ಹೊಸನಗರ ; ಅದ್ದೂರಿಯ ನವರಾತ್ರಿ ಉತ್ಸವಕ್ಕೆ ಜಯನಗರದ ಚಾಮುಂಡಿ ಬೆಟ್ಟ ಸಜ್ಜು

0
554

ಹೊಸನಗರ : ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿಯ ಶ್ರೀ ಕ್ಷೇತ್ರ ಚಾಮುಂಡಿ ಬೆಟ್ಟದಲ್ಲಿ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5ರವರೆಗೆ ನವರಾತ್ರಿ ಉತ್ಸವವನ್ನು ಅದ್ದೂರಿಯಾಗಿ ನೆರವೇರಿಸಲು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಸಜ್ಜುಗೊಂಡಿದೆ.

ರಾಷ್ಟ್ರೀಯ ಹೆದ್ದಾರಿ 766 ಸಿ ಪಕ್ಕದಲ್ಲೇ ಹೊಸನಗರ – ನಗರ ಮಾರ್ಗದ ಮಧ್ಯೆ ಹೊಸನಗರದಿಂದ ಮೂರು ಕಿಲೋಮೀಟರ್ ದೂರವಿರುವ ಶರಾವತಿ ನದಿ ತಟದಲ್ಲಿರುವ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ದೇವಿ ನೆಲೆಯೂರಿದ್ದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಮಹಾಸ್ವಾಮಿಗಳ ದಿವ್ಯಾನುಗ್ರಹದೊಂದಿಗೆ ದಳವಾಯಿಜಡ್ಡು ವೇದ ಬ್ರಹ್ಮ ಶ್ರೀ ವಾಸುದೇವ ಉಡುಪರ ಪೌರೋಹಿತ್ಯದಲ್ಲಿ ನವರಾತ್ರಿ ಉತ್ಸವ ನಡೆಯಲಿದ್ದು ಭಕ್ತವೃಂದದವರು ಈ ಉತ್ಸವಗಳಲ್ಲಿ ಪಾಲ್ಗೊಂಡು ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಸಮಿತಿಯವರು ಆಶಿಸಿದ್ದಾರೆ.

ಪುಣ್ಯವಂತರ ಮನೆಯಲ್ಲಿ ಅಷ್ಟಲಕ್ಷ್ಮಿಯಾಗಿ ಪಾಪಾತ್ಮರ ಮನೆಯಲ್ಲಿ ಲಕ್ಷ್ಮಿಯಾಗಿ ದರಿದ್ರ ಲಕ್ಷ್ಮಿಯಾಗಿ ಬುದ್ಧಿ ಉಳ್ಳವರ ಮನೆಯಲ್ಲಿ ವಿಶೇಷ ಜ್ಞಾನ ಉಳ್ಳವಳಾಗಿ ಉತ್ತಮ ವಂಶಸ್ಥರ ಮನೆಯಲ್ಲಿ ಲಜ್ಜಾರೂಪಿಯಾಗಿ ಕಾಣಿಸಿಕೊಳ್ಳುವ ಮಹಾತಾಯಿಯ ದರ್ಶನ ಭಾಗ್ಯ ಪಡೆದವರು ಧನ್ಯರು. ನವರಾತ್ರಿ ದಿನಗಳಲ್ಲಿ ದಿನಕ್ಕೊಂದು ಅವತಾರ ಸ್ವರೂಪದಲ್ಲಿ ಕಾಣಿಸಿಕೊಳ್ಳುವ ಈ ಅವತಾರ ಸ್ವರೂಪಿಣಿಯನ್ನು ಸ್ತೋತ್ರ ಗೀತೆ ಪಾರಾಯಣ ಹೋಮಗಳಿಂದ ಆರಾಧಿಸಬೇಕು.

ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5ರವರೆಗೂ ನಡೆಯಲಿರುವ ನವರಾತ್ರಿ ಉತ್ಸವದಲ್ಲಿ ಅಕ್ಟೋಬರ್ 4ರ ಮಂಗಳವಾರ ನವ ಚಂಡಿಕಾಯಾಗ ಮಧ್ಯಾಹ್ನ 12:30ಕ್ಕೆ ಪೂರ್ಣಾಹುತಿ ಮಹಾಮಂಗಳಾರತಿ ನಡೆಯಲಿದೆ.

ನವರಾತ್ರಿ ಉತ್ಸವವಲ್ಲದೆ ದೇವಸ್ಥಾನದಲ್ಲಿ ಪ್ರತಿ ಹುಣ್ಣಿಮೆಯಂದು ನಡೆಸಲಿದ್ದು ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತ ವೃಂದದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಕೋರಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here