ಹೊಸನಗರ ಜನರಿಂದ ದೂ…..ರವಾದ BSNL ಸ್ಥಿರ ದೂರವಾಣಿಗಳು: ಅಗ್ನಿಶಾಮಕ ಕಚೇರಿಯಲ್ಲಿ ವಾರಕ್ಕೂ ಅಧಿಕ ಕಾಲದಿಂದ ರಿಂಗಣಿಸದೆ ಸ್ತಬ್ಧವಾದ ಫೋನ್..!

0
534

ಹೊಸನಗರ : ಹೊಸನಗರ ತಾಲೂಕು ಕೇಂದ್ರವಾಗಿದ್ದು ಮಲೆನಾಡಿನ ಕುಗ್ರಾಮವು ಆಗಿದೆ. ಯಾಕೆಂದರೆ ಇಲ್ಲಿಯ ಜನತೆ ಸರ್ಕಾರದಿಂದ ಮೂಲಭೂತವಾಗಿ ದೊರಕುವ ಎಲ್ಲ ಸೌಲಭ್ಯಗಳಿಂದಲೂ ವಂಚಿತರಾಗಿದ್ದಾರೆ.

ರಾಜ್ಯದ ಅತಿದೊಡ್ಡ ತಾಲೂಕು ಕೇಂದ್ರವಾಗಿದ್ದರೂ ಇದ್ಯಾವುದನ್ನು ಕೇಳಲು ಇದು ವಿಧಾನಸಭಾ ಕ್ಷೇತ್ರದಿಂದ ವಂಚಿತವಾಗಿದೆ. ಇಲ್ಲಿ ಶಾಸಕರು ಇಲ್ಲ. ತಾಲೂಕಿನ ಎಲ್ಲಾ ಸೌಲಭ್ಯಗಳು ಸಾಗರ ಹಾಗೂ ತೀರ್ಥಹಳ್ಳಿ ಪಾಲಾಗಿದೆ.

ಹೊಸನಗರ ತಾಲೂಕು ರಾಜ್ಯದ ವಿದ್ಯುತ್ ಯೋಜನೆಗಳಿಗೆ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದರು, ಇಡಿಯ ತಾಲೂಕಿಗೆ ವಿದ್ಯುತ್ ಮರೀಚಿಕೆಯಾಗಿದೆ. ಮೊಬೈಲ್ ಬಳಕೆಗಿಂತ ಹಿಂದೆ ಇಲ್ಲಿಯ ದೂರವಾಣಿ ಕೇಂದ್ರ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದು ಈಗ ಮೊಬೈಲ್ ಬಳಕೆ ಪ್ರಾರಂಭವಾದಾಗಿನಿಂದ ಸ್ಥಿರ ದೂರವಾಣಿ ಸೇವೆ ಸಹಿತ ಮರೀಚಿಕೆಯಾಗಿದೆ.

ಮಲೆನಾಡು ಈಗ ಬಿಸಿಲ ಬೇಗೆಯಿಂದ ಉಷ್ಣಾಂಶ ಹೆಚ್ಚಿ ಪದೇ-ಪದೇ ಅಗ್ನಿ ಆಕಸ್ಮಿಕಗಳು ಉಂಟಾಗುತ್ತಿವೆ. ಗ್ರಾಮೀಣ ಪ್ರದೇಶದಿಂದ ಅಗ್ನಿಶಾಮಕ ದಳ ಕಚೇರಿಗೆ ದೂರವಾಣಿಯಿಂದ ಸಂಪರ್ಕಿಸಲು ಸಾಧ್ಯವಾಗದ ಕಾರಣ ಈ ಸೇವೆಯಿಂದ ಸಹ ತಾಲೂಕಿನ ಗ್ರಾಮೀಣ ಜನರು ವಂಚಿತರಾಗಿದ್ದಾರೆ.

ಕಳೆದ 8-10 ದಿನಗಳಿಂದ ಅಗ್ನಿಶಾಮಕ ದಳದ ಕಚೇರಿಯ ಸ್ಥಿರ ದೂರವಾಣಿ ಸಂಪರ್ಕ ಕಡಿತಗೊಂಡಿದ್ದು ಕಚೇರಿ ಮೇಲ್ವಿಚಾರಕರು ದುರಸ್ತಿ ಬಗ್ಗೆ ಹಲವಾರು ಬಾರಿ ಹೇಳಿದರೂ ಇದಕ್ಕೆ ಸಂಪರ್ಕ ನೀಡುವಲ್ಲಿ ದೂರವಾಣಿ ಇಲಾಖೆ ನಿರ್ಲಕ್ಷ್ಯ ಭಾವನೆ ತೋರುತ್ತಿರುವುದರಿಂದ ತಾಲೂಕಿನ ಗ್ರಾಮೀಣ ಪ್ರದೇಶದ ಜನರು ಅಗ್ನಿಶಾಮಕ ದಳದ ಸೇವೆಯಿಂದ ವಂಚಿತರಾಗಿದ್ದಾರೆ.

ಸಂಬಂಧಪಟ್ಟವರು ತಕ್ಷಣ ಈ ದೂರವಾಣಿ ಸಂಪರ್ಕವನ್ನು ಪುನರ್ ಕಲ್ಪಿಸಿ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸುತ್ತಾರೆ ಎಂದು ಜನತೆ ಕಾಯುತ್ತಿದ್ದು ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಬೇಕೆಂದು ಆಶಿಸಿದ್ದಾರೆ.

ಹೊಸನಗರ ಸುದ್ದಿಗಳಿಗಾಗಿ ಸಂಪರ್ಕಿಸಿ : 8277173177
ಜಾಹಿರಾತು

LEAVE A REPLY

Please enter your comment!
Please enter your name here