ಹೊಸನಗರ ತಾಲೂಕಿನಾದ್ಯಂತ ಧಾರಾಕಾರ ವರ್ಷಧಾರೆ ಜನಜೀವನ ಸಂಪೂರ್ಣ ಅಸ್ತವ್ಯಸ್ತ ; ಬಿಟ್ಟುಬಿಡದೆ ಸುರಿಯುತ್ತಿರುವ ಆಶ್ಲೇಷ ಮಳೆ ಅಬ್ಬರದಿಂದ ಲಿಂಗನಮಕ್ಕಿ ಜಲಾಶಯ ಭರ್ತಿಗೆ ಕೇವಲ 14 ಅಡಿಯಷ್ಟೇ ಬಾಕಿ !

0
2349

ಹೊಸನಗರ: ಮಲೆನಾಡಿನ ತವರೂರು ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕಿನಾದ್ಯಂತ ಆಶ್ಲೇಷ ಮಳೆಯ ಅಬ್ಬರ ತೀವ್ರಗೊಂಡಿದೆ.

ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ಅನ್ನದಾತ ಕಂಗಾಲಾಗಿದ್ದಾನೆ. ತಾಲೂಕಿನಾದ್ಯಂತ ಆಶ್ಲೇಷ ಮಳೆಯ ಆರ್ಭಟ ತೀವ್ರಗೊಂಡಿದ್ದು ಲಿಂಗನಮಕ್ಕಿ ಜಲಾಶಯಕ್ಕೆ 40 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಇಂದು ಬೆಳಗ್ಗೆಯಿಂದ ಬಿಟ್ಟು ಬಿಡದೆ ಭಾರಿ ಮಳೆಯಾಗಿತ್ತಿದ್ದು ಶಾಲೆಗೆ ತೆರಳಿದ್ದ ಮಕ್ಕಳು ಮನೆ ಸೇರಲು ಪರದಾಡಿದ ದೃಶ್ಯ ಕಂಡುಬಂದಿತು.

ಇಂದು ಸಂಜೆ 5 ಗಂಟೆ ಸುಮಾರಿಗೆ ಸುರಿದ ಭಾರೀ ಪ್ರಮಾಣದ ಮಳೆಯಾಗಿದ್ದು ಹಲವೆಡೆ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಜಮೀನುಗಳು ಜಲಾವೃತವಾಗಿದ್ದು ನಾಟಿ ಮಾಡಿದ ಭತ್ತದ ಗದ್ದೆಗಳು ಕೆರೆಯಂತಾಗಿದ್ದು ಇದರಿಂದಾಗಿ ಅನ್ನದಾತ ಕಂಗಾಲಾಗಿದ್ದಾನೆ‌.

ಕೆರೆ – ಕಟ್ಟೆಗಳು ತುಂಬಿದ್ದು ಹಳ್ಳ – ಕೊಳ್ಳಗಳು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಜಾಹಿರಾತು

LEAVE A REPLY

Please enter your comment!
Please enter your name here