ಹೊಸನಗರ; ಟಿಪ್ಪರ್ ಲಾರಿ ಮತ್ತು ಮಾರುತಿ ಓಮ್ನಿ ನಡುವೆ ಭೀಕರ ಅಪಘಾತ !

0
2027

ಹೊಸನಗರ: ಸಾಗರ ರಸ್ತೆಯ ಅಂಕ್ರೋಡಿ ಮೋರಿ ಬಳಿಯ ತಿರುವಿನಲ್ಲಿ ಹೊಸನಗರ ಕಡೆಯಿಂದ ಸಾಗರ ಕಡೆಗೆ ತೆರಳುವ ಮಾರುತಿ ಓಮ್ನಿ ಹಾಗೂ ಸಾಗರ ಕಡೆಯಿಂದ ಹೊಸನಗರದ ಕಡೆ ಬರುತ್ತಿದ್ದ ಟಿಪ್ಪರ್ ಲಾರು ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮಾರುತಿ ಓಮ್ಮಿ ಚಾಲನೆ ಮಾಡುತ್ತಿದ್ದ ಚಿಕ್ಕನಕೊಪ್ಪದ ಸ್ವರೂಪ್ ಎಂಬುವವರ ಕಾಲಿಗೆ ತೀವ್ರ ಪೆಟ್ಟಾಗಿದ್ದು ಚಿಕಿತ್ಸೆಗಾಗಿ ಸಾಗರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಇಂದು ಬೆಳಿಗ್ಗೆ ಸುಮಾರು 10:15 ರ ಸಮಯದಲ್ಲಿ ಈ ಅಪಘಾತ ಸಂಭವಿಸಿದ್ದು ಸುದ್ದಿ ತಿಳಿದ ತಕ್ಷಣ ಹೊಸನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ಕ್ರಮ ಜರುಗಿಸಿದರು.

ಮರಳು, ಜಲ್ಲಿ ಕಲ್ಲುಗಳು ತುಂಬಿದ ಟಿಪ್ಪರ್ ಲಾರಿಗಳು ಈ ಭಾಗದಲ್ಲಿ ಅತಿವೇಗದ ಚಾಲನೆ ಮಾಡುತ್ತಿರುವ ಕಾರಣ ಹೊಸನಗರ ಆಸುಪಾಸಿನಲ್ಲಿ ಪದೇ ಪದೇ ಈ ರೀತಿಯ ಅಪಘಾತಗಳು ಸಂಭವಿಸುತ್ತಿವೆ. ಈ ನಿಟ್ಟಿನಲ್ಲಿ ರಕ್ಷಣಾ ಇಲಾಖೆ ಅವರು ಅತಿ ವೇಗದ ಚಾಲನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here