ಹೊಸನಗರ; ಎತ್ತುಗಳ ಮೈ ತೊಳೆಯಲು ಹೋದ ವ್ಯಕ್ತಿ ನೀರುಪಾಲು !

0
801

ಹೊಸನಗರ: ತಾಲೂಕಿನ ನಗರ ವ್ಯಾಪ್ತಿಯ ಬೇಳೂರು ಸಮೀಪದ ಹೆಣ್ಣೆಬೈಲಿನ ಶರಾವತಿ ಹಿನ್ನೀರಿನಲ್ಲಿ ಎತ್ತುಗಳ ಮೈತೊಳೆಯಲು ಹೋದ ವ್ಯಕ್ತಿಯೋರ್ವ ನೀರುಪಾಲಾದ ಘಟನೆ ಶುಕ್ರವಾರ ನಡೆದಿದೆ.

ಮೃತನನ್ನು ಬೇಳೂರು ಗ್ರಾಮದ ಸುರೇಶ್ (48) ಎಂದು ಗುರುತಿಸಲಾಗಿದೆ. ಜ.14 ರಂದು ಈತನು ತಮ್ಮ ಜಮೀನಿನಲ್ಲಿ ಕೆಲಸ ಮುಗಿಸಿ ಎತ್ತುಗಳ ಮೈತೊಳೆಯುವ ಸಲುವಾಗಿ ಶರಾವತಿ ಹಿನ್ನೀರು ಪ್ರದೇಶಕ್ಕೆ ಬಂದಾಗ ಈ ಘಟನೆ ನಡೆದಿದೆ.

ಗ್ಯಾಂಗ್ರಿನ್ ನಿಂದಾಗಿ ಮೃತ ಸುರೇಶ್ ಅವರ ಒಂದು ಕಾಲನ್ನು ಕತ್ತರಿಸಿ ತೆಗೆಯಲಾಗಿತ್ತು. ಹೀಗಾಗಿ ನೀರಿನಲ್ಲಿ ಬಿದ್ದ ಅವರಿಗೆ ಮೇಲೆ ಬರಲು ಸಾಧ್ಯವಾಗದೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಈ ಘಟನೆ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here