ಹೊಸನಗರದ ಮಾವಿನಕೊಪ್ಪ ಸರ್ಕಲ್‌ನಲ್ಲಿ ಇಂಧನ ತುಂಬಿದ ಲಾರಿ ಡಿವೈಡರ್‌ಗೆ ಡಿಕ್ಕಿ : ತಪ್ಪಿದ ಭಾರೀ ಅನಾಹುತ‌ !

0
1549

ಹೊಸನಗರ: ಪಟ್ಟಣದ ಹೊರವಲಯದ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಕೊಪ್ಪ ಸರ್ಕಲ್ ಬಳಿ ಇಂಧನ ತುಂಬಿದ ಲಾರಿಯೊಂದು ಡಿವೈಡರ್‌ಗೆ ಸೋಮವಾರ ಬೆಳಗಿನ ಜಾವ 5ಗಂಟೆ ಸುಮಾರಿಗೆ ಡಿಕ್ಕಿ ಹೊಡೆದಿದ್ದು ಭಾರೀ ಅನಾಹುತದಿಂದ ಪಾರಾದ ಘಟನೆ ವರದಿಯಾಗಿದೆ.

ಸೋಮವಾರ ಬೆಳಗಿನ ಜಾವ 4;30ರಿಂದ 5ಗಂಟೆಯ ಸುಮಾರಿಗೆ ಮಂಗಳೂರಿನಿಂದ ಬಳ್ಳಾರಿಗೆ ಇಂಧನ ತುಂಬಿಕೊಂಡು ಬರುತ್ತಿರುವ ಕೆಎ 19ಎಬಿ 0161 ಸಂಖ್ಯೆಯ ಟ್ಯಾಂಕರ್ ರಸ್ತೆ ಮಧ್ಯ ಹಾಕಿರುವ ಡಿವೈಡರ್‌ಗೆ ಡಿಕ್ಕಿ ಹೊಡೆದು ಮುಂದಿನ ಚಕ್ರ ಕಳಚಿ ಗೌತಮ್‌ರವರ ಅಂಗಡಿಯ ಬಾಗಿಲಿಗೆ ಹೊಡೆದಿದೆ. ಮುಂದಿನ ಭಾಗ ಲಾರಿ ಜಖಂಗೊಂಡಿದೆ. ಡಿಸೇಲ್ ಟ್ಯಾಂಕ್ ಒಡೆದು ಡಿಸೇಲ್ ರಸ್ತೆ ತುಂಬಾ ಬಿದ್ದಿದೆ ಆದರೆ ಟ್ಯಾಂಕರ್‌ನಲ್ಲಿದ್ದ ಡಿಸೇಲ್‌ಗೆ ಏನೂ ತೊಂದರೆಯಾಗಿಲ್ಲ.

ತಕ್ಷಣ ಹೊಸನಗರದ ಅಗ್ನಿ ಶಾಮಕದಳದ ಸಿಬ್ಬಂದಿಗಳು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ತನಿಖೆ ನಡೆಯುತ್ತಿದೆ.

ಜಾಹಿರಾತು

LEAVE A REPLY

Please enter your comment!
Please enter your name here