ಹೊಸನಗರ: ರಾಜ್ಯಾದ್ಯಂತ ವ್ಯಾಪಿಸಿರುವ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಹೈಕೋರ್ಟ್ ತ್ರೀ ಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದ ಹಿನ್ನೆಲೆ ಹಿಂದು-ಮುಸ್ಲಿಂ ಭಾಂದವರು ಹಿಂದಿನಂತೆ ಶಾಂತಿ ಸುವ್ಯವಸ್ಥೆಗೆ ಹೆಸರು ಪಡೆದಿರುವ ಹೊಸನಗರ ತಾಲ್ಲೂಕ್ನ್ನು ಹಿಂದಿನಂತೆಯೇ ಶಾಂತಿ ಸುವ್ಯವಸ್ಥೆಗೆ ಕಾಪಾಡಿ ಸಹಕರಿಸಬೇಕೆಂದು ಹೊಸನಗರ ಸಬ್ಇನ್ಸ್ಪೆಕ್ಟರ್ ರಾಜೇಂದ್ರನಾಯ್ಕ್ ರವರು ಕರೆ ನೀಡಿದರು.
ಹೊಸನಗರದ ಪೊಲೀಸ್ ಠಾಣಾ ಆವರಣದಲ್ಲಿ ಶಾಂತಿ ಸಭೆ ನಡೆಸಿ ಮಾತನಾಡಿ, ನಮ್ಮದು ಶಾಂತಿಯುತ ಪಟ್ಟಣ ಇಲ್ಲಿ ನಾವೇಲರು ಒಗ್ಗಟಿನಿಂದಿರಬೇಕು ಶಾಂತಿ ಸುವ್ಯವಸ್ಥೆ ಕದಲದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಅಲ್ಲದೇ ಹೈಕೋರ್ಟ್ ತೀರ್ಪನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಹೈಕೋರ್ಟ್ ತ್ರಿ ಸದಸ್ಯರ ಪೀಠ ಮಧ್ಯಂತರ ಆದೇಶ ನೀಡಿದ್ದು ನಿಮ್ಮ ನಿಮ್ಮ ಮಕ್ಕಳಿಗೆ ಸೂಕ್ತ ತಿಳುವಳಿಕೆ ನೀಡಿ ಯಾವುದೇ ಗೊಂದಲಗಳಿಗೆ ಎಡೆ ಮಾಡಿಕೊಡದ ಹಾಗೇ ನೋಡಿಕೊಳ್ಳಬೇಕು ಸೋಮವಾರ ಶಾಲೆ ಕಾಲೇಜಿಗೆ ಬರುವಾಗ ಸಮವಸ್ತ್ರದೊಂದಿಗೆ ಶಾಲಾ ಕೊಠಡಿಯನ್ನು ಪ್ರವೇಶಿಸಬೇಕು ಎಂದರು.
ಕೋಮು ಗಲಭೆ ಸೃಷ್ಠಿಸಿದರೇ ಕಠಿಣ ಕ್ರಮ:
ಸಾಮಾಜಿಕ ಜಾಲತಾಣಗಳಲ್ಲಿ ಕೋಮುಗಲಭೆಗೆ ಪ್ರಚೋದನೆ ನೀಡುವಂತಹ ಪೋಸ್ಟ್ ಗಳನ್ನು ಹಾಕುವುದ ಬಗ್ಗೆ ಕೀಡಿಗೇಡಿಗಳು ಹುಟ್ಟಿಕೊಂಡಿದ್ದಾರೆ ಎಂಬ ಚಿಹ್ಹೆ ನಮ್ಮ ಗಮನಕ್ಕೆ ಬಂದಿದ್ದು ಪ್ರಚೋದನೆಗಳನ್ನು ಮೊಬೈಲ್ಗಳನ್ನು ಬಳಸಿ ಪೋಸ್ಟ್ ಮಾಡಿದವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಹಾಗೂ ಸೋಮವಾರದಿಂದ ಶಾಲಾ ಕಾಲೇಜ್ಗಳಿಗೆ ಬರುವ ವಿದ್ಯಾರ್ಥಿಗಳು ಹಿಜಾಬ್ ಹಾಗೂ ಕೇಸರಿ ಸಾಲುಗಳನ್ನು ತೊಟ್ಟು ಗೊಂದಲವನ್ನು ಸೃಷ್ಠಿ ಮಾಡಿದರೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೋಳ್ಳುವುದಾಗಿ ಎಚ್ಚರಿಸಿದರು.
ಈ ಶಾಂತಿ ಸಭೆಯಲ್ಲಿ ಎರಡು ಧರ್ಮದ ಮುಖಂಡರುಗಳಾದ ರಮೇಶ್, ಸುಧೀಂದ್ರ ಪಂಡಿತ್, ಪ್ರಹ್ಲಾದ,ಕೆ ಇಲಿಯಾಸ್, ನಾಸೀರ್, ಯಾಸಿರ್, ತೌಸಿಕ್, ಫಾರೂಕ್, ವಿನಯ ಭಂಡಾರಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಠಾಣಾ ವ್ಯಾಪ್ತಿಯಲ್ಲಿ ಕೊಠಡಿಯು ಚಿಕ್ಕದಾಗಿರುವುದರಿಂದ ಹಿಂದೂ ಮುಸ್ಲಿ ಮುಖಂಡರ ಬೇರೆ ಬೇರೆ ಸಭೆ ನಡೆಸಿದರು.