ಹೊಸನಗರ ಆಟೋ ಚಾಲಕರಿಂದ ಶಂಕರ್‌ನಾಗ್‌ ಹುಟ್ಟುಹಬ್ಬ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆ

0
694

ಹೊಸನಗರ: ಪಟ್ಟಣದ ಚೌಡಮ್ಮ ರಸ್ತೆಯ ಚೌಡಮ್ಮ ಆಟೋ ಚಾಲಕರ ಸಂಘದಿಂದ ಇಂದು ಕನ್ನಡದ ಮೇರು ನಟ ದಿವಂಗತ ಶಂಕರ್‌ನಾಗ್‌ ರವರ 67ನೇ ಹುಟ್ಟುಹಬ್ಬ ಹಾಗೂ 9ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ವರ್ಣರಂಜಿತವಾಗಿ ಆಚರಿಸಿದರು.

ಹೊಸನಗರ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಮಹಾಸ್ವಾಮಿಗಳು ಕನ್ನಡ ಧ್ವಜವನ್ನು ಅನಾವರಣಗೊಳಿಸುವ ಮೂಲಕ ಹಾಗೂ ದಿವಂಗತ ಶಂಕರ್‌ನಾಗ್‌ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸುವ ಮೂಲಕ ಹಾಗೂ ಆಟೋ ಚಾಲಕರ ಸಂಘದ ನಾಮಫಲಕ ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ನಮ್ಮ ಕನ್ನಡ ನಾಡು ಉಳಿಯಬೇಕು, ಕನ್ನಡ ಸಂಸ್ಕೃತಿ ಉಳಿಸಬೇಕು ಎಂದು ವಿಧಾನಸೌಧದ ಮುಂದೆ ಕನ್ನಡ ನಾಡಿನ ಹೋರಾಟಗಾರರು ಹೋರಾಟ ಮಾಡುತ್ತಿದ್ದಾರೆ. ಕನ್ನಡ ಉಳಿದೇ ಉಳಿಯುತ್ತದೆ. ಆದರೆ ನಾಡಿನ ಜನರು ತಮ್ಮ ಮಕ್ಕಳನ್ನು ಇಂಗ್ಲೀಷ್ ಶಾಲೆಗಳಲ್ಲಿ ಓದಿಸಿ ಹೊರ ದೇಶಗಳಿಗೆ ದುಡಿಯಲು ಕಳುಹಿಸುಸಿದರೇ ಕನ್ನಡ ನಾಡು ಭಾಷೆ ಉಳಿಸಲು ಸಾದ್ಯವೇ? ಎಂದು ಪ್ರಶ್ನಿಸಿ, ನಾವು ಮಾಡುವ ಸೇವೆ ಮುಂದಿನ ಜನಾಂಗದವರು ನೆನಪಿಸಿಕೊಳ್ಳುವಂಥಹ ಸೇವೆ ಮಾಡಬೇಕು ಅದನ್ನು ಬಿಟ್ಟು ಈ ಭೂಮಿಯಲ್ಲಿ ಹುಟ್ಟಿದ್ದೇವೆ ಬದುಕುತ್ತೇವೆ ಸಾಯುತ್ತೇವೆ ಎಂದು ತಿಳಿದರೆ ಈ ಜನ್ಮ ಸಾರ್ಥಕವಾಗುವುದಿಲ್ಲ ಹುಟ್ಟುವಾಗ ಬರೀ ಉಸಿರಿರುತ್ತದೆ ಹುಟ್ಟಿದ ಮೇಲೆ ಹೆಸರನ್ನು ಇಡುತ್ತಾರೆ ಆ ಹೆಸರು ನಮ್ಮ ಜೀವದ ಉಸಿರು ನಿಂತರೂ ಹೆಸರಿರುವ ಹಾಗೇ ಬದುಕಿ ತೋರಿಸಬೇಕು ನಾವು ಬದುಕಿದರೆ ಶಂಕರ್‌ನಾಗ್‌ರವರಂತೆ ಬದುಕಬೇಕು ಶಂಕರ್‌ನಾಗ್ ಜೀವಂತವಾಗಿಲ್ಲ ಆದರೆ ಹೆಸರು ಇಂದಿಗೂ ಕನ್ನಡಿಗರ ಮನೆ-ಮನಗಳಲ್ಲಿ ಉಸಿರಾಗಿ ಉಳಿದಿದೆ. ಹೀಗೆ ಈ ಭೂಮಿಯ ಮೇಲೆ ಬದುಕಿ ಹೆಸರನ್ನು ಉಳಿಸಿ ನಮ್ಮ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಕನ್ನಡನಾಡಿನ ಜನರೇ ಕನ್ನಡನಾಡು ಬಾಷೆ ನುಡಿಗಾಗಿ ಹೋರಾಟ ಮಾಡುತ್ತಿರುವುದು ಸರಿಯಷ್ಟೆ, ಆದರೆ ನಿಮ್ಮ ಮಕ್ಕಳನ್ನು ಕನ್ನಡನಾಡಿನ ಎಳಿಗೆಗಾಗಿ ಇಲ್ಲಿನ ಸಂಸ್ಕೃತಿಯನ್ನು ಉಳಿಸಬೆಕಾದರೆ ನೀವೆಲ್ಲರೂ ನಿಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಿ ಕನ್ನಡ ಕಲಿಸಿರಿ ಇಂಗ್ಲೀಷ್ ವ್ಯಾಮೋಹದಿಂದ ಮುಕ್ತಿ ಗೋಳಿಸದರೆ ಮಾತ್ರ ಈ ನಾಡು-ನುಡಿ ಸಂಸ್ಕೃತಿ ಉಳಿಸಿ ಬೆಳೆಸಲು ಸಾಧ್ಯ ಎಂದರು.

