ಹೊಸನಗರ ; ಕೃಷಿ ಪರಿಕರ ಮಾರಾಟಗಾರರಿಂದ ಕೀಟನಾಶಕ ಪ್ರಿನ್ಸಿಪಲ್ ಸರ್ಟಿಫಿಕೇಟ್ ಸೇರ್ಪಡೆಯಲ್ಲಿ ಪಿಸಿ ಸಂಖ್ಯೆ 5ರಿಂದ10ಕ್ಕೆ ಹೆಚ್ಚಿಸಲು ಮನವಿ

0
401

ಹೊಸನಗರ: ಕೀಟನಾಶಕ ಪ್ರಿನ್ಸಿಪಲ್ ಸರ್ಟಿಪಿಕೇಟ್ ಸೇರ್ಪಡೆಯಲ್ಲಿ ಪಿಸಿ ಸಂಖ್ಯೆಯನ್ನು 5ರಿಂದ 10ಕ್ಕ ಹೆಚ್ಚಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೊಸನಗರ ಕೃಷಿ ಪರಿಕರ ಮಾರಾಟಗಾರರು ತಾಲ್ಲೂಕು ಅಧ್ಯಕ್ಷರಾದ ರಾಘವೇಂದ್ರ ನಾಯಕ್‌ರವರ ನೇತೃತ್ವದಲ್ಲಿ ಹೊಸನಗರದ ಕೃಷಿ ಇಲಾಖೆಯ ಸಹಾಯಕ ನಿರ್ದೆಶಕರಾದ ಗಣೇಶ್ ಜೆ ಕಮ್ಮರರವರಿಗೆ ಮನವಿ ಪತ್ರ ಸಲ್ಲಿಸಿದರು.

