ಹೊಸನಗರ ಎಪಿಎಂಸಿ ಸಾಗರಕ್ಕೆ ಹಸ್ತಾಂತರಕ್ಕೆ ಗುಬ್ಬಿಗಾ ಸುನೀಲ್ ತೀವ್ರ ವಿರೋಧ

0
196

ಹೊಸನಗರ: 2010ರಲ್ಲಿ ಪ್ರಾರಂಭವಾಗಿರುವ ಹೊಸನಗರ ಕೃಷಿ ಮಾರುಕಟ್ಟೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಈ ಉತ್ತಮ ರೀತಿಯಲ್ಲಿ ನಡೆಯುತ್ತಿರುವ ಮಾರುಕಟ್ಟೆಯ ಮೇಲೆ ರಾಜಕೀಯ ನಾಯಕರ ಕಣ್ಣು ಬಿದ್ದಿದ್ದು ಇದನ್ನು ಸಾಗರ ಎಪಿಎಂಸಿಗೆ ವೀಲಿನ ಮಾಡುವ ಪ್ರಕ್ರಿಯೆ ಪ್ರಾರಂಭವಾದರೆ ರೈತರು ಹಾಗೂ ಅಡಿಕೆ ವ್ಯಾಪಾರಿಗಳು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಸುಮೇಧಾ ಅಡಿಕೆ ವ್ಯಾಪಾರಿಗಳ ಸಂಘದ ನಿರ್ದೆಶಕರಾದ ಗುಬ್ಬಿಗಾ ಸುನೀಲ್‌ರವರು ತಿಳಿಸಿದ್ದಾರೆ.

ಅವರು ಸುಮೇಧಾ ಅಡಿಕೆ ಮಂಡಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಹೊಸನಗರದ ಎಪಿಎಂಸಿ ವರ್ಷಕ್ಕೆ ಮೂರು ಕೋಟಿ ರೂ. ನಷ್ಟು ವ್ಯವಹಾರ ನಡೆಸುತ್ತಿದೆ ಇದರಿಂದ ಸರ್ಕಾರದ ಆದಾಯ ಮೂಲವು ಹೆಚ್ಚಾಗಿಸಿದೆ ಇಂತಹ ಉತ್ತಮ ಸ್ಥಿತಿಯಲ್ಲಿರುವ ಹೊಸನಗರ ಎಪಿಎಂಸಿಯನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿರುವುದು ಹೊಸನಗರ ತಾಲ್ಲೂಕಿನ ರೈತರನ್ನು ಕಡೆಗಣಿಸುತ್ತಿರುವುದು ಎದ್ದು ಕಾಣುತ್ತಿದೆ. ಹೊಸನಗರ ಎಪಿಎಂಸಿ ಸಾಗರಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಿಲ್ಲಿಸಿ ಇಲ್ಲವಾದರೆ ಮುಂದಿನ ದಿನದಲ್ಲಿ ರೈತರಿಂದ ಭಾರೀ ಹೋರಾಟ ಎದುರಿಸಬೇಕಾಗುತ್ತದೆ ಎಂದರು.

ಜಾಹಿರಾತು

LEAVE A REPLY

Please enter your comment!
Please enter your name here