ಹೊಸನಗರದ ದುರ್ಗಾಂಬ ದೇವಸ್ಥಾನದಲ್ಲಿ ಅ.7 ರಿಂದ ನವರಾತ್ರಿ ಉತ್ಸವ

0
194

ಹೊಸನಗರ: ಪಟ್ಟಣದ ಹಳೇ ಸಾಗರ ರಸ್ತೆಯಲ್ಲಿರುವ ದುರ್ಗಾಂಬ ದೇವಸ್ಥಾನದ ಆವರಣದಲ್ಲಿ ಅಕ್ಟೋಬರ್ 7ನೇ ಗುರುವಾರದಿಂದ ಅಕ್ಟೋಬರ್ 13ನೇ ಬುಧವಾರದವರೆಗೆ ಕೋವಿಡ್ ನಿಯಮ ಮೀರದಂತೆ ಅದ್ಧೂರಿ ನವರಾತ್ರಿ ಉತ್ಸವ ನಡೆಯಲಿದೆ ಎಂದು ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಶ್ರೀಪತಿ ರಾವ್‌ರವರು ತಿಳಿಸಿದರು.

ದೇವಸ್ಥಾನದ ಆವರಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಅಕ್ಟೋಬರ್ 7ನೇ ಗುರುವಾರ ಸಂಜೆ ಎಂದಿನಂತೆ ಪ್ರತಿ ದಿನ ಪೂಜೆ ಕಾರ್ಯಕ್ರಮವಿರುತ್ತದೆ ಅಕ್ಟೋಬರ್ 13ನೇ ಬುಧವಾರ ದುರ್ಗಾಷ್ಟಮಿಯ ಪ್ರಯುಕ್ತ ದುರ್ಗಾಪೂಜೆ ಮಧ್ಯಾಹ್ನ 12.30ಕ್ಕೆ ಪೂರ್ಣಹುತಿ ನಂತರ 1ಗಂಟೆಗೆ ಮಹಾ ಮಂಗಳಾರತಿ ಹಾಗೂ ಪೂಜಾ ಕಾರ್ಯದ ನಂತರ ಹೊಸನಗರದ ಗಾಯತ್ರಿ ಮಂದಿರದಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ ದುರ್ಗಾ ಹೋಮದ ಸೇವೆಯನ್ನು ಹೊಸನಗರ ನ್ಯೊ ಧನಲಕ್ಷ್ಮೀ ಜ್ಯುವೆಲರಿ ಮಾಲೀಕರಾದ ನಾಗೇಶ್ ಶೇಟ್‌ರವರ ಕುಟುಂಬ ನೇರವೇರಿಸಲಿದೆ. ಹೊಸನಗರ ತಾಲ್ಲೂಕಿನ ಸಾರ್ವಜನಿಕರು ಹಾಗೂ ದೇವಿಯ ಭಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಡಾ|| ರಾಮಚಂದ್ರರಾವ್, ಪ್ರಧಾನ ಕಾರ್ಯದರ್ಶಿ ಶ್ರೀಧರ ಉಡುಪ, ಕಾರ್ಯದರ್ಶಿ ವಾದಿರಾಜ್, ಖಜಾಂಚಿ ನಾಗರಾಜ್ ಚಡಗ, ವಾಸದೇವ ಆಚಾರ್, ಸುದೇಶ್ ಕಾಮತ್, ಸದಾಶಿವ ಶ್ರೇಷ್ಠಿ, ರಾಘು, ಶ್ರೀಧರ, ಸುಬ್ರಹ್ಮಣ್ಯ, ವಿಜೇಂದ್ರ ಶೇಟ್, ವಾಸುದೇವ ಪಿ, ದುರ್ಗಾ ಜ್ಯುವೆಲರಿ ಚಂದ್ರಶೇಖರ ಶೇಟ್, ಗುರುರಾಜ್, ಹರೀಶ್, ನಟರಾಜ್, ಬಾಬು ಕಾಮತ್, ಕನಕರಾಜ್, ಪ್ರಧಾನ ಅರ್ಚಕರಾದ ರಾಘುಭಟ್, ಪರಮೇಶ್ವರರಾವ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here