ಹೊಸನಗರ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿ ಆಚರಣೆ

0
168

ಹೊಸನಗರ: ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜು, ಹೊಸನಗರ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2, ರೇಂಜರ್ಸ್ ಮತ್ತು ರೋವರ್ಸ್ ಘಟಕದ ಆಯೋಜನೆಯಲ್ಲಿ ಅ. 02ರಂದು 152ನೇ ಗಾಂಧೀ ಜಯಂತಿ ಹಾಗೂ 117ನೇ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿಯನ್ನು ಕಾಲೇಜಿನ ಡಿಜಿಟಲ್ ಹಾಲ್ ನಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಿನ್ಸಿಪಾಲರಾದ ಜಯಪ್ಪ ಸಿ ರವರು ಗಾಂಧೀ ಜಯಂತಿ ಹಾಗೂ 117ನೇ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿಯ ಪ್ರಾಮುಖ್ಯತೆಯನ್ನು ನೆರೆದವರಲ್ಲಿ ತಿಳಿಸಿದರು.

ಕಾಲೇಜಿನ ಗ್ರಂಥಪಾಲಕರಾದ ಡಾ. ಲೋಕೇಶಪ್ಪ ಹೆಚ್. ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಈ ಎರಡೂ ಜಯಂತಿಯ ಮಹತ್ವವನ್ನು ತಿಳಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀರವರು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಕಾರ್ಯಕ್ರಮಾಧಿಕಾರಿಗಳಾದ ದೊಡ್ಡಯ್ಯ ಹೆಚ್, ರವರು ಪ್ರಾಸ್ಥಾವಿಕ ನುಡಿಯನ್ನಾಡಿದರು. ಕಾರ್ಯಕ್ರಮದಲ್ಲಿ ಬೋಧಕ ವರ್ಗದವರಾದ ರವಿ ಸಿ.ಹೆಚ್. ಮಂಜುನಾಥ ಡಿ. ಡಾ.ಬಸವರಾಜಪ್ಪ ಎಮ್.ಟಿ. ಡಾ.ಅಕ್ಷತಾ ಬಿ.ಜಿ., ಪದೀಪ್ ಕುಮಾರ್ ಎನ್. ರವರು ಹಾಗೂ ಬೋದಕೇತರ ವರ್ಗದವರು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2 – ರೇಂಜರ್ಸ್ ಮತ್ತು ರೋವರ್ಸ್ ಘಟಕದ ಸ್ವಯಂ ಸೇವಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿದ್ಯಾರ್ಥಿನಿಯಾದ ಅನಘ ರವರು ನಿರೂಪಿಸಿ, ವಿದ್ಯಾರ್ಥಿನಿಯಾದ ತೇಜಸ್ವಿನಿಯವರು ಸರ್ವರನ್ನೂ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಕಾರ್ಯಕ್ರಮಾಧಿಕಾರಿಗಳಾದ ಪ್ರತಿಮಾರವರು ಎಲ್ಲರನ್ನೂ ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here