ಹೊಸನಗರ : ಪಟ್ಟಣ, ಜಯನಗರ, ನಗರ, ಬಟ್ಟೆಮಲ್ಲಪ್ಪ, ರಿಪ್ಪನ್ಪೇಟೆ, ಗರ್ತಿಕೆರೆ ಸೇರಿದಂತೆ ವಿವಿಧೆಡೆ ಸಾಮರಸ್ಯ ಸಹಬಾಳ್ವೆಯ ರಂಜಾನ್ ಹಬ್ಬವನ್ನು ಅತ್ಯಂತ ಶ್ರದ್ಧೆಯಿಂದ ಒಂದು ತಿಂಗಳ ಉಪವಾಸದ ಆಚರಣೆ ಪೂರ್ಣಗೊಳಿಸಿ ರಂಜಾನ್ ಹಬ್ಬವನ್ನು ಸಂಭ್ರಮಿಸಿದರು.
ಮುಸ್ಲಿಂ ಬಾಂಧವರು ಇಂದು ಬೆಳಿಗ್ಗೆ ಈದ್ಗಾ ಮೈದಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಒಂದು ತಿಂಗಳ ಉಪವಾಸಕ್ಕೆ ಅಂತ್ಯಹಾಡಿ ಪರಸ್ಪರ ಶುಭಾಶಯವನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬದ ಸಂಭ್ರಮದಲ್ಲಿ ತೊಡಗಿಸಿಕೊಂಡಿದ್ದರು.
ಹೊಸನಗರದ ಕಳೂರು ಜಾಮಿಯಾ ಮಸ್ಜಿದ್ ವತಿಯಿಂದ ಸಡಗರ ಸಂಭ್ರಮದಿಂದ ಈದ್ ಉಲ್ ಫಿತರ್ ಆಚರಿಸಲಾಯಿತು. ಹಳೆಸಾಗರ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸೇರಿದ ಮುಸ್ಲಿಂ ಬಾಂಧವರು ಕಳೂರು ಜಾಮಿಯಾ ಮಸ್ಜಿದ್ ನ್ನ ಖತೀಬರಾದ ಜನಾಬ್ ಮೌಲಾನಾ ಮಾಸೂಂ ಅಲಿ ಖಾಸಿಮಿ ಇವರ ನೇತೃತ್ವದಲ್ಲಿ ಈದ್ ನಮಾಜ್ ನಿರ್ವಹಿಸಿದರು.
ಮಸ್ಜಿದ್ ಕಮಿಟಿಯ ಅಧ್ಯಕ್ಷರಾದ ಭಾಷಾ ಸಾಬ್, ಉಪಾಧ್ಯಕ್ಷರಾದ ಅನ್ವರ್ ಸಿದ್ದೀಕ್, ಕಾರ್ಯದರ್ಶಿಗಳಾದ ಅಬ್ದುಲ್ ರಝಾಕ್, ಸದಸ್ಯರುಗಳಾದ ಕೆ.ಇಲಿಯಾಸ್, ಎಸ್.ಎಂ ಸಲೀಂ, ಇತರೆ ಪದಾಧಿಕಾರಿಗಳು, ಸಮುದಾಯದ ಪ್ರಮುಖರಾದ ಎಂ.ಡಿ.ಉಸ್ಮಾನ್ ಸಾಬ್,ಅಬ್ದುಲ್ ಘನಿ ಸಾಬ್, ಬಿ.ಕೆ ಅಬ್ಬು ಸಾಬ್,ಜಾಫರ್ ಸಾಬ್, ಮಹ್ಮದ್ ಶರೀಫ್ ಸಾಬ್, ಭಾಷಾ ಸಾಬ್ (TMC) ಮುಂತಾದವರು ಹಾಜರಿದ್ದರು.