ಹೊಸನಗರ ತಾಪಂ ಡ್ರೈನೇಜ್‌ ಹೊಂಡಕ್ಕೆ ಬಿದ್ದ ನಾಯಿ ಮರಿಯನ್ನು ಜೀವಂತವಾಗಿ ಹೊರ ತೆಗೆದ ಪೌರ ನೌಕರರು

0
433

ಹೊಸನಗರ: ತಾಲ್ಲೂಕು ಪಂಚಾಯಿತಿಯ ಹಿಂಬಾಗದಲ್ಲಿರುವ ಗೃಹಮಂತ್ರಿ ಆರಗ ಜಾನೇಂದ್ರರವರ ಕಛೇರಿಯ ಹಿಂಭಾಗದ ಡ್ರೈನೇಜ್‌ಗೆ ಬಿದ್ದ ಪುಟ್ಟ ನಾಯಿ ಮರಿಯನ್ನು ಬದುಕುಳಿಸಿದ ಹೊಸನಗರ ಪೌರ ನೌಕರರ ಕೆಲಸ ಎಲ್ಲರಿಗೂ ಮೆಚ್ಚುಗೆಯಾಗಿದೆ.

ಘಟನೆ ವಿವರ:

ಹೊಸನಗರ ತಾಲ್ಲೂಕು ಪಂಚಾಯಿತಿಯ ಹಿಂಭಾಗ ಗೃಹಮಂತ್ರಿ ಆರಗ ಜಾನೇಂದ್ರರವರ ಕಛೇರಿಯಿದ್ದು ಸುಮಾರು 25 ವರ್ಷಗಳ ಹಿಂದೆ ಹಿಂಭಾಗದಲ್ಲಿ ಡ್ರೈನೇಜ್ ನಿರ್ಮಿಸಿ ಸುಮಾರು ಹತ್ತು ಅಡಿ ಹೊಂಡ ತೋಡಿ ಹೊಂಡಕ್ಕೆ ಕಲ್ಲು ಮುಚ್ಚಿ ಮೇಲ್ಭಾಗದಲ್ಲಿ ಮಣ್ಣು ಹಾಕಲಾಗಿತ್ತು. ಕಛೇರಿಯಿಂದ ಬರುವ ನೀರಿಗೆ ಜಂಕ್ಷನ್ ಮಾಡಿ ಕಛೇರಿಯಿಂದ ಬಂದ ನೀರು ಜಂಕ್ಷನ್ ಮೂಲಕ ಒಂದು ಪೈಪ್ ನಿಂದ ಬಂದ ನೀರು ಜಂಕ್ಷನ್ ಮೂಲಕ ಇನ್ನೊಂದು ಪೈಪ್ ಮೂಲಕ ಹೊಂಡಕ್ಕೆ ಹೋಗುತ್ತಿತ್ತು ಜಂಕ್ಷನ್ ಮಾಡಿರುವ ಜಾಗದಲ್ಲಿ ಕಲ್ಲು ಮುಚ್ಚಿಡಲಾಗಿತ್ತು ಆದರೆ ಯ್ಯಾರು ಆ ಕಲ್ಲನ್ನು ತೆಗೆದು ಜಂಕ್ಷನ್‌ನ್ನು ಓಪನ್ ಇಟ್ಟಿದ್ದಾರೆ. ಬೀದಿಯ ನಾಯಿಯೊಂದು ತಾಲ್ಲೂಕು ಪಂಚಾಯಿತಿಯ ಹಿಂಭಾಗ ನಾಲ್ಕು ಮರಿಗಳಿಗೆ 15ದಿನಗಳ ಹಿಂದೆ ಜನ್ಮ ನೀಡಿದೆ ಆ ನಾಯಿಮರಿಗಳು ಅಲ್ಲಿ ಇಲ್ಲಿ ಸುತ್ತಾಡಿಕೊಂಡು ಇರುವಾಗ ಒಂದು ಪುಟ್ಟ ಮರಿ ಜಕ್ಷನ್ ಒಳಗೆ ಹೋಗಿ ಪೈಪ್ ಮೂಲಕ ಒಳ ಹೊಕ್ಕೂ ಡ್ರೈನೇಜ್ ಗುಂಡಿಗೆ ಬಿದ್ದಿದೆ ಪುಟ್ಟ ನಾಯಿ ಮರಿಯ ಕೂಗಾಡವನ್ನು ಕಂಡ ಅಲ್ಲೇ ಪಕ್ಕದಲ್ಲಿಂದ ಸಮಾಜ ಕಲ್ಯಾಣ ಇಲಾಖೆಯ ಮಹಿಳ ಸಿಬ್ಬಂದಿಯಾದ ಅಂಬಿಕಾರವರ ಕಿವಿಗೆ ಬಿದ್ದಿದೆ ಏನಾದರು ಮಾಡಿ ಆ ನಾಯಿಮರಿಯನ್ನು ಉಳಿಸುವ ಉದ್ದೇಶದಿಂದ ಪ್ರಾಣಿ ಪ್ರಿಯರಾದ ಪತ್ರಕರ್ತ ಹೆಚ್.ಎಸ್.ನಾಗರಾಜ್‌ರವರ ಗಮನಕ್ಕೆ ತಂದಿದ್ದಾರೆ.