ಈ ಸಮಾರಂಭದ ಅಧ್ಯಕ್ಷತೆಯನ್ನು ಆಟೋ ಚಾಲಕರ ಸಂಘದ ಅಧ್ಯಕ್ಷ ಗೋವಿಂದರಾಜ ಅವರು ವಹಿಸಿದ್ದು, ಪಟ್ಟಣ ಪಂಚಾಯತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ. ಇಲಿಯಾಸ್ ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಕೃಷ್ಣವೇಣಿ, ಗಾಯತ್ರಿ ನಾಗರಾಜ್, ಬಜಾಜ್ ಗುರುರಾಜ್, ಹಾಲಗದ್ದೆ ಉಮೇಶ್, ಸುರೇಂದ್ರ ಕೋಟ್ಯಾನ್, ಕೆ.ಕೆ ಅಶ್ವಿನಿಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಟಿ. ಬಾಲಚಂದ್ರಪ್ಪ, ಗಣೇಶ್ ಹೆಗಡೆ, ಎಎಸ್ಐ ಸುರೇಶ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಕನ್ನಡ ಭಾಷೆ ಪ್ರಪಂಚದ ಅತಿ ಹಳೆಯ ಭಾಷೆಯಾಗಿದ್ದು ಅದಕ್ಕೆ 2000 ವರ್ಷಗಳ ಇತಿಹಾಸವಿದೆ ಎಂದರು. ಕನ್ನಡ ಭಾಷೆಯನ್ನು ಬೆಳೆಸುವ ಹೋರಾಟ ಬಿಟ್ಟು ಬಳಸುವ ಹೋರಾಟ ಕೈಗೊಳ್ಳುವ ಮೂಲಕ ಕನ್ನಡವೆಂಬ ಮರಕ್ಕೆ ನೀರೆರೆಯಬೇಕೆಂದರು.

ಪ್ರಿಯಾಂಕ ಪೂರ್ಣೇಶ್ ಪ್ರಾಸ್ತಾವಿಕ ನುಡಿ ನುಡಿದರು. ಬಿ.ಎಸ್ ಸುರೇಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here