ಹೊಸನಗರ ತಾಲೂಕು ಆಡಳಿತದಿಂದ ಸರಳ ರೀತಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

0
442

ಹೊಸನಗರ: ವಾಲ್ಮೀಕಿ ಎಂಬುದು ವಲ್ಮೀಕ ಅಂದರೆ ಹುತ್ತ ಎಂಬ ಪದದಿಂದ ಬಂದಿದ್ದು ಪ್ರಚೇತಕ ಎಂಬ ಋಷಿಯ ಮಗನಾದ ರತ್ನಾಕರ್ ಎಂಬ ಹುಡುಗನು ಕಾಡಿನಲ್ಲಿ ಓರ್ವ ಬೇಟೆಗಾರನ ಕೈವಶವಾಗಿ ಮುಂದೆ ಬೆಳೆದಂತೆ ಮಹರ್ಷಿ ನಾರದರ ಸಹವಾಸದಿಂದಾಗಿ ಮೈ ಮುಚ್ಚುವಂತಹ ಹುತ್ತ ಬೆಳದರೂ ಗೊತ್ತಾಗದಷ್ಟು ರೀತಿಯ ರಾಮಜಪ ಮಾಡಿ ನಾರದರ ಅನುಗ್ರಹದಿಂದಲೇ ಹುತ್ತದಿಂದ ಹೊರಬಂದು ವಾಲ್ಮೀಕಿಯಾದರು ಎಂದು ಎಸ್.ಟಿ ಮೂರ್ಚಾದ ಬಿಜೆಪಿ ತಾಲ್ಲೂಕು ಅಧ್ಯಕ್ಷರು ವಾಲ್ಮೀಕಿ ಜನಾಂಗದ ತಾಲ್ಲೂಕು ಅಧ್ಯಕ್ಷರಾದ ಎಸ್.ಹೆಚ್.ನಿಂಗಮೂರ್ತಿ ಯವರು ಹೇಳಿದರು.

ಹೊಸನಗರದ ತಾಲ್ಲೂಕು ಕಛೇರಿಯ ಆವರಣದಲ್ಲಿ ಇಂದು ವಾಲ್ಮೀಕಿ ಮಹಾರ್ಷಿ ಜಯಂತಿಯನ್ನು ಕೊರೊನಾ ಕಾರಣ ಸರಳ ರೀತಿಯಲ್ಲಿ ಆಚರಿಸಲಾಗಿದ್ದು ಈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಗತ್ತಿನ ಸಮಗ್ರ ಸಾಹಿತ್ಯದಲೇ ಮೊದಲನೆಯ ಸಾಲಿನಲ್ಲಿ ರಾರಾಜಿಸುತ್ತಿರುವ ಅತ್ಯುತ್ತಮ ಕೃತಿಗಳಲ್ಲಿ ವಾಲ್ಮೀಕಿ ರಾಮಾಯಣವೂ ಒಂದು ಹಾಗೇಯೇ ವಿಶ್ವ ಶ್ರೇಣಿಯಲ್ಲಿ ಅತ್ಯಂತ ಗೌರವಿಸಲ್ಪಡುತ್ತಿರುವ ಕವಿಗಳಲ್ಲಿ ರಾಮಾಯಣದ ಕರ್ತೃ ವಾಲ್ಮೀಕಿಯವರು ಒಬ್ಬರು. ಅಂದಿನಿಂದ ಇಂದಿನವರೆವಿಗೂ ಆ ಸೇತುವೆ ಹಿಮಚಲದ ವರೆಗೆ ರಾಮಾಯಾಣವೂ ಆದಿ ಕಾವ್ಯ ಎಂದು ಪ್ರಸಿದ್ಧವಾಗಿದೆ. ಹಾಗೆಯೇ ಇದನ್ನು ಬರೆದ ವಾಲ್ಮೀಕಿ ಆದಿ ಕವಿ ಎಂದು ಪ್ರಸಿದ್ಧರಾಗಿದ್ದಾರೆ ಎಂದರು.

ಆದಿ ಕವಿ ವಾಲ್ಮೀಕಿಯ ಕಥೆಯು ಬಹಳ ಮಹತ್ವವಾದದ್ದು: ಗ್ರೇಡ್2 ತಹಶೀಲ್ದಾರ್ ರಾಕೇಶ್

ವಾಲ್ಮೀಕಿ ಋಷಿಯ ಕಥೆಯು ಬಹಳ ಮಹತ್ವ ಪೂರ್ಣವಾದದ್ದು ಸಜ್ಜನರ ಸಹವಾಸದಿಂದ ಎಂಥಹ ದುಷ್ಟುರು ಕೂಡ ಸಜ್ಜನರಾಗಬಹುದು ಉದ್ದಾರವಾಗಬಹುದು ಎಂಬುವುದಕ್ಕೆ ವಾಲ್ಮೀಕಿಗಿಂತ ಬೇರೆ ಯಾವುದೇ ಉದಾಹರಣೆ ಬೇಡ ಗುರುಕೃಪ ಹಿಕೇವಲಂ ಶಿಷ್ಯ ಪರಮ ಮಂಗಲಮ್ –ಗುರುವಿನ ಕೃಪೆ ಮಾರ್ಗದರ್ಶಗಳಿಂದ ಎಂಥಹ ಕಟುಕ ಕ್ರೂರಿ ಶಿಷ್ಯನು ಕೂಡ ಸನ್ಮಂಗಲವನ್ನು ಹೊಂದುತ್ತಾನೆ ಎಂಬುವುದಕ್ಕೆ ವಾಲ್ಮೀಕಿ ಸದ್ಗುರುಗಳೇ ಸಾಕ್ಷಿ ಎಂದು ಗ್ರೇಡ್2 ತಹಶೀಲ್ದಾರ್ ರಾಕೇಶ್‌ರವರು ಹೇಳಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ಉಪಾಧ್ಯಕ್ಷೆ ಕೃಷ್ಣವೇಣಿ, ಪಟ್ಟಣ ಪಂಚಾಯಿತಿ ಸದಸ್ಯೆ ಗಾಯಿತ್ರಿ ನಾಗರಾಜ್, ಪೊಲೀಸ್ ಇಲಾಖೆಯ ಎ.ಎಸ್.ಐ ಸುರೇಶ್, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಪರಿವೀಕ್ಷಕರಾದ ನಂದಿನಿ, ಪ್ರಥಮ ದರ್ಜೆ ಗುಮಾಸ್ಥರಾದ ಸರೋಜಿನಿ, ತಾಲ್ಲೂಕು ದೈಹಿಕ ಶಿಕ್ಷಣ ಇಲಾಖೆಯ ಪರಿವೀಕ್ಷಣಾಧಿಕಾರಿ ಚಂದ್ರಬಾಬು, ಯೋಗೇಂದ್ರ, ಈಶ್ವರ, ಮಂಜಪ್ಪ, ಶಿಶು ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಗಳು, ಹಿಂದುಳಿದ ವರ್ಗಗಳ ಇಲಾಖೆಯ ಎಲ್ಲ ಸಿಬ್ಬಂದಿಗಳು ವಾರ್ಡನ್‌ಗಳಾದ ರಾಘವೇಂದ್ರ ಕೆ.ಎಸ್, ಕಲ್ಪನಾ, ಅರ್ಚನಾ, ಕಲ್ಪನ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here