ಹೊಸನಗರ : ಹಾಸನದಿಂದ ಹೊಸನಗರಕ್ಕೆ ಡೀಸೆಲ್ ತುಂಬಿಸಿಕೊಂಡು ಬರುತ್ತಿದ್ದ ಇಲ್ಲಿನ ಗುರುಶಕ್ತಿ ಫ್ಯೂಯೆಲ್ಸ್ ಅವರಿಗೆ ಸೇರಿದ ಟ್ಯಾಂಕರ್ ಇಲ್ಲಿಗೆ ಸಮೀಪದ ಕೊಪ್ಪರಗುಂಡಿ ಬಳಿ ತಡ ರಾತ್ರಿ 9.30 ರ ಸುಮಾರಿಗೆ ಮಗುಚಿಬಿದ್ದ ಕಾರಣ ಟ್ಯಾಂಕರಿನಲ್ಲಿದ್ದ 20 ಸಾವಿರ ಲೀಟರ್ ಡೀಸೆಲ್ ರಸ್ತೆ ಪಾಲಾದ ಘಟನೆ ನಡೆದಿದೆ.

ಇದರ ಪರಿಣಾಮ ಹೊಸನಗರ – ರಿಪ್ಪನ್ಪೇಟೆ ನಡುವಿನ ಮಾರ್ಗ ಸುಮಾರು 7 ಗಂಟೆ ಕಾಲ ಕಡಿತವಾಗಿದ್ದು ವಾಹನ ಸವಾರಕ್ಕೆ ಅಸ್ತವ್ಯಸ್ತವಾಗಿತ್ತು.
ಶುಕ್ರವಾರ ರಾತ್ರಿ 9.30 ರ ಸುಮಾರಿಗೆ ಸಂಭವಿಸಿ ಈ ಘಟನೆ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ರಕ್ಷಣಾ ಇಲಾಖೆ ಸಿಬ್ಬಂದಿಗಳ ಹರಸಾಹಸದಿಂದ ಟ್ಯಾಂಕರ್ ಮೇಲೆತ್ತುವಾಗ ಬೆಳಗಿನಜಾವ ಸುಮಾರು 4:30 ಆಗಿತ್ತು.

ಅಗ್ನಿಶಾಮಕದಳದ ಸಹಾಯಕ ಅಧಿಕಾರಿ ಕೆ.ಟಿ ರಾಜಪ್ಪ, ಪಿ. ಹಾಲೇಶಪ್ಪ, ಚಾಲಕ ಬಿ.ಜೆ ಶಿವರಾಜ್ ಹಾಗೂ ಸಿಬ್ಬಂದಿಗಳಾದ ನಾಗರಾಜ ಟಿ, ಮಂಜುನಾಥ, ಸಿ.ಎಂ ಮಠಪತಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
