ಹೊಸನಗರ ಅರಣ್ಯ ಇಲಾಖೆಯಿಂದ ಬೀಜೋತ್ಸವ 2022ಕ್ಕೆ ಚಾಲನೆ

0
546

ಹೊಸನಗರ: ಬೀಜ ಬಿತ್ತನೆ ಅಭಿಯಾನ ವಾದ ಬೀಜೋತ್ಸವ 2022ಕ್ಕೆ ಹೊಸನಗರ ವಲಯ ಅರಣ್ಯಾಧಿಕಾರಿ ಎಂ. ರಾಘವೇಂದ್ರರವರು, ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಂದಕುಮಾರಿ ರವರಿಂದ, ಕಳೂರು ಗ್ರಾಮದ ಕಳೂರುಕಟ್ಟೆ ಮೀಸಲು ಅರಣ್ಯ ಪ್ರದೇಶ ಗುಳ್ಳೆಕೊಪ್ಪದಲ್ಲಿ ಕುವೆಂಪು ವಸತಿ ವಿದ್ಯಾಶಾಲೆ, ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಬೀಜ ತೆನೆ ಕಾರ್ಯದ ಮೂಲಕ ಬೀಜೋತ್ಸವ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಧರ, ರಾಘವೇಂದ್ರ, ಡಾಕಪ್ಪ, ಉಲ್ಲಾಳೇಶ್ವರ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡು ಪರಿಸರ ಸಂರಕ್ಷಿಸುವ ಪ್ರತಿಜ್ಞಾವಿಧಿ ಕೈಗೊಂಡರು.

ಜಾಹಿರಾತು

LEAVE A REPLY

Please enter your comment!
Please enter your name here