ಹೊಸನಗರ ; ಕರಿನಗೊಳ್ಳಿ ಬಳಿ ಕಾರು ಅಪಘಾತ ! ಪವಾಡಸದೃಶ ರೀತಿಯಲ್ಲಿ ಪ್ರಯಾಣಿಕರು ಪಾರು !!

0
2618

ಹೊಸನಗರ : ಪಟ್ಟಣದಿಂದ ಮೂರು ಕಿಲೋಮೀಟರ್ ದೂರದ ಶಿವಮೊಗ್ಗ ರಸ್ತೆಯ ಕರಿನಗೊಳ್ಳಿ ಬಳಿ ಇಂದು ಬೆಳಿಗ್ಗೆ 11:15 ರ ಸಮಯದಲ್ಲಿ ರಿಪ್ಪನ್‌ಪೇಟೆಯಿಂದ ಹಿಲ್ಕುಂಜಿಗೆ ತೆರಳುತ್ತಿದ್ದ ಫೋರ್ಡ್ ಇಕೊಸ್ಪೋರ್ಟ್ ಕಾರು ಎದುರಿಗೆ ಬಂದ ವಾಹನ ತಪ್ಪಿಸಲು ಹೋಗಿ ವಿದ್ಯುತ್ ಕಂಬ ಹಾಗೂ ಮೈಲಿ ಕಲ್ಲಿಗೆ ಡಿಕ್ಕಿ ಹೊಡೆದು ಪಕ್ಕದ ಹಳ್ಳಕ್ಕೆ ಮಗುಚಿಬಿದ್ದ ಘಟನೆ ಸಂಭವಿಸಿದೆ.

ರಿಪ್ಪನ್‌ಪೇಟೆಯ ರಕ್ಷಿತ್ ಎಂಬುವವರಿಗೆ ಸೇರಿದ್ದೆನ್ನಲಾದ ಕಾರನ್ನು ರಕ್ಷಿತ್ ರವರೇ ಚಲಾಯಿಸುತ್ತಿದ್ದು ಕಾರಿನಲ್ಲಿ ಒಟ್ಟು ಐವರು ಪ್ರಯಾಣಿಕರು ಇದ್ದರೆಂದು ತಿಳಿದುಬಂದಿದೆ.

ಎಲ್ಲರೂ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದು ಅವರೆಲ್ಲರೂ ನಗರ ಸಮೀಪದ ಹಿಲ್ಕುಂಜಿಗೆ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರೆಂದು ತಿಳಿದುಬಂದಿದೆ.

ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಜಾಹಿರಾತು

LEAVE A REPLY

Please enter your comment!
Please enter your name here