ಹೊಸನಗರ ಜನತೆಗೆ ಇಲ್ಲ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರದ ಸೇವೆ !

0
469

ಹೊಸನಗರ: ರಾಜ್ಯದಲ್ಲೇ ಅತಿ ಹಿಂದುಳಿದ ಹಾಗೂ ಅತಿ ಹೆಚ್ಚು ವಿಸ್ತೀರ್ಣವುಳ್ಳ ತಾಲೂಕು ಕೇಂದ್ರವಾಗಿದ್ದು, ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರದ ಸೇವೆ ಮಾತ್ರ ಹೊಸನಗರ ಜನತೆಗೆ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿ ಕೃಷಿಕರು ಕೂಲಿಕಾರ್ಮಿಕರು ಬಡತನ ರೇಖೆಗಿಂತ ಕಡಿಮೆ ಇರುವ ಜನರೇ ಹೆಚ್ಚಿದ್ದು ಸಾಗರ ಹಾಗೂ ತೀರ್ಥಹಳ್ಳಿ ಕ್ಷೇತ್ರದ ಶಾಸಕರುಗಳ ಸೇವೆಗಳನ್ನು ಹೊಂದಿದ್ದರೂ ಸಹ ಇಲ್ಲಿ ಅಭಿವೃದ್ಧಿ ಜೀರೋ ಆಗಿದೆ.

ಹೊಸನಗರ ಸಾರ್ವಜನಿಕ ಆಸ್ಪತ್ರೆಯ ಜನೌಷಧಿ ಕೇಂದ್ರದ ಫಾರ್ಮಸಿಸ್ಟ್ ರಾಜೀನಾಮೆ ನೀಡಿ ಹೋಗಿದ್ದರಿಂದ ಕಳೆದ ಕೆಲವು ದಿನಗಳಿಂದ ಜನೌಷಧಿ ಕೇಂದ್ರ ಬಾಗಿಲು ಮುಚ್ಚಿದ್ದ ಕಾರಣ ಬಡಜನರಿಗೆ ಆರೋಗ್ಯ ಸೇವೆಯಲ್ಲಿ ಹೆಚ್ಚಿನ ಹೊರೆಯಾಗಿದೆ.

ಇಲ್ಲಿನ ಜನಪ್ರತಿನಿಧಿಗಳು ಸಹ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಇರುವುದು ಸಾರ್ವಜನಿಕ ಸೇವೆಯಲ್ಲಿ ಅವರಿಗಿರುವ ಕಾಳಜಿ ವ್ಯಕ್ತಪಡಿಸುತ್ತದೆ.

ಜಾಹಿರಾತು

LEAVE A REPLY

Please enter your comment!
Please enter your name here