ಹೊಸನಗರ: ಚೆಕ್ ಅಮಾನ್ಯ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟ

0
1959

ಹೊಸನಗರ: ತಾಲ್ಲೂಕಿನ ರಾಮಚಂದ್ರಪುರ ಗ್ರಾಮದ ವಾಸಿಯಾದ ಎನ್.ಎನ್ ಮಹೇಶ ಇವರಿಂದ 4.97 ಲಕ್ಷ ಹಣವನ್ನು ಕೈಗಡ ಸಾಲ ಪಡೆದು ಅವರಿಂದ ಪಡೆದ ಸಾಲ ತೀರಿಸಲು ಚೆಕ್ ನೀಡಿದ ಹೊಸನಗರ ತಾಲ್ಲೂಕು ಗೋರ್‌ಗಲ್ ವಾಸಿಯಾದ ಶ್ರೀನಿವಾಸಮೂರ್ತಿ@ ಬೋಜಚಾರ್ಯ ಇವರು ಚೆಕ್ ನೀಡಿದ್ದು ಆರೋಪಿ ನೀಡಿದ ಚೆಕ್ ಸಾಕಷ್ಟು ಹಣವಿಲ್ಲವೆಂದು ವಾಪಸ್ಸು ಬಂದಿದ್ದು ಈ ಬಗ್ಗೆ ಪಿರ್ಯಾದಿ ಎನ್.ಎನ್ ಮಹೇಶ ಹೊಸನಗರ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದು ವಿಚಾರಣೆ ನಡೆಸಿದ ಹೊಸನಗರದ ಪ್ರಧಾನ ವ್ಯವಹಾರ ಮತ್ತು ಜೆ.ಎಂ.ಎಫ್.ಸಿ ನ್ಯಾಯಾದೀಶರಾದ ದೇಶಭೂಷಣ ಕೌಜಲಗಿ ಇವರು ದಿನಾಂಕ:19.04.2021 ರಂದು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ.

ಆರೋಪಿಗೆ 5.2 ಲಕ್ಷ ರೂಪಾಯಿಗಳನ್ನು ಪಾವತಿಸುವಂತೆ ಆದೇಶಿಸಿದ್ದು 5.2 ಲಕ್ಷ ರೂ. ನಲ್ಲಿ 4.97 ಲಕ್ಷ ರೂಪಾಯಿಗಳನ್ನು ಪೀರ್ಯಾದಿ ಎನ್.ಎನ್.ಮಹೇಶ ಇವರಿಗೆ ಪಾವತಿಸುವಂತೆ ಮತ್ತು 5ಸಾವಿರ ರೂಪಾಯಿಗಳನ್ನು ದಂಡ ಪಾವತಿಸುವಂತೆ ತೀರ್ಪು ನೀಡಿದ್ದು ದಂಡ ಪಾವತಿಸಲು ಆರೋಪಿಯು ವಿಫಲರಾದಲ್ಲಿ ಆರು ತಿಂಗಳ ಸಾಮಾನ್ಯ ಸಜೆ ಅನುಭವಿಸುವಂತೆ ಆದೇಶಿಸಿದ್ದು ಪಿರ್ಯಾದಿಯ ಪರ ವಕೀಲರಾದ ಬಿ.ಎಸ್.ವಿನಾಯಕ ಇವರು ವಾದ ಮಂಡಿಸಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here