ಹೊಸನಗರ ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆ

0
590

ಹೊಸನಗರ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು ಅಧ್ಯಕ್ಷರಾಗಿ ರವಿ ಬಿದನೂರು ಪ್ರಧಾನ ಕಾರ್ಯದರ್ಶಿಯಾಗಿ ನಾಗರಕೊಡಿಗೆ ರವಿ ಆಯ್ಕೆಯಾಗಿದ್ದಾರೆ.

ಉಳಿದಂತೆ ಉಪಾಧ್ಯಕ್ಷರಾಗಿ ಸಬಾಸ್ಟಿನ್ ರಿಪ್ಪನ್‌ಪೇಟೆ, ಜಿಲ್ಲಾ ಪ್ರತಿನಿಧಿಯಾಗಿ ಕೆ.ಎಂ ಬಸವರಾಜ ರಿಪ್ಪನ್‌ಪೇಟೆ, ಕೋಶಾಧಿಕಾರಿಯಾಗಿ ರವಿರಾಜ್ ಎಂ.ಜಿ. ಭಟ್ ಆಯ್ಕೆಗೊಂಡಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್.ಶಾಂತಾರಾಮ್, ಚಿದಾನಂದ ಸ್ವಾಮಿ ರಿಪ್ಪನ್‌ಪೇಟೆ, ನಾಗೇಶ ನಾಯ್ಕ್, ಹೆಚ್.ಎಸ್.ನಾಗರಾಜ್, ಶಿವಪ್ರಕಾಶ್, ಪರಶುರಾಮ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ರಾಜ್ಯ ನಿರ್ದೇಶಕ ಎನ್.ರವಿಕುಮಾರ್, ಕಾರ್ಯನಿರ್ವಹಿಸಿದರು.

ಸರ್ವಸದಸ್ಯರ ಸಭೆ:

ಇದಕ್ಕು ಮುನ್ನ ಜಿಲ್ಲಾ ಉಪಾಧ್ಯಕ್ಷ ವೈದ್ಯ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಭೆ ನಡೆಯಿತು. ಮೂರು ವರ್ಷಗಳ ಲೆಕ್ಕಪತ್ರ ಮಂಡನೆ ನಡೆದು ಅನುಮೋದಿಸಲಾಯಿತು. ಸಭೆಯಲ್ಲಿ ಸದಸ್ಯತ್ವ ನವೀಕರಣ, ಸಂಘದ ಕ್ರಿಯಾಶೀಲ ಚಟುವಟಿಕೆ ಬಗ್ಗೆ ಚರ್ಚಿಸಲಾಯಿತು. ಗ್ರಾಮಾಂತರ ಉಪಾಧ್ಯಕ್ಷ ಶಿಕಾರಿಪುರ ಹುಚ್ಚರಾಯಪ್ಪ, ಹಿರಿಯ ಪತ್ರಕರ್ತ ರಾಮಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಸನ್ಮಾನ:

ಹೊಸನಗರಕ್ಕೆ ಆಗಮಿಸಿದ ಎನ್.ರವಿಕುಮಾರ್, ವೈದ್ಯ, ಕೆ.ಎಸ್.ಹುಚ್ಚರಾಯಪ್ಪ ಮತ್ತು ತಾಲೂಕಿನ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಜಾಹಿರಾತು

LEAVE A REPLY

Please enter your comment!
Please enter your name here