ಹೊಸನಗರದ ರೈತ ರತ್ನಾಕರ್ ಕುಟುಂಬದಲ್ಲಿ ಅದ್ಧೂರಿ ಭೂಮಿ ಹುಣ್ಣಿಮೆ ಹಬ್ಬ ಆಚರಣೆ

0
2201

ಹೊಸನಗರ: ಭೂತಾಯಿಗೆ ಬಸಿರ ಬಯಕೆ ತೀರಿಸುವ ದಿನ ಇಂದು ಮಳೆನಡಿನಲ್ಲಿ ಭೂಮಿ ಹುಣ್ಣಿಮೆಯನ್ನು ಅತ್ಯಂತ ವಿಶೇಷವಾಗಿ ಆಚರಿಸಲಾಗುತ್ತದೆ ಹಸಿರು ಹೊದ್ದ ಹೊಲ ಗದ್ದೆಗಳಿಗೆ ಅನ್ನದಾತರು ತರಳಿ ವೈವಿಧ್ಯ ಮಯಾ ಖಾದ್ಯಗಳನ್ನು ನೈವೇದ್ಯ ಮಾಡುವ ಮೂಲಕ ಭೂರಮೆಯ ಸೀಮಂತವನ್ನು ಸಂಭ್ರಮದಿಂದ ಆಚರಿಸುವುದು ರೂಢಿಯಲ್ಲಿದೆ ಎಂದು ಹೊಸನಗರದ ರೈತರಾದ ರತ್ನಾಕರ್‌ರವರು ಹೇಳಿದರು.

ಹೊಸನಗರದ ತಮ್ಮ ಭತ್ತದ ಗದ್ದೆಯಲ್ಲಿ ಬೆಳಿಗ್ಗೆ ಪೂಜೆ ಸಲ್ಲಿಸಿ ಮಾತನಾಡಿ, ಒಕ್ಕಲಿಗರು, ಮಡಿವಾಳರು, ಬ್ರಾಹ್ಮಣರು, ರಾಮಕ್ಷತ್ರಿಯರು, ಲಿಂಗಾಯತ ಸೇರಿದಂದೆ ಎಲ್ಲ ರೈತಾಪಿ ವರ್ಗದಲ್ಲಿ ಇಂದು ಭೂಮಿಗೆ ಪೂಜೆ ಸಲ್ಲಿಸುವ ರೂಢಿಯಿದ್ದರೂ ಕೃಷಿ ಕಾಯಕವೇ ಜೀವನವಾಗಿದ್ದು ಮಾರ್ಗವಾಗಿರುವ ಭೂಮಿ ಹುಣ್ಣಿಮೆ ಇನ್ನೂ ವಾರವಾಗಿರುವಾಗಲೇ ಕೃಷಿಕ ಮಹಿಳೆಯರು ನಾನಾ ಸಿದ್ದತೆಯಲ್ಲಿ ತೊಡಗಿದ್ದು ಬಿದಿರು ಅಥವಾ ಬೆತ್ತದ ಒಂದು ದೊಡ್ಡ ಮತ್ತು ಒಂದು ಸಣ್ಣ ಬುಟ್ಟಿಗೆ ಒಂದು ಪದರ ಗೋವಿನ ಸಗಣಿ ಬಳಿದು ಒಣಗಿಸಿ ನಂತರ ಜೇಡಿ ಮತ್ತು ಕೆಮ್ಮಣ್ಣು ಬಳಿದು ನಂತರ ಅಕ್ಕಿ ರುಬ್ಬಿ ತಯಾರಿಸಿದ ಬಿಳಿ ಬಣ್ಣದಿಂದ ಚಿತ್ತರ ಬಿಡಿಸಿ ಹಚ್ಚಂಬಲಿ ಎಂಬ ವಿಶಿಷ್ಟ ಖಾದ್ಯ ಹಬ್ಬದ ಹಿಂದಿನ ರಾತ್ರಿ ರೈತರ ಮನೆಯ ಮಹಿಳೆಯರು ಭೂಮಿ ತಾಯಿ ಮಡಿಲು ತುಂಬುವ ವಿಧ-ವಿಧದ ಕಜ್ಜಾಯ ತಿಂಡಿ, ತಿನಿಸು ತಯಾರಿಸುವಷ್ಟರಲ್ಲಿ ಬೆಳಕು ಹರಿಸುತ್ತಾರೆ. ಅಮಟೆಕಾಯಿ, ಹಾಗಲಕಾಯಿ, ಹರಿವೇ ಸೊಪ್ಪು ಹೀಗೆ 101 ಸೊಪ್ಪುಗಳನ್ನು ಒಟ್ಟು ಮಾಡಿ ಉಪ್ಪು ಹಾಕದೇ ಬೆರಕೆಸೊಪ್ಪು (ಪಲ್ಲೆ) ತಯಾರಿಸಿ ಭೂತಾಯಿಗೆ ಬಳಸಲಾಗುತ್ತದೆ ಇದು ಹಿಂದಿನ ಸಂಪ್ರಾದಾಯದಂತೆ ಮಗಳಿಗೆ ಗರ್ಭಧರಿಸಿದಾದ ಮಾಡುವ ಸೀಮಂತ ಕಾರ್ಯದಂತೆ ಅದೇ ರೀತಿ ಭೂಮಿ ತಾಯಿಗೆ ಸೀಮಂತ ಮಾಡಿ ಬಂದವರಿಗೆ ಉಣ ಬಳಿಸುವ ಸಂಪ್ರಾದಾಯ ಇದ್ದು ಇದನ್ನು ಎಲ್ಲ ರೈತರು ಇಂದು ಭೂಮಿ ಹುಣ್ಣಿಮೆಯ ದಿನ ಹಬ್ಬವಾಗಿ ಆಚರಿಸುತ್ತಾರೆ ಎಂದರು.

ರೈತಾಪಿ ಕುಟುಂಬದ ರತ್ನಾಕರ್‌ರವರ ಮಕ್ಕಳು ಡಾಕ್ಟರ್, ಪಿಡಿಓ ಹಾಗೂ ಪೊಲೀಸ್ ಇಲಾಖೆಯಲ್ಲಿ ಇದ್ದರೂ ಇವರು ಹಳೇಯ ಸಂಪ್ರಾದಾಯವನ್ನು ಮರೆಯದೇ ಪ್ರತಿ ವರ್ಷವೂ ಭೂಮಿ ಹುಣ್ಣಿಮೆಯ ಹಬ್ಬದಂದು ಎಲ್ಲರೂ ಒಟ್ಟಿಗೆ ಸೇರಿ ಭತ್ತದ ಗದ್ದೆಯಲ್ಲಿ ಭೂಮಿ ತಾಯಿಗೆ ಪೂಜೆ ಸಲ್ಲಿಸುವ ಜೊತೆಗೆ ಬಂದ ಕುಟುಂಬಗಳಿಗೆ ಸಂಬಂಧಿಕರಿಗೆ ಹಾಗೂ ತಮ್ಮ ಆಪ್ತರಿಗೆ ಬೆಳಿಗ್ಗೆಯೇ ಊಟ ಹಾಕುವುದು ಇವರ ಸಂಪ್ರಾದಾಯವಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here