ಹೊಸನಗರ: ಪಟ್ಟಣದಲ್ಲಿದ್ದ ಗೀತಾ ಟಾಕೀಸ್ ಮಲೀಕರಾದ ಶಕುಂತಲಮ್ಮ (88) ಇಂದು ಬೆಳಗಿನಜಾವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
ನಿನ್ನೆ ಅಸ್ವಸ್ಥಗೊಂಡಿದ್ದ ಅವರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಇಂದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಬೇಕು ಎನ್ನುವ ಹಂತದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಮೃತರು ದೈವೀ ಸಂಭೂತರು, ಕೊಡುಗೈ ದಾನಿಗಳು ಆಗಿದ್ದು ಕಳೆದ ಐದು ದಶಕಗಳಿಂದಲೂ ತಮ್ಮ ಸ್ವಗೃಹದಲ್ಲಿ ದಸರಾ ಗೊಂಬೆಗಳ ಪ್ರದರ್ಶನ ನಡೆಸಿಕೊಂಡು ಬಂದಿದ್ದಾರೆ.
ಮೃತರು ಮೂವರು ಪುತ್ರರು, ಓರ್ವ ಪುತ್ರಿ, ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಸಂತಾಪ:
ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಾ|| ರಾಮಚಂದ್ರರಾವ್, ಉಪಾಧ್ಯಕ್ಷ ಎನ್ ಶ್ರೀಧರ ಉಡುಪ, ದತ್ತಾತ್ರೇಯ ಉಡುಪ, ಮುರುಳಿಧರ್, ಶ್ರೀಪತಿರಾವ್ ಭೋಜರಾವ್, ಅಶ್ವಿನಿಕುಮಾರ್, ಮಿಲ್ ವಸವೆ ಈಶ್ವರಪ್ಪ ಗೌಡ, ಜಿ.ಟಿ ಈಶ್ವರಪ್ಪ ಗೌಡ ಇನ್ನೂ ಮುಂತಾದವರು ಮೃತರ ಮನೆಗೆ ತೆರಳಿ ಸಂತಾಪ ಸೂಚಿಸಿದ್ದಾರೆ.
Related