ಹೊಸನಗರ: ಜನಪ್ರತಿನಿಧಿಗಳಿಂದಲೇ ಸರ್ಕಾರದ ರಾಜಧನ ಕೊಳ್ಳೆ..? ಮರಳು ಸಾಗಾಟ ಮಾಡುತ್ತಿದ್ದ ಎರಡು ಟಿಪ್ಪರ್ ಲಾರಿಗಳು ವಶಕ್ಕೆ…!

0
1484

ಹೊಸನಗರ: ಪಟ್ಟಣಕ್ಕೆ ಸಮೀಪದ ಶರಾವತಿ ಹಿನ್ನೀರು ಪ್ರದೇಶದಲ್ಲಿ ಮರಳು ಗಣಿಗಾರಿಕೆ ನಡೆಸಿ ಪರವಾನಗಿ ಇಲ್ಲದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎರಡು ಮರಳು ತುಂಬಿದ ಟಿಪ್ಪರ್‌ಗಳನ್ನು ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಟಿಪ್ಪರ್‌ಗಳು ಜಯನಗರ ಗ್ರಾಮ ಪಂಚಾಯಿತಿಯ ಸದಸ್ಯರಾದ ಮಳಲಿ ಗ್ರಾಮದ ರೆಡ್ಡಿ ಶ್ರೀನಿವಾಸ ಎಂಬಾತನಿಗೆ ಸೇರಿದ್ದು ಎನ್ನಲಾಗಿದ್ದು? ವಾಹನ ಚಾಲಕರು ಪರಾರಿಯಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಆದರೆ ಇಲ್ಲಿಯವರೆವಿಗೆ ಭೂ ಮತ್ತು ವಿಜ್ಞಾನ ಇಲಾಖೆಯವರು ಕೇಸು ಹಾಕಿಲ್ಲ ಎಂದು ಹೇಳಲಾಗಿದೆ.

ಹಲವು ಸಮಯದಿಂದಲೂ ರಾಜಕೀಯ ಮುಖಂಡರ ಸಾಂಗತ್ಯ ಇರುವ ಕೆಲವರು ರಾಜಾರೋಷವಾಗಿ ಮರಳು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆದಿತ್ತು. ಈಗ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಜನಸಾಮಾನ್ಯರು, ವಿಶೇಷವಾಗಿ ರಾಜಕೀಯ ವಲಯದಲ್ಲಿ ಸಕ್ರಿಯವಾಗಿದ್ದು, ಪ್ರಭಾವ ಬಳಸಿಕೊಂಡು ಅಕ್ರಮ ಮರಳು ದಂಧೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಲೂಕಿನ ಎಲ್ಲಾ ಅಕ್ರಮ ಗಣಿಗಾರಿಕೆಗಳು, ಅಕ್ರಮ ಮರಳು ಸಾಗಾಟ ದಂಧೆಗಳು ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಇತರ ಜನಪ್ರತಿನಿಧಿಗಳ ಆಶೀರ್ವಾದದಿಂದಲೇ ನಡೆಯುತ್ತಿರುವುದು ವಿಪರ್ಯಾಸವೆನಿಸಿದೆ.

ಜಾಹಿರಾತು

LEAVE A REPLY

Please enter your comment!
Please enter your name here