23.2 C
Shimoga
Sunday, November 27, 2022

ಹೊಸನಗರ ; ಕನ್ನಡದ ಮೇರುನಟ ಶಂಕರ್‌ನಾಗ್‌ ರವರ 68ನೇ ಹುಟ್ಟುಹಬ್ಬ ಹಾಗೂ 10ನೇ ಕನ್ನಡ ರಾಜ್ಯೋತ್ಸವ ಸಮಾರಂಭ

ಹೊಸನಗರ : ಕನ್ನಡ ಚಿತ್ರರಂಗದ ಮೇರು ನಟ, ಕರಾಟೆ ಕಿಂಗ್, ನಟ, ನಿರ್ದೇಶಕ ಇತರರ ಅನನ್ಯ ಪ್ರತಿಭೆ ಕನ್ನಡದ ಹಿರಿಮೆಯನ್ನು ರಾಷ್ಟ್ರಮಟ್ಟದಲ್ಲಿ ಪ್ರಜ್ವಲಿಸುವಂತೆ ಮಾಡಿದ ಅತ್ಯದ್ಭುತ ನಟ ದಿವಂಗತ ಶಂಕರ್ ನಾಗ್ ರವರ 68ನೇ ಹುಟ್ಟುಹಬ್ಬ ಹಾಗೂ ಚೌಡಮ್ಮ ಆಟೋ ಚಾಲಕ ಮಾಲೀಕ ಸಂಘದಿಂದ 10ನೇ ಕನ್ನಡ ರಾಜ್ಯೋತ್ಸವ ಇಂದು ಹೊಸನಗರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಆಟೋ ಮಾಲೀಕ ಹಾಗೂ ಚಾಲಕರ ಸಂಘದ ಗೌರವಾಧ್ಯಕ್ಷ ಗೋವಿಂದರಾಜ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ಉಪಾಧ್ಯಕ್ಷೆ ಕೃಷ್ಣವೇಣಿ, ಸದಸ್ಯರಾದ ಶಾಹೀನ ನಾಸಿರ್, ಗಾಯತ್ರಿ ನಾಗರಾಜ್, ಯಾಸಿರ್, ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಕನ್ನಡ ಸಂಘದ ಅಧ್ಯಕ್ಷ ಪ್ರಶಾಂತ್, ರಾಜ್ಯ ಮಟ್ಟದ ಕುಸ್ತಿಪಟು ಹೊಸನಗರದ ಮಹಿಳಾ ಪ್ರತಿಭೆ ಕುಮಾರಿ ಮೇಘನಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಮಾಜಿ ಅಧ್ಯಕ್ಷ ಕೆ ಇಲಿಯಾಸ್ ಮಾತನಾಡಿ, ಕರಾಟೆ ಕಿಂಗ್ ಕನ್ನಡದ ಮೇರು ನಟ ಕರಾಟೆ ಶಂಕರ್ ನಾಗ್ ರವರು ಕನ್ನಡದ ಕೀರ್ತಿ ಪತಾಕೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲೂ ಪ್ರಜ್ವಲಿಸಿದ್ದಾರೆ. ದಿ. ಶಂಕರ್ ನಾಗ್ ಹಾಗೂ ದಿ. ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಅವರ ನಟನ ಕೌಶಲ್ಯ ಅಪ್ರತಿಮವಾದದ್ದು ಈ ಅನರ್ಘ್ಯ ರತ್ನಗಳನ್ನು ಕಳೆದುಕೊಂಡು ಕರ್ನಾಟಕದ ಚಿತ್ರರಂಗ ಬಡವಾಗಿದೆ ಆದರೂ ಅವರ ಹೆಸರುಗಳು ಅಜರಾಮರವಾಗಿ ಉಳಿಯಲಿದೆ ಎಂದರು.

ರಾಜ್ಯೋತ್ಸವದ ಅಂಗವಾಗಿ ಹೊಸನಗರದ ಶ್ರೀ ಚೌಡಮ್ಮ ಆಟೋ ಸಂಘದ ಪದಾಧಿಕಾರಿಗಳಿಂದ ಸನ್ಮಾನಿಸಲಾಯಿತು.

ರಾಜ್ಯಮಟ್ಟದ ವೈಟ್ ಲಿಫ್ಟ್ಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮೇಘನ, ಆಟೋ ಮ್ಯೆಕಾನಿಕ್ ರಾಜೇಶ್ ಸೇರಿದಂತೆ ಹಲವರಿಗೆ ಸನ್ಮಾನಿಸಲಾಯಿತು.

ಜಯನಗರ ಗುರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!