ಹೊಸನಗರ ; ಖ್ಯಾತ ಕೀಬೋರ್ಡ್ ವಾದಕ ಪಂಚಿ ಇನ್ನಿಲ್ಲ

0
1565

ಹೊಸನಗರ: ಪಟ್ಟಣದ ಕೆಳದಿ ಚೆನ್ನಮ್ಮ ರಸ್ತೆಯ ನಿವಾಸಿಯಾದ ಎಲ್ಲರ ನೆಚ್ಚಿನ ಪಂಚಿ ಎಂದೇ ಖ್ಯಾತರಾದ ಆರ್. ಪಂಚಾಕ್ಷರಯ್ಯ (62) ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಹೃದಯಾಘಾತದಿಂದ ದೈವಾದೀನರಾಗಿದ್ದಾರೆ.

ದಿ. ರಾಜಶೇಖರಯ್ಯ ಅವರ ಪುತ್ರರಾದ ನೆಚ್ಚಿನ ಪಂಚಿ ಅವಿವಾಹಿತರಾಗಿದ್ದು ಕೀಬೋರ್ಡ್ ವಾದಕರಾಗಿದ್ದು, ಪಟ್ಟಣದ ಚಿಣ್ಣರಿಗೆ ಮಾತ್ರವಲ್ಲದೆ ತಾಲೂಕಿನಾದ್ಯಂತ ನೂರಾರು ಮಕ್ಕಳಿಗೆ ಕೀಬೋರ್ಡ್ ಕಲಿಸುವ ಮೂಲಕ ಕಲಾ ಪ್ರಪಂಚಕ್ಕೆ ಅವರನ್ನು ಪಾದಾರ್ಪಣೆ ಮಾಡಿದ್ದಾರೆ.

ಪಟ್ಟಣದಲ್ಲಿ ಸುಚಿರಾಗಮ ಕಲಾಕೂಟ ಎಂಬುದನ್ನು ರಚಿಸಿ ನೂರಾರು ಕಲಾವಿದರನ್ನು ಸೃಷ್ಟಿ ಮಾಡಿದ್ದಾರೆ. ಹೆಗ್ಗೋಡಿನ ನೀನಾಸಂ ನೊಂದಿಗೆ ಸಂಪರ್ಕವನ್ನು ಹೊಂದಿದ್ದರು ಅಲ್ಲದೆ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸುವ ಸಂಬಂಧ ಬೀದಿನಾಟಕಗಳನ್ನು ಆಯೋಜಿಸಿ ಸಂಗೀತ ನೃತ್ಯ ರೂಪಕಗಳನ್ನು ಬರೆದು ನಿರ್ದೇಶಿಸಿ ಹೆಸರುಗಳಿಸಿದ್ದರು‌.

ಅವಿವಾಹಿತರಾಗಿದ್ದ ಪಂಚಿಯೊಂದಿಗೆ ವಿಶ್ರಾಂತ ಪ್ರಾಂಶುಪಾಲ ಡಾ. ಮಾರ್ಷಲ್ ಶರಾಮ್, ಆಕಾಶವಾಣಿ ಸುಗಮ ಸಂಗೀತ ಕಲಾವಿದ ಕೆ ಸುರೇಶ್ ಕುಮಾರ್, ಡಾ. ಸೊನಲೆ ಶ್ರೀನಿವಾಸ್, ರಂಗಕರ್ಮಿ ವಿ ಶಾಂತಾರಾಮ, ಕೆ.ಜಿ ನಾಗೇಶ್, ವೆಂಕಟೇಶಮೂರ್ತಿ, ಶ್ರೀಕಂಠ ಮೊದಲಾದವರು ನಿಕಟ ಸಂಪರ್ಕವನ್ನು ಹೊಂದಿದ್ದರು.

ಪಂಚಿ ಅವರ ಶಿಷ್ಯಕೋಟಿಯ ಚಿಣ್ಣರು ಇಂದು ಬೆಳಗ್ಗೆ ಅವರ ನಿವಾಸಕ್ಕೆ ಕೀಬೋರ್ಡ್ ಕಲಿಯಲು ಬಂದಾಗಲಷ್ಟೇ ಪಂಚಿಯವರು ಇಹಲೋಕ ತ್ಯಜಿಸಿದ ಸಂಗತಿ ತಿಳಿದುಬಂದಿದೆ.

ಪಂಚಿ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಅವರ ಅಭಿಮಾನಿಗಳು ಅವರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದರು.

ಜಾಹಿರಾತು

LEAVE A REPLY

Please enter your comment!
Please enter your name here