ಹೊಸನಗರ ಖ್ಯಾತ ವೈದ್ಯ ಹಾಗೂ ಪುರಸಭಾ ಮಾಜಿ ಅಧ್ಯಕ್ಷ ಡಾ. ನಾಗರಾಜ ಚಡಗ ಇನ್ನಿಲ್ಲ‌ !

0
641

ಹೊಸನಗರ: ವೈದ್ಯ ಫ್ಯಾಮಿಲಿ ಎಂದೇ ಗುರುತಿಸಿಕೊಂಡಿದ್ದ ಪಟ್ಟಣದ ಶಿವಪ್ಪನಾಯಕ ರಸ್ತೆಯ ಚಡಗ ಫ್ಯಾಮಿಲಿಯ ಡಾ. ನಾಗರಾಜ ಚಡಗ (83) ಅವರು ಇಂದು ಸಂಜೆ 5.30 ರ ವೇಳೆಗೆ ಕೊನೆಯುಸಿರೆಳೆದರು.

ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧು-ಬಳಗ ಅಗಲಿದ್ದಾರೆ.

ಅವರ ತಂದೆ ವೆಂಕಟರಮಣ ಚಡಗ ರವರು ಪಟ್ಟಣದಲ್ಲಿ ವೈದ್ಯ ವೃತ್ತಿ ಪ್ರಾರಂಭಿಸಿ ಜನಾನುರಾಗಿಯಾಗಿದ್ದರು.

ಡಾ. ನಾಗರಾಜ ಚಡಗ ರವರ ಏಕೈಕ ಪುತ್ರ ರಾಜೇಶ್ ಚಡಗ ಅವರು ಸಹ ಈಗ ಪಟ್ಟಣದಲ್ಲಿ ವೈದ್ಯವೃತ್ತಿ ಮಾಡುತ್ತಿದ್ದಾರೆ.

ಡಾ. ನಾಗರಾಜ ಚಡಗ ರವರು 1986 ರಿಂದ 1990 ರವರೆಗೆ ಹೊಸನಗರ ಪುರಸಭೆ ಅಧ್ಯಕ್ಷರಾಗಿ ಹಾಗೂ ಪರಿವರ್ತಿತ ಮಂಡಲ ಪ್ರಧಾನರಾಗಿ ಉತ್ತಮ ಸೇವೆ ಸಲ್ಲಿಸಿದ್ದರು.

ಜನಾನುರಾಗಿಯಾಗಿದ್ದ ಡಾ. ಚಡಗ ಅವರ ನಿಧನದ ಸುದ್ದಿ ಹಬ್ಬುತ್ತಿದ್ದಂತೆ ನೂರಾರು ಜನ ಅಭಿಮಾನಿಗಳು ಅವರ ನಿವಾಸಕ್ಕೆ ತೆರಳಿ ಮೃತರ ಅಂತಿಮ ದರ್ಶನ ಪಡೆದರು

ಸಂತಾಪ :

ಡಾ. ನಾಗರಾಜ ಚಡಗ ರವರ ನಿಧನಕ್ಕೆ ತಾಲೂಕು ಬ್ರಾಹ್ಮಣ ಮಹಾಸಭಾ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಜಾಹಿರಾತು

LEAVE A REPLY

Please enter your comment!
Please enter your name here