ಹೊಸನಗರ ಉರ್ದು ಶಾಲೆಯಲ್ಲಿ ನಡೆದ ರಕ್ತಗುಂಪು ಪರಿಶೀಲನೆ ಹಾಗೂ ರಕ್ತದಾನ ಶಿಬಿರ

0
722

ಹೊಸನಗರ : ಪಟ್ಟಣದ ಚರ್ಚ್ ರಸ್ತೆಯ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಹಾಗೂ ಹೊಸನಗರ ಸಾರ್ವಜನಿಕ ಆಸ್ಪತ್ರೆ ಸಹಯೋಗದೊಂದಿಗೆ ರಕ್ತ ಗುಂಪು ಪರಿಶೀಲನೆ ಹಾಗೂ ರಕ್ತದಾನ ಶಿಬಿರ ನಡೆಸಲಾಯಿತು.

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ವೈದ್ಯರುಗಳಾದ ಡಾ|| ವೈಷ್ಣವಿ, ಡಾ|| ವಿನಾಯಕ್, ಡಾ|| ಹನುಮಂತಪ್ಪ ತಮ್ಮ ಸಿಬ್ಬಂದಿಗಳು ಹಾಗೂ ಹೊಸನಗರ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರ ನೆರವಿನಿಂದ 46 ಜನರ ರಕ್ತದ ಗುಂಪಿನ ಪರೀಕ್ಷೆ ಹಾಗೂ ಮತ್ತೆ 45 ಜನರಿಂದ ರಕ್ತ ಸಂಗ್ರಹಿಸಿದರು.

ಉರ್ದು ಯುವಕ ಸಂಘದ ಕಬ್ಬಿನಮಕ್ಕಿ, ಇಸ್ಮಾಯಿಲ್ ರವರು ಶಿಬಿರಕ್ಕೆ ಆಗಮಿಸಿದವರಿಗೆ ಹಣ್ಣು, ತಂಪು ಪಾನೀಯದ ವ್ಯವಸ್ಥೆ ಮಾಡಿದರೆ, ಅಬ್ದುಲ್ ಅಜೀಜ್ ರವರು ಉಚಿತ ಮಾಸ್ಕ್ ವಿತರಣೆ ವ್ಯವಸ್ಥೆ ಕೈಗೊಂಡರು.

ವರದಿ : ಉಡುಪಿ ಎಸ್ ಸದಾನಂದ ಹೊಸನಗರ 8277173177
ಜಾಹಿರಾತು

LEAVE A REPLY

Please enter your comment!
Please enter your name here