ಗಮನಕ್ಕೆ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪತ್ರಕರ್ತ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಬಾಲಚಂದ್ರಪ್ಪ ಹಾಗೂ ಆರೋಗ್ಯಾಧಿಕಾರಿ ಪ್ರಶಾಂತ್‌ರವರ ಗಮನಕ್ಕೆ ತಂದು 5ಜನ ಪೌರ ನೌಕರರನ್ನು ಶನಿವಾರ ಬೆಳಿಗ್ಗೆ ಕರೆದುಕೊಂಡು ಹೋದಾಗ ನಾಯಿಮರಿಯ ಕೂಗಾಟದ ಶಬ್ದ ನಿಲ್ಲಿಸಿತ್ತು ಬಹುಶಃ ಮೃತಪಟ್ಟಿರಬಹುದು ಎಂದು ತಿಳಿದು ವಾಪಸ್ಸು ಹೋಗಿದ್ದಾರೆ ಆದರೆ ಸಂಜೆಯ ಸಮಯದಲ್ಲಿ ನಾಯಿಮರಿಯ ಕೂಗಾಡ ಪುನಃ ಕೇಳಿದಾದ ಪತ್ರಕರ್ತ ನಾಗರಾಜ್ ಏನಾದರೂ ಮಾಡಿ ಬದುಕಿಸಲೇಬೇಕು ಎಂದು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಸಿಬ್ಬಂದಿಗಳ ಸಮ್ಮುಖದಲ್ಲಿ ಪೌರ ನೌಕರರು ಹತ್ತು ಅಡಿ ಹೊಂಡ ತೆಗೆದು ಡ್ರೈನೇಜ್‌ಗೆ ಹಾಕಿರುವ ಕಲ್ಲನ್ನು ಹೊರ ತೆಗೆದಾಗ ಪುಟ್ಟನಾಯಿಮರಿ ಸುಮಾರು 15 ಅಡಿ ಹೊಂಡದಲ್ಲಿ ಕೂಗಾಡ ನಡೆಸುತ್ತಿದ್ದು ಅದನ್ನು ಜೀವಂತ ಮೇಲೆ ತೆಗೆಯುವುದರಲ್ಲಿ ಪೌರ ನೌಕರರು ಯಶಸ್ವಿಯಾಗಿದ್ದಾರೆ.

ಪೊಲೀಸ್ ಇಲಾಖೆಗೆ ದೂರು:

ನಾಯಿ ಮರಿಯನ್ನು ಹೊರ ತೆಗೆದು ಡ್ರೈನೇಜ್‌ಗೆ ಕಲ್ಲು ಹಾಕಿ ಮಣ್ಣು ಮುಚ್ಚಿ ಹೋದ ನಂತರ ರಾತ್ರಿ 10ಗಂಟೆಯ ಸಮಯದಲ್ಲಿ ಹೊಸನಗರ ಪೊಲೀಸ್ ಇಲಾಖೆಯ 112ಕ್ಕೆ ಪೋನ್ ಮಾಡಿ ತಾಲ್ಲೂಕು ಪಂಚಾಯಿತಿ ಹಿಂಭಾಗ ಯಾರು ಶವವನ್ನು ಹೂತ್ತಿದ್ದಾರೆ ತಕ್ಷಣ ತನಿಖೆ ನಡೆಸಿ ಎಂದು ಕರೆ ಮಾಡಿರುವುದಕ್ಕೆ ತಕ್ಷಣ ಸ್ವಂದಿಸಿದ ಪೊಲೀಸ್ ಇಲಾಖೆ ತನಿಖೆ ನಡೆಸಲು ಹೋಗಿದ್ದು ಆದರೆ ನಾಯಿ ಮರಿಯನ್ನು ಪೌರ ನೌಕರರು ಹೊರ ತೆಗೆಯಲು ಗುಂಡಿ ತೋಡಿದ್ದಾರೆ ನಂತರ ಮುಚ್ಚಿ ಹೋಗಿದ್ದೇವೆ ಎಂದು ಪೌರ ನೌಕರರು ಪೊಲೀಸ್ ಇಲಾಖೆಗೆ ತಿಳಿಸಿದ್ದಾರೆ.

ತಾಯಿ ನಾಯಿಯ ಕೃತಜ್ಞತೆ:

ಪುಟ್ಟ ನಾಯಿಮರಿಯನ್ನು ಹೊರ ತೆಗೆದಾಗ ತಾಯಿಯು ಪೌರ ನೌಕರರರಿಗೆ ತೆಗೆಯುವ ಸಂದರ್ಭದಲ್ಲಿ ಇದ್ದ ಸಿಬ್ಬಂದಿಗಳ ಬಳಿ ಹೋಗಿ ಎಲ್ಲರ ಕಾಲಿಗೆ ಬೀಳುವ ದೃಶ್ಯವಂತೂ ಮನುಕುಲವನ್ನು ನಾಚಿಸುವಂತೆ ಇದ್ದು ಉಪಕಾರ ಮಾಡಿದರೆ ನಾಯಿಗೆ ಇರುವ ನಿಯತ್ತು ಇಂದಿನ ಮನುಷ್ಯರಲ್ಲಿ ಮಾಯವಾದಂತಿದೆ. ತಾಯಿ ನಾಯಿ ತನ್ನ ಮರಿಯನ್ನು ಬದುಕಿಸರುವುದಕ್ಕೆ ಎಲ್ಲರ ಕಾಲಗೆ ಬಿದ್ದು ತನ್ನ ಕೃತಜ್ಞತೆ ಸಲ್ಲಿಸಿದೆ.

ಪೌರ ನೌಕರರು ಒಂದು ಪಟ್ಟ ನಾಯಿಮರಿಯ ಜೀವ ಉಳಿಸಲು ತನ್ನ ಪ್ರಾಣವನ್ನೇ ಪಣಕಿಟ್ಟು ಜೀವಂತ ಹೊರ ತೆಗೆದ ಪೌರ ನೌಕರರಾದ ನಾಗರಾಜ್, ಡ್ರೈವರ್ ಚಂದ್ರಪ್ಪ, ಚಂದ್ರಶೇಖರ, ನಾಗಪ್ಪ, ರಮೇಶ್, ಸುನೀಲ್‌ರವರಿಗೆ ನಾಯಿಮರಿಯನ್ನು ಬದುಕಿಸಲೇ ಬೇಕು ಎಂದು ಕಷ್ಟಪಟ್ಟ ಪತ್ರಕರ್ತ ನಾಗರಾಜ್‌ರವರಿಗೆ ತಾಲ್ಲೂಕು ಕಛೇರಿಯ ತಹಶೀಲ್ದಾರ್ ರಾಜೀವ್ ಸಿಬ್ಬಂದಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಹಾಗೂ ಸಿಬ್ಬಂದಿಗಳು, ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಬಾಲಚಂದ್ರಪ್ಪ, ಆರೋಗ್ಯಾಧಿಕಾರಿ ಪ್ರಶಾಂತ್ ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here