20.6 C
Shimoga
Friday, December 9, 2022

ಹೊಸನಗರ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಅಧ್ಯಕ್ಷರಾಗಿ ಶಶಿಕಲಾ ಗಣಪತಿ ಅವಿರೋಧವಾಗಿ ಆಯ್ಕೆ

ಹೊಸನಗರ : ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಅಧ್ಯಕ್ಷರಾಗಿ ಶುಂಠಿಕೊಪ್ಪದ ಶಶಿಕಲಾ ಗಣಪತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಶಾಖವಳ್ಳಿಯ ತಾರಾ, ಉಪಾಧ್ಯಕ್ಷರಾಗಿ ಬಾಳೆಕೊಪ್ಪದ ಜಯ ಹಾಗೂ ಶರ್ಮಿಳ, ಪ್ರಧಾನ ಕಾರ್ಯದರ್ಶಿಯಾಗಿ ಬಾಳೂರಿನ ಲೀಲಾವತಿ, ಕಾರ್ಯದರ್ಶಿಯಾಗಿ ಕರಿನಗೊಳ್ಳಿಯ ಗೀತಾ, ಜಿಲ್ಲಾ ಕಾರ್ಯದರ್ಶಿಯಾಗಿ ಕಾರೆಮಟ್ಟಿಯ ಸತ್ಯನಾಗರತ್ನ, ಖಜಾಂಚಿಯಾಗಿ ಅರಳಿಕೊಪ್ಪದ ಉಮಾ, ಸದಸ್ಯರುಗಳಾಗಿ ಆರ್ ಕೆ ರಸ್ತೆ ಸುಜಾತ, ನಂದಿಮನೆ ಸುಮಿತ್ರ, ಮುಡಾಗ್ರೆಯ ಉಮಾ, ಮಸೀದಿ ರಸ್ತೆಯ ಶರೀಫ, ಕಾಳೇಶ್ವರದ ರಮ್ಯ, ನಂದಿಹೊಳೆ ಶಕುಂತಲಾ, ನೀರೇರಿ ರತ್ನ, ಮಳಲಿಯ ನಾಗರತ್ನ, ಮೂಗುಡ್ತಿಯ ಗಾಯಿತ್ರಿ, ಗಾಮನಗದ್ದೆ ಯಶೋಧ, ಬಿದರಹಳ್ಳಿಯ ನೂತನ, ಅರಮನೆಕೊಪ್ಪದ ವೀಣಾ, ಸಮಗೋಡಿನ ಮೂಕಾಂಬಿಕ, ಹರಿದ್ರಾವತಿಯ ತಾರಾ ಆಯ್ಕೆಯಾಗಿರುತ್ತಾರೆ.

ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಮ್ಮನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸಮಿತಿ ಸಂಚಾಲಕ ರವೀಂದ್ರ ಸಾಗರ್ ಉಪಸ್ಥಿತಿಯಲ್ಲಿ ಮೇಲ್ಕಂಡ ಸಮಿತಿಯನ್ನು ರಚಿಸಲಾಗಿದೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!