೆ ಬೇಕಾಗಿರುವ ಸದಸ್ಯರನ್ನು ಮಾಡಿಕೊಂಡಿದ್ದಾರೆ.

ನಾನು ಅಧ್ಯಕ್ಷ ಸ್ತಾನದಿಂದ ಇಳಿದು 15 ವರ್ಷಗಳು ಕಳೆದಿದೆ ಆದರೆ ಇಲ್ಲಿಯವರೆವಿಗೆ ವಾರ್ಷಿಕ ಮಹಾಸಭೆಯನ್ನು ಕರೆದಿಲ್ಲ ಇವರಿಗೆ ಬೇಕಾದವರ ಹತ್ತಿರ ವಾರ್ಷಿಕ ಮಹಾಸಭೆಯ ಸಹಿ ಹಾಕಿಸಿಕೊಳ್ಳುತ್ತಿದ್ದಾರೆ ನನ್ನ ಅಧಿಕಾರದ ಅವಧಿಯಲ್ಲಿ ತಿಂಗಳಿಗೆ 50ಸಾವಿರ ಬಾಡಿಗೆ ಬರುತ್ತಿತ್ತು ಅಂದರೆ ವರ್ಷಕ್ಕೆ ಆರು ಲಕ್ಷವಾಗುತ್ತಿತ್ತು ಈಗ ಮಳಿಗೆಗಳ ಬಾಡಿಗೆ ಜಾಸ್ತಿ ಮಾಡಿರುವುದರಿಂದ ಇನ್ನೂ ಹೆಚ್ಚಿನ ಅನುದಾನ ಸಂಘಕ್ಕೆ ಬರುತ್ತಿದ್ದು 15ವರ್ಷಕ್ಕೆ ಸುಮಾರು 1ಕೋಟಿಯಷ್ಟು ಹಣದ ಲೆಕ್ಕ ನೀಡುತ್ತಿಲ್ಲ ನಾನು ಸೂಚಿಸಿದ ಸಮಿತಿಯ ಪದಾಧಿಕಾರಿಗಳು ಹಾಗೂ ಆಂತರಿಕ ಲೆಕ್ಕ ಪರಿಶೋಧನೆಗೆ ಯಾವುದೇ ದಾಖಲೆಗಳನ್ನು ಲೆಕ್ಕ ಪರಿಶೋಧನೆಗೆ ನೀಡದೇ ಇರುವುದು ಸಂಸ್ಥೆಯಲ್ಲಿ ಭ್ರಷ್ಠಾಚಾರದಿಂದ ಕೊಡಿದೆ ಎನ್ನುವುದಕ್ಕೆ ನೈಜ ಉದಾಹರಣೆಯಾಗಿದೆ.

ಈ ಬಗ್ಗೆ ಸಂಘದ ಅಧ್ಯಕ್ಷರಾದ ಬಿ.ಪಿ.ರಾಮಚಂದ್ರರವರು ರಾಜೀನಾಮೆ ನೀಡಬೇಕು ಹೊಸ ಕಮಿಟಿ ರಚಿಸಬೇಕೆಂದು ಸಾಕಷ್ಟು ಬಾರಿ ಮೌಖಿಕವಾಗಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಸಮಾಜದ ಆಸ್ತಿ ಮತ್ತು ಹಣವನ್ನು ಸಮಾಜದವರೇ ದುರುಪಯೋಗ ಮಾಡುತ್ತಿರುವುದು ಮತ್ತು ನಾನೇ ಸ್ವಂತ ಹಣ, ಶ್ರಮದಿಂದ ನಿರ್ಮಿಸಿರುವ ಕಟ್ಟಡದ ದುರುಪಯೋಗ ಭ್ರಷ್ಠಾಚಾರದಿಂದ ಕೂಡಿರುವುದು ನನಗೆ ತುಂಬಾ ನೋವಾಗಿದೆ ಆದ್ದರಿಂದ ಹಿರಿಯ ಮುಖಂಡರೆಲ್ಲ ಸೇರಿ ನಾನೇ ನಿರ್ಮಿಸಿದ ಈ ವಾಣಿಜ್ಯ ಮಳಿಗೆ ಹಾಗೂ ದೀವರ ಸಂಘದ ಸಮಸ್ತ ಆಸ್ತಿಯನ್ನು ನಾರಾಯಣಗುರು ಮಂದಿರಕ್ಕೆ ನೀಡಿದ್ದಲ್ಲಿ ಈ ಮಂದಿರ ಸಾಕಷ್ಟು ಜನಪರವಾದ ಕೆಲಸ ಮಾಡುತ್ತಿದ್ದು ಇದನ್ನು ನೀಡಲು ಎಲ್ಲರೂ ಒಟ್ಟಾಗಲೀ ಇಲ್ಲವಾದರೆ ಇಂದಿನ ಅಧ್ಯಕ್ಷರಾದ ಬಿ.ಪಿ.ರಾಮಚಂದ್ರರವರ ಸಂಪುಟ ತಕ್ಷಣ ರಾಜೀನಾಮೆ ನೀಡಿ ಹಿಂದಿನ ಎಲ್ಲ ಲೆಕ್ಕಪತ್ರಗಳನ್ನು ಸಭೆಯ ಮುಂದೆ ತರಲೆಂದು ಕೇಳಿಕೊಂಡರು.

ಶಿವಮೊಗ್ಗದ ಮಧು ಬಂಗಾರಪ್ಪನವರ ಹೆಸರಿನಲ್ಲಿರುವ ಡೆಂಟಲ್ ಕಾಲೇಜ್ ಬಗ್ಗೆ ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ಮೊರೆ ಶಿವಮೊಗ್ಗದ ಗಾಡಿಕೊಪ್ಪದಲ್ಲಿರುವ ಡೆಂಟಲ್ ಕಾಲೇಜ್ ಜಾಗವನ್ನು ನಾನೇ 80 ಎಕರೆ ಜಾಗ ಖರೀದಿಸಿದ್ದು ನನಗೆ ಎಲ್ಲರೂ ಸೇರಿ ಮೋಸ ಮಾಡಿದ್ದಾರೆ ನಾನು ಧರ್ಮಸ್ಥಳದ ಶ್ರೀಮಂಜುನಾಥನ ಮೊರೆ ಹೋಗಿದ್ದೇನೆ ಎಂದು ಈ ಸಂದರ್ಭದಲ್ಲಿ ಮಾಜಿ ಶಾಸಕ ಸ್ವಾಮಿರಾವ್‌ರವರು ಹೇಳಿದರು.

ಘಟನೆಯ ವಿವರ:

ನಾನು ಶಾಸಕನಾಗಿ ಅಧಿಕಾರದಲ್ಲಿದ್ದಾಗ ದೀವರ ಜನಾಂಗದ ಮುಖಂಡರಾದ ಎಸ್. ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಕೆ.ಜಿ.ಶಿವಪ್ಪ ಕೂಡ ಅಧಿಕಾರದಲ್ಲಿದ್ದರು. ಹಿಂದುಳಿದ ಈ ಸಮಾಜಕ್ಕಾಗಿ ಸಮಾಜದ ಅಭಿವೃದ್ಧಿಗಾಗಿ ಶಿವಮೊಗ್ಗದಲ್ಲಿ ಶರಾವತಿ ದಂತ ವೈದ್ಯಕೀಯ ಕಾಲೇಜ್ ಟ್ರಸ್ಟ್‌ನ್ನು ಅಂದಿನ ಲೋಕಸಬಾ ಸದಸ್ಯರಾದ ಕೆ.ಜಿ ಶಿವಪ್ಪನವರ ಅಧ್ಯಕ್ಷತೆಯಲ್ಲಿ 1991-92ರಲ್ಲಿ ಸ್ಥಾಪಿಸಲಾಯಿತು ಇದಕ್ಕೆ ಕಾಗೋಡು ತಿಮ್ಮಪ್ಪನವರು ವ್ಯವಸ್ಥಾಪಕ ನಿರ್ದೆಶಕರಾಗಿಯೂ ನಾನು ಅಲ್ಲದೇ ಸೊರಬದ ಅಂದಿನ ತಾ.ಪಂ ಅಧ್ಯಕ್ಷರಾದ ಶಿವಾನಂದಪ್ಪ ಹಾಗೂ ಬೆಂಗಳೂರಿನ ಉದ್ಯಮಿ ದಾಸಪ್ಪನವರ ಅಳಿಯ ಹರೀಶ್ ಟ್ರಸ್ಟಿಯಾಗಿದ್ದರು. ಸಂಸ್ಥೆ ಸ್ಥಾಪಿಸುವ ಸಂದರ್ಭದಲ್ಲಿ ನನ್ನ ವೈಯಕ್ತಿಕ ಆಸ್ತಿಯನ್ನು ವಿಜಯ ಬ್ಯಾಂಕ್‌ಗೆ ಅಡಮಾನವಾಗಿ ಇಡಬೇಕಾದ ಸಂದರ್ಭ ಬಂದಿದ್ದು ಅಂದು ಶಾಸಕನಾದ ನಾನು ನನ್ನ ಕ್ಷೇತ್ರದ ಶಿವಮೊಗ್ಗ ಹೃದಯ ಭಾಗದಲ್ಲಿರುವ ಗಾಡಿಕೊಪ್ಪ ಎಂಬಲ್ಲಿ ಸುಮಾರು 80ಎಕರೆ ಜಮೀನನ್ನು ನಾನೇ ಸಂತ ಹಣದಿಂದ ಸಂಸ್ಥೆಯ ಹೆಸರಿಗೆ ಖರೀದಿಸಿ ಡೆಂಟಲ್ ಕಾಲೇಜ್ ನಿರ್ಮಿಸಿ ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಅವಕಾಶ ಕಲ್ಪಿಸಲಾಯಿತು. ರಾಜಕೀಯ ಏಳು ಬೀಳುಗಳ ನಡುವೆ ಬಂಗಾರಪ್ಪ ಹಾಗೂ ಡಾ|| ಜಿ.ಡಿ ನಾರಾಯಣಪ್ಪ ಹಾಗೂ ಕುಮಾರ ಬಂಗಾರಪ್ಪರವರು ಸಹಾ ಸಂಸ್ಥೆಗೆ ಕೆಲ ಸಮಯ ವ್ಯವಸ್ಥಾಪಕ ನಿರ್ದೆಶಕರಾಗಿ ಸೇವೆ ಸಲ್ಲಿಸಿದ್ದಾರೆ ಆದರೆ ನಂತರದ ದಿನಗಳಲ್ಲಿ ಸಂಸ್ಥೆಯಲ್ಲಿ ಭಿನ್ನಾಭಿಪ್ರಾಯ ಮೂಡುವುದರ ಜೊತೆಗೆ ಎಸ್.ಬಂಗಾರಪ್ಪನವರು ನಮ್ಮನ್ನು ಹೊರ ಹಾಕಿ ಸಂಸ್ಥೆಯ ಪೂರ್ಣ ಜಾವಬ್ದಾರಿಯನ್ನು ಎಸ್.ಬಂಗಾರಪ್ಪ ಹಾಗೂ ಅವರ ಪುತ್ರ ಮಧುಬಂಗಾರಪ್ಪನವರು ತೆಗೆದುಕೊಂಡು ನಮ್ಮನ್ನು ಅನಾಥರಾನ್ನಾಗಿ ಮಾಡಿದ್ದಾರೆ. ಸಮಾಜಕ್ಕೆ ಸೇರಿದ ಆಸ್ತಿಯನ್ನು ಭೂ ಪರಿವರ್ತನೆ ಮಾಡಿ ನಿವೇಶನಗಳನ್ನು ರಚಿಸಿ ಸಂಸ್ಥೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿ ಕೋಟ್ಯಂತರ ರೂಪಾಯಿ ನುಂಗಿದ್ದಾರೆ ನ್ಯಾಯಾಲಯದ ಮೊರೆ ಹೊಗಿದ್ದರೂ ನನಗೆ ನ್ಯಾಯ ದೊರಕಿಲ್ಲ ಈ ವಿಷಯವಾಗಿ ನಾನು ಧರ್ಮಸ್ಥಳ ಶ್ರೀಮಂಜುನಾಥ ಸ್ವಾಮಿಯ ಮೊರೆ ಹೋಗಿದ್ದು ನನಗೆ ಇಂದಲ್ಲ ನಾಳೆ ನ್ಯಾಯವನ್ನು ದೇವರು ಕರುಣಿಸಲಿದ್ದಾರೆ ಎಂದು ತಿಳಿದುಕೊಂಡಿದ್ದೇವೆ ಎಂದರು.

ಈ ಪತ್ರಿಕಾಘೋಷ್ಠಿಯಲ್ಲಿ ಮುಂಬಾರು ತಿಮ್ಮಪ್ಪ, ನಾಗಪ್ಪ, ವಡೆಗೇರಿ ನಾಗಪ್ಪ, ಮಂಡಾಣಿ ಮೋಹನ, ಮಂಡಾಣಿ ಕುಮಾರ, ಮಂಡಾಣಿ ಗುರು, ಬೇಹಳ್ಳಿ ನಾಗರಾಜ್, ಬಸವರಾಜ್, ಶ್ರೀಧರ್, ಎಂ.ಡಿ ಉಸ್ಮಾನ್ ಸಾಬ್, ಶೇಷಪ್ಪ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here