ಹೊಸನಗರದ ವಿವಿಧ ಸಂಘ ಸಂಸ್ಥೆಗಳಿಂದ ಸರಳ ಗಣೇಶೋತ್ಸವ

0
689

ಹೊಸನಗರ: ದೇಶದಲ್ಲಿ ಕೊರೊನಾ ವೈರಸ್ ನಿಂದಾಗಿ ಜನರು ತತ್ತರಿಸಿ ಹೋಗಿದ್ದು ಆದರೂ ಹಬ್ಬಗಳ ಆಚರಣೆ ಬಿಡದೆ ಸರಳ ರೀತಿಯಲ್ಲಿ ವಿವಿಧ ಸಂಘಗಳು ಹಾಗೂ ಹಿಂದಿನ ಸಂಪ್ರಾದಾಯದಂತೆ ಮನೆಯಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಒಂದೇ ದಿನದಲ್ಲಿ ಕೆಲವು ಸಂಘ-ಸಂಸ್ಥೆಯಲ್ಲಿ ಸ್ಥಾಪಿಸಿದ ಗಣಪತಿಯನ್ನು ವಿಸರ್ಜಿಸಿದ್ದು ಹೊಸನಗರ ಪಟ್ಟಣದಲ್ಲಿ ಸುಮಾರು 49 ವರ್ಷಗಳಿಂದ ಪ್ರತಿಷ್ಠಾಪಿಸುತ್ತ ಬಂದಿರುವ ವಿಘ್ನೇಶ್ವರ ಸೇವಾ ಸಮಿತಿಯ ಗಣಪತಿ, 4 ವರ್ಷಗಳಿಂದ ಪ್ರತಿಷ್ಠಾಪಿಸುತ್ತಾ ಬಂದಿರುವ ಹಿಂದೂ ಮಹಾಸಭಾ ಗಣಪತಿ ಹಾಗೂ ಕೋಟೆಗಾರ್ ವಿದ್ಯಾವರ್ಧಕ ಸಂಘದವರ 6ನೇ ವರ್ಷದ ಗಣಪತಿಯನ್ನು ಮೂರು ದಿನಗಳ ಕಾಲ ಪ್ರತಿಷ್ಠಾಪಿಸಿ ಭಾನುವಾರ ವಿಸರ್ಜಿಸಲಿದ್ದಾರೆ‌.

ಈ ಹಿಂದೆ ಅದ್ಧೂರಿಯಾಗಿ ಆಚರಿಸುತ್ತಾ ಬಂದಿರುವ ಗಣಪತಿ ಹಬ್ಬ ಎರಡು ವರ್ಷಗಳಿಂದ ಸರಳ ರೀತಿಯಲ್ಲಿ ಗಣಪತಿ ಹಬ್ಬ ಮುಗಿಯುತ್ತಿದ್ದು ಸಾರ್ವಜನಿಕರಿಗೆ ಯಾವುದೇ ಮನರಂಜನೆಯೂ ಇಲ್ಲಾವಾಗಿದ್ದು ಅದರಲ್ಲಿಯು ಮಳೆಯ ಆರ್ಭಟ ಹೊಸನಗರ ತಾಲ್ಲೂಕಿನಲ್ಲಿ ದಿನೆ-ದಿನೆ ಹೆಚ್ಚುತ್ತಿದ್ದು ಈ ಬಾರಿಯ ಗಣಪತಿ ಹಬ್ಬ ಕೊರೊನಾ ಹಾಗೂ ಮಳೆಯಲ್ಲಿ ಕೊಚ್ಚಿಕೊಂಡು ಹೋಗಿದೆ ಎಂದರೆ ತಪ್ಪಗಲಾರದು.

ಜಾಹಿರಾತು

LEAVE A REPLY

Please enter your comment!
Please enter your name here