ಹೊಸನಗರದ ಪ್ರಜಾಪಿತ ಬ್ರಹ್ಮಕುಮಾರಿ ಆಶ್ರಮದಲ್ಲಿ ಶಿವರಾತ್ರಿ ಮಹೋತ್ಸವ | ಕ್ಷೀರಾಭಿಷೇಕದ ಶಿವಲಿಂಗ ಹಾಗೂ 108 ಜ್ಯೋತಿರ್ಲಿಂಗಗಳ ದರ್ಶನ

0
393

ಹೊಸನಗರ: ಪಟ್ಟಣದ ತೋಟಗಾರಿಕೆ ಇಲಾಖೆಯ ಪಕ್ಕದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ಆಶ್ರಮದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಶಿವಲಿಂಗಕ್ಕೆ ಕ್ಷೀರಾಭಿಷೇಕ ಮತ್ತು 108 ಜ್ಯೋತಿರ್ಲಿಂಗಗಳ ದರ್ಶನ ಏರ್ಪಡಿಸಲಾಗಿದೆ.

ಮಾ. 1 ರಿಂದ 3 ರವರೆಗೆ ಬೆಳಗ್ಗೆ 9 ರಿಂದ ರಾತ್ರಿ 9.30 ರವರೆಗೆ ಶಿವಲಿಂಗ ದರ್ಶನ ಪಡೆಯಲು ಹಾಗೂ ಪ್ರತಿ ದಿನ ಸಂಜೆ 6.30 ರಿಂದ 7.30 ರವರೆಗೆ ಶಿವಯೋಗ ಬಂದ ಜೀವನ ದರ್ಶನ ಪ್ರವಚನ ಇರುತ್ತದೆ ಪರಮಾತ್ಮ ಶಿವನ ಅವತರಣೆಯ ದಿನವೇ ಸತ್ಯ ಶಿವರಾತ್ರಿ ಅಜ್ಞಾನದ ಅಂಧಕಾರವನ್ನು ಸಮಾಪ್ತಿ ಮಾಡಿ ಜ್ಞಾನದ ಪ್ರಕಾಶವನ್ನು ನೀಡಿ ಸರ್ವರ ಜೀವನ ದುಃಖ ಅಶಾಂತಿಯನ್ನು ದೂರ ಮಾಡಿ ಸರ್ವರಿಗೂ ಸುಃಖ ಶಾಂತಿಯನ್ನು ನೀಡಲು ಸ್ವಯಂ ಪರಮಾತ್ಮ ಶಿವ ಈ ಸೃಷ್ಠಿಗೆ ಅವತರಿಸಿರುವ ಈ ದಿನ ಪ್ರತಿಯೊಬ್ಬರು ಪಾರ್ಥನೆ ಮಾಡುವುದರ ಜೊತೆಗೆ ಶಿವರಾತ್ರಿ 108 ಜ್ಯೋತಿರ್ಲಿಂಗಗಳ ದರ್ಶನ ಮಾಡಿ ಪರಮಾತ್ಮನ ಶಿವನ ಕೃಪೆಗೆ ಪಾತ್ರರಾಗಬೇಕೆಂದು ಬ್ರಹ್ಮಕುಮಾರಿ ಶಿವಮಣಿ ಮತ್ತು ಶೋಭ ನವರು ಈ ಸಂದರ್ಭದಲ್ಲಿ ತಿಳಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here