ಹೊಸನಗರ ತಾಲ್ಲೂಕಿನಲ್ಲಿ 241.6 ಮಿ.ಮೀ. ಮಳೆ ; ದನದ ಕೊಟ್ಟಿಗೆ ಬಿದ್ದು ಹಸು ಸಾವು ! ಮಳೆಯಿಂದ ಭಾರೀ ಅನಾಹುತವಾಗುವ ಸಂಭವ

0
791

ಹೊಸನಗರ: ತಾಲ್ಲೂಕಿನಲ್ಲಿ ಎರಡು ದಿನಗಳಿಂದ ಹಗಲು-ರಾತ್ರಿ ಎನ್ನದೇ ಗಾಳಿ ಮಳೆ ಬೀಳುತ್ತಿದ್ದು ಮಳೆಯ ರಭಸಕ್ಕೆ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟದಕೊಪ್ಪ ಗ್ರಾಮದ ಬೀರಪ್ಪನವರ ದನದ ಕೊಟ್ಟಿಗೆ ಬಿದ್ದು ಒಂದು ಹಸು ಪ್ರಾಣ ಬಿಟ್ಟ ಘಟನೆ ವರದಿಯಾಗಿದೆ. ಇದರಿಂದ ಸುಮಾರು 1ಲಕ್ಷ ರೂ.ನಷ್ಟು ನಷ್ಟ ಸಂಭವಿಸಿದೆ.

ತಾಲ್ಲೂಕಿನಲ್ಲಿ ಅಲ್ಲಲ್