20.6 C
Shimoga
Friday, December 9, 2022

ಹೊಸನಗರದ ಶ್ರೀ ಜೇನುಕಲ್ಲಮ್ಮ ಸೌಹಾರ್ದ ಸಹಕಾರಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಹೊಸನಗರ : ಪಟ್ಟಣದ ಶ್ರೀ ಸತ್ಯದೇವತೆ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ಜೇನುಕಲ್ಲಮ್ಮ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ಪದಾಧಿಕಾರಿಗಳ ಆಯ್ಕೆ ಚುನಾವಣಾ ಅಧಿಕಾರಿ ಶ್ರೀ ವೆಂಕಟಾಚಲ ಪತಿಯವರ ನೇತೃತ್ವದಲ್ಲಿ ನಡೆದಿದ್ದು ಸಂಘದ ನೂತನ ಅಧ್ಯಕ್ಷರಾಗಿ ಬೆಣ್ಣಕ್ಕಿ ಸತ್ಯನಾರಾಯಣ, ಉಪಾಧ್ಯಕ್ಷರಾಗಿ ಕೊಳಗಿ ಪೂರ್ಣಿಮಾ ಮೂರ್ತಿರಾವ್ ಆಯ್ಕೆಯಾಗಿದ್ದಾರೆ.

ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕೆ ಸುಮಂತ್, ನಿರ್ದೇಶಕರುಗಳಾಗಿ ಮಂಡಾನಿಯ ಧನಂಜಯ, ದಿವಾಕರ, ನಿತ್ಯಾನಂದ, ಎಂ ಗುಡ್ಡೆಕೊಪ್ಪದ ಮಧುಸೂದನ್, ಲೋಕೇಶ್ವರ ಜಗದೀಶ್, ಹಸಿರುಮನೆ ಟೀಕಪ್ಪ, ಕಂಚಿಕಾರು ಯೋಗೇಂದ್ರ, ವಾಟ್ಗದ್ದೆ ಶ್ರೀಪತಿ, ನೇರಲೆ ರಮೇಶ, ಮುಂಬಾರಿನ ಗಂಗಮ್ಮ, ತ್ರಿಣಿವೆಯ ದಿನೇಶ್, ಹಿಲ್ಕುಂಜಿಯ ನಾಗೇಶ್, ಮಂಡ್ರಿಯ ನಾಗಪ್ಪ, ಕೋಣನಸಂದಿ ತಿಮ್ಮಪ್ಪ ಇವರುಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!