ಹೊಸನಗರ: ಅಕ್ರಮ ಮದ್ಯ ಮಾರಾಟದ ಬಗ್ಗೆ ದೂರು, ಅಬಕಾರಿ ಅಧಿಕಾರಿಗಳಿಂದ ಗೊರಗೋಡು ಗ್ರಾಮಕ್ಕೆ ಭೇಟಿ, ಪರಿಶೀಲನೆ

0
1080

ಹೊಸನಗರ: ತಾಲ್ಲೂಕಿನ ಗೊರಗೋಡು ಗ್ರಾಮದಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ನಡೆಸುತ್ತಿದ್ದಾರೆ ಎಂಬ ದೂರಿನ ಮೇರೆಗೆ ದೂರು ಬಂದ ಮನೆಗಳಿಗೆ ಅಬಕಾರಿ ಇನ್ಸ್‌ಪೆಕ್ಟರ್ ಸಯ್ಯದ್ ತಫ್‌ದೀಲ್ ಉಲ್ಲಾ ಹಾಗೂ ಅಧಿಕಾರಿಗಳಾದ ಪಾಂಡು ಅಬ್ಬವಗೋಳ, ನಾಗರಾಜ್ ಜಿ.ಎಸ್ ಹಾಗೂ ವಾಹನ ಚಾಲಕ ಉಮೇಶ್‌ರವರು ಮಂಗಳವಾರ ರಾತ್ರಿ ಭೇಟಿ ನೀಡಿ ದೂರು ಬಂದ ಮನೆಗಳನ್ನು ಪರಿಶೀಲಿಸಿದರು.

ಆದರೆ ದೂರು ಬಂದ ಮನೆಗಳಲ್ಲಿ ಯಾವುದೇ ಅಕ್ರಮ ಮದ್ಯ ಸಿಗಲಿಲ್ಲ. ಗೊರಗೋಡು ಗ್ರಾಮದ ಸರ್ಕಲ್‌ನಲ್ಲಿ ಮಾತನಾಡಿದ ಇನ್ಸ್‌ಪೆಕ್ಟರ್, ಈಗ ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಹಾಗೂ ಮದ್ಯದ ಅಂಗಡಿಗಳನ್ನು ಬಂದ್ ಮಾಡಿರುವುದರಿಂದ ಅಕ್ರಮವಾಗಿ ಮದ್ಯ ಮಾರಾಟ ನಡೆಸುತ್ತಿರುವ ಬಗ್ಗೆ ದೂರುಗಳು ಬಂದಲ್ಲಿ ಅಥವಾ ಮಾರಾಟ ಮಾಡುವಾಗ ಸಿಕ್ಕಿ ಹಾಕಿಕೊಂಡರೆ ಯಾವುದೇ ಕನಿಕರ ತೋರದ ಕೇಸ್ ಹಾಕಿ ಒಳಗೆ ಕಳುಹಿಸುವುದಾಗಿ, ಗ್ರಾಮದ ಪ್ರತಿಯೊಬ್ಬರು ಮಾಸ್ಕ್ ಕಡ್ಡಾಯವಾಗಿ ಹಾಕಿಕೊಂಡು ಸ್ಯಾನಿಟೈಜರ್ ಉಪಯೋಗಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ನೀವು 10 ರೂಪಾಯಿ ಆಸೆಗಾಗಿ ಅಕ್ರಮ ಮದ್ಯ ಮಾರಾಟ ಮಾಡಿದರೆ ಕೊಳ್ಳುವವರಿಗೆ ಕೊರೊನೀದಂತಹ ಕಾಯಿಲೆಯಿದ್ದರೆ ನೀವು ಹಾಗೂ ನಿಮ್ಮ ಕುಟುಂಬ 10 ರೂಪಾಯಿ ಆಸೆಯಿಂದ ಜೀವವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಜನರಲ್ಲಿ ಜಾಗೃತಿ ಮೂಡಿಸಿದರು.

ವರದಿ: ಹೆಚ್.ಎಸ್. ನಾಗರಾಜ್
ಜಾಹಿರಾತು

LEAVE A REPLY

Please enter your comment!
Please enter your name here