23.2 C
Shimoga
Sunday, November 27, 2022

ಹೊಸನಗರ ತಾಲೂಕಿನ ಮತ್ತೊಂದು ಕಾಲೇಜಿನ ಬೀಗ ಮರಿದು ₹ 25 ಸಾವಿರಕ್ಕೂ ಅಧಿಕ ಹಣ ಕಳ್ಳತನ ; ಒಂದು ವಾರದೀಚೆಗೆ ಒಂದಲ್ಲ, ಎರಡಲ್ಲ, ಮೂರಲ್ಲ, ಇದು ನಾಲ್ಕನೇ ಪ್ರಕರಣ !!

ಹೊಸನಗರ : ತಡರಾತ್ರಿ ತಾಲೂಕಿನ ಮತ್ತೊಂದು ಕಾಲೇಜಿನ ಬಾಗಿಲು ಮುರಿದು ಸುಮಾರು 25 ಸಾವಿರಕ್ಕೂ ಅಧಿಕ ಹಣ ದೋಚಿರುವ ಘಟನೆ ನಡೆದಿದೆ.

ರಿಪ್ಪನ್‌ಪೇಟೆ ಸಮೀಪದ ಅಮೃತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರ ಕೊಠಡಿ ಬೀಗ ಮುರಿದು ಬೀರುವನ್ನು ಜಾಲಾಡಿ ಸುಮಾರು 25 ಸಾವಿರಕ್ಕೂ ಅಧಿಕ ಹಣ ದೋಚಿರುವ ಘಟನೆ ತಡರಾತ್ರಿ ನಡೆದಿದ್ದು ಕಳೆದ ಒಂದು ವಾರದೀಚೆಗೆ ತಾಲೂಕಿನಲ್ಲಿ ಒಂದಲ್ಲ, ಎರಡಲ್ಲ, ಮೂರಲ್ಲ, ಇದು ನಾಲ್ಕನೇ ಪ್ರಕರಣವಾಗಿದೆ.

ಹೌದು, ಅ.13 ರ ರಾತ್ರಿ ಹೊಸನಗರದ ಕೊಡಚಾದ್ರಿ ಪದವಿ ಕಾಲೇಜು ನಂತರ ಅ.17 ರ ರಾತ್ರಿ ನಗರ ಅಮೃತ ವಿದ್ಯಾಲಯದ ಕಳ್ಳತನದ ಬಳಿಕ, ನಗರ ವಿದ್ಯಾಸಂಸ್ಥೆಯ ಹೈಸ್ಕೂಲು ವಿಭಾಗದಲ್ಲಿ ಕಳ್ಳತನಕ್ಕೆ ಪ್ರಯತ್ನಿಸಿದ ಘಟನೆ ನಡೆದಿತ್ತು. ಇದೀಗ ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲೂ ಅಂತಹದೇ ಪ್ರಕರಣ ನಡೆದಿದೆ.

ಘಟನಾ ಸ್ಥಳಕ್ಕೆ ರಿಪ್ಪನ್‌ಪೇಟೆ ಠಾಣೆ ಪಿಎಸ್ಐ ಶಿವಾನಂದ ಕೋಳಿ, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಈ ನಾಲ್ಕು ಕಡೆ ನಡೆದ ಪ್ರಕರಣಗಳು ಒಂದೇ ರೀತಿಯಲ್ಲಿದ್ದು ಶಿಕ್ಷಣ ಸಂಸ್ಥೆಗಳೇ ಈ ಖದೀಮರ ಟಾರ್ಗೆಟ್ ಆಗಿದ್ದು, ಕಳ್ಳರ ಬೇಟೆ ಪೊಲೀಸರಿಗೆ ಈಗ ತೀವ್ರ ತಲೆ ನೋವಾಗಿ ಪರಿಣಮಿಸಿದೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!