ಹೊಸನಗರ: ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹೊಸನಗರ ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಎರಡನೇ ಆವೃತ್ತಿಯ ಜಿಲ್ಲಾಮಟ್ಟದ ಕೊಡಚಾದ್ರಿ ಆರೋಗ್ಯ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶಿಕಾರಿಪುರ ಆರೋಗ್ಯ ಇಲಾಖೆ ತಂಡ ಅಂತಿಮ ಪಂದ್ಯದಲ್ಲಿ ವರುಣನ ಆರ್ಭಟಕ್ಕೆ ತುರ್ತಾಗಿ ಅಂತಿಮ ಪಂದ್ಯ ರದ್ದಾದ ಹಿನ್ನೆಲೆಯಲ್ಲಿ ಫಲಿತಾಂಶವನ್ನು ನಾಣ್ಯ ಚಿಮ್ಮುವ ಮೂಲಕ ಪ್ರಕಟಿಸಿದಾಗ ಶಿಕಾರಿಪುರ ಆರೋಗ್ಯದ ತಂಡ ಕೊಡಚಾದ್ರಿ ಆರೋಗ್ಯ ಕಪ್ – 2022 ಪಡೆಯಿತು. ಭದ್ರಾವತಿ ಆರೋಗ್ಯ ಇಲಾಖೆ ತಂಡ ರನ್ನರ್ಸ್ ಅಪ್ ಪಡೆಯುವ ಮೂಲಕ ಸಮಾಧಾನಪಟ್ಟುಕೊಂಡರು.
ಹೊಸನಗರ ಆರೋಗ್ಯ ಇಲಾಖೆ ತಂಡದವರು ಹಾಗೂ ಶಿವಮೊಗ್ಗದ ಮೆಗ್ಗಾನ್ ಬೋಧನಾ ಆಸ್ಪತ್ರೆ ತಂಡದವರು ಸತಿಯ ಬಹುಮಾನಗಳನ್ನು ಹಂಚಿಕೊಂಡರು.
ಭದ್ರಾವತಿ ಆರೋಗ್ಯ ಇಲಾಖೆ ತಂಡದ ಸಲ್ಮಾನ್ ಉತ್ತಮ ದಾಂಡಿಗ, ಹೊಸನಗರ ಆರೋಗ್ಯ ಇಲಾಖೆಯ ಶಿವು ಉತ್ತಮ ಬೌಲರ್, ಶಿವಮೊಗ್ಗ GAMC ಕಾಲೇಜು ತಂಡದ ರೇವಣಸಿದ್ದಪ್ಪ ಉತ್ತಮ ಕ್ಷೇತ್ರರಕ್ಷಕ ಪ್ರಶಸ್ತಿ, ತೀರ್ಥಹಳ್ಳಿ ಆರೋಗ್ಯ ಇಲಾಖೆಯ ದಯಾನಂದ್ ಉತ್ತಮ ವಿಕೆಟ್ ಕೀಪರ್, ಶಿವಮೊಗ್ಗ ಮೆಗ್ಗಾನ್ ಬೋಧನಾ ಆಸ್ಪತ್ರೆಯ ವಿನಯ್ ಮ್ಯಾನ್ ಆಫ್ ದಿ ಮ್ಯಾಚ್ ಹಾಗೂ ಶಿಕಾರಿಪುರ ಆರೋಗ್ಯ ಇಲಾಖೆಯ ಲಕ್ಷ್ಮಿಕಾಂತ್ ಉದಯೋನ್ಮುಖ ಆಟಗಾರ ಪ್ರಶಸ್ತಿ ಗಳಿಸಿದರು.
ಟಿಬಿ ಅಳಿಸಿ ಶಿವಮೊಗ್ಗ ಗೆಲ್ಲಿಸಿ ಸಂದೇಶದ ಹಿನ್ನೆಲೆಯಲ್ಲಿ ಏರ್ಪಡಿಸಿದ ಕೊಡಚಾದ್ರಿ ಆರೋಗ್ಯ ಕಪ್ ಪಂದ್ಯಾವಳಿಯನ್ನು ಕಾರ್ಯಕ್ರಮ ಆಯೋಜಿಸಿದ ಅತಿಥೇಯ ಹೊಸನಗರ ಆರೋಗ್ಯ ಇಲಾಖೆಯ ತಾಲೂಕು ಆರೋಗ್ಯ ಅಧಿಕಾರಿ ಡಾ. ಸುರೇಶ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ಉದ್ಘಾಟಿಸಿದರು.
Related