ಮನವಿ ಪತ್ರದಲ್ಲಿ, ಹೊಸನಗರ ತಾಲ್ಲೂಕು ಕೃಷಿಕರೇ ಹೆಚ್ಚು ಇರುವ ಪ್ರದೇಶವಾಗಿರುವುದರಿಂದ ಬೇಸಾಯಕ್ಕೆ ಬೇಕಾಗುವ ರಸಗೊಬ್ಬರ ಮತ್ತು ಕೃಷಿಪರಿಕರಗಳ ಪೂರೈಕೆಯನ್ನು ಕಳೆದ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ. ಯಾವುದೇ ವ್ಯಾಪಾರ ವ್ಯವಹಾರಗಳಲ್ಲಿ ಅಡ್ಡಿ ಆತಂಕಗಳು ಬರುವುದು ಸಹಜ ಸರ್ಕಾರ ಮತ್ತು ರೈತರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡು ನಾವು ವಾಹಿವಾಟು ಮಾಡುತ್ತಿದ್ದೇವೆ ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಬಹಳಷ್ಟು ಅಡ್ಡಿ ಆತಂಕಗಳು ಎದುರಾಗುತ್ತಿದ್ದು ರಸಗೊಬ್ಬರ ಮತ್ತು ಕೃಷಿ ಪರಿಕರಗಳ ಮಾರಾಟಗಾರರಾದ ನಮಗೆ ಇವತ್ತಿನ ಕಾಲಮಾನದಲ್ಲಿ ಖರ್ಚು ವೆಚ್ಚಗಳು ಅಧಿಕವಾಗಿ ನಷ್ಟ ಅನುಭವಿಸುತ್ತಿದ್ದೇವೆ ಅಲ್ಲದೇ ಕುಟುಂಬದ ನಿರ್ವಹಣೆ ಮಕ್ಕಳ ವಿದ್ಯಾಭ್ಯಾಸ ಮನೆ ಮತ್ತು ಅಂಗಡಿ ಬಾಡಿಗೆ ಮಳಿಗೆ ಬಾಡಿಗೆ ಸಹಾಯಕರ ವೇತನ ಬ್ಯಾಂಕ್ ಬಡ್ಡಿ ಮತ್ತಿತರ ವೆಚ್ಚಗಳು ಅಡಿಟ್ ಫೀ ಆದಾಯ ತೆರಿಗೆ ಇಲಾಖಾ ಪರವಾನಿಗೆ ಶುಲ್ಕ ದೂರವಾಣಿ ಮತ್ತು ಇತರೆ ವೆಚ್ಚಗಳು ನಮ್ಮ ಲಾಭಾಂಶದಲ್ಲಿಯೇ ಸರಿದೂಗಿಸಬೇಕಾದ ಕಾರಣ ದೊರಕುತ್ತಿರುವ ಶೇ. 1% ಲಾಭಾಂಶ ಅತ್ಯಂತ ಕಡಿಮೆಯಾಗಿರುತ್ತದೆ ಮಾರಾಟಕ್ಕೆ ಬೇಕಾದ ರಸಗೊಬ್ಬರ ಮತ್ತಿತರ ಪರಿಕರಗಳ ಸರಬರಾಜು ಸಹ ಸಕಾಲದಲ್ಲಿ ಸರಬರಾಜು ಆಗುತ್ತಿಲ್ಲ ಇದರಿಂದಾಗಿ ನಮ್ಮ ವ್ಯವಹಾರವನ್ನು ನಡೆಸುವುದೇ ಅತ್ಯಂತ ಕಷ್ಟಕರವಾಗಿರುವುದರಿಂದ ನಮಗೆ ಸರ್ಕಾರದ ವತಿಯಿಂದ ಹಾಗೂ ಇಲಾಖೆಯ ವತಿಯಿಂದ ಕೀಟನಾಶಕ ಪ್ರಿನ್ಸಿಪಲ್ ಸರ್ಟಿಫೀಕೆಟ್ ಸೇರ್ಪಡೆಯಲ್ಲಿ ಪಿಸಿ ಸಂಖ್ಯೆಯನ್ನು 5ರಿಂದ10ಕ್ಕೆ ಏರಿಸುವುದು, ಕೀಟನಾಶಗಳ ಮಾದರಿ ಸಂಗ್ರಹ ಮಾಡಿದಾಗ ದರದಲ್ಲಿನ ರಾಸಾಯನಿಕಗಳಲ್ಲಿ ನಿಗದಿತ ಪ್ರಮಾಣದಲ್ಲಿ ವ್ಯತ್ಯಾಸವಿದ್ದಲ್ಲಿ ಅದಕ್ಕೆ ತಯಾರಕರನ್ನೇ ಹೊಣೆಗಾರರನ್ನಾಗಿ ಮಾಡುವುದು, ಇಲಾಖೆಗಳ ಪರವಾನಗಿ ಇಲ್ಲದೇ ಅನಧಿಕೃತ ರಸಗೊಬ್ಬರ ಸಾವಯುವ ಗೊಬ್ಬರ ಕೀಟನಾಶಕಗಳು ಮತ್ತು ಬಿತ್ತನೆ ಬೀಜಗಳನ್ನು ವ್ಯಾಪಾಕವಾಗಿ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದು ಬಿತ್ತನೆ ಹಂಗಾಮಿನಲ್ಲಿ ಅಂಗಡಿಗಳಲ್ಲಿ ರೈತರ ದಟ್ಟಣೆ ಇರುವ ಸಂದರ್ಭದಲ್ಲಿಯೇ ವಾಣಿಜ್ಯ ತೆರಿಗೆ ಇಲಾಖೆ ತೂಕ ಮತ್ತು ಅಳತೆ ಇಲಾಖೆಯೂ ಸೇರಿದಂತೆ ವಿವಿಧ ಇಲಾಖೆಯವರು ವ್ಯವಹಾರಕ್ಕೆ ತೊಂದರೆ ನೀಡುತ್ತಿದ್ದು ಸಾಧ್ಯವಾದಷ್ಟು ಬೇರೆ ದಿನಗಳಲ್ಲಿ ಬಂದು ತಪಾಸಣೆ ಕೈಗೆ ಎತ್ತಿಕೊಳ್ಳಲಿ. ರಸಗೊಬ್ಬರ ಮಾರಾಟಕ್ಕೆ ನೀಡುವ ಲಾಭಾಂಶವನ್ನು ಶೇ. 1%ರಿಂದ 5%ಗೆ ಹೆಚ್ಚಿಸುವುದು ಕಂಪನಿಗಳು ರಸಗೊಬ್ಬರದ ಜೊತೆ ವಿವಿಧ ಉತ್ಪನ್ನಗಳ ಲಿಂಕ್ ಸೇರ್ಪಡೆಯನ್ನು ಹೇರುತ್ತಿರುವುದನ್ನು ಕಡ್ಡಾಯವಾಗಿ ರದ್ದುಪಡಿಸಲಿ ಎಂದು ಇತ್ಯಾದಿ ಬೇಡಿಕೆಗಳು ನಮ್ಮದಾಗಿದ್ದು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಪತ್ರದಲ್ಲಿ ತಿಳಿಸಿ ಮನವಿ ಪತ್ರ ಸಲ್ಲಿಸಿದರು.

ಲೈಸನ್ಸ್ ಪಡೆಯಾದೆ ಮಾರಾಟ ಮಾಡಿದರೇ ಕೇಸು ದಾಖಲು: ಗಣೇಶ ಜೆ ಕಮ್ಮರ

ಹೊಸನಗರದ ಕೃಷಿ ಇಲಾಖೆಯ ಸಹಾಯಕ ನಿರ್ದೆಶಕರಾದ ಗಣೇಶ್ ಜೆ ಕಮ್ಮರರವರು ಮನವಿ ಸ್ವೀಕರಿಸಿ ಮಾತನಾಡಿ, ತಮ್ಮ ಬೇಡಿಕೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹಾಗೂ ಹೊಸನಗರ ತಾಲ್ಲೂಕಿನಲ್ಲಿ ಕೃಷಿ ಪರಿಕರಗಳ ವ್ಯಾಪಾರಿಗಳು ಪರವಾನಿಗೆ ಪಡೆಯದೆ ದಿನಸಿ ಅಂಗಡಿಗಳಲ್ಲಿ ಹಾಗೂ ಹಾರ್ಡ್‌ವೇರ್ ಅಂಗಡಿಗಳಲ್ಲಿ ಕೃಷಿ ಪರಿಕರ ವ್ಯಾಪಾರ ನಡೆಸುತ್ತಿದ್ದಾರೆ ಹಾಗೂ ಹಳ್ಳಿಯ ಅಂಗಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ ಎಂದು ತಾವು ನಮ್ಮ ಇಲಾಖೆಯ ಗಮನಕ್ಕೆ ತಂದಿದ್ದು ನಾಳೆಯಿಂದಲೇ ಅನಧಿಕೃತವಾಗಿ ಕೃಷಿ ಪರಿಕರವನ್ನು ವ್ಯಾಪಾರ ಮಾಡುತ್ತಿರುವ ಅಂಗಡಿಗಳ ಮೇಲೆ ಇಲಾಖೆಯ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮನವಿ ಪತ್ರ ನೀಡುವ ಸಂದರ್ಭದಲ್ಲಿ ಕಾರ್ಯದರ್ಶಿಯಾದ ಬಾಸ್ಕರ್.ಕೆ, ಕಳೂರು ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ, ವಿಥಲ್‌ರಾವ್, ಸಂದೀಪ, ನಾಗರಾಜ್, ಅಭಿಷೇಕ್‌ರಾವ್ ಇಲಾಖೆಯ ಸಿಬ್ಬಂದಿಗಳಾದ ಮಾರುತಿ, ಪ್ರತಿಮಾ, ಸುಬ್ರಹ್ಮಣ್ಯ ಮಹೇಶ್ ಹಾಗೂ ತಾಲ್ಲೂಕಿನ ಎಲ್ಲ ಕೃಷಿ ಪರಿಕರ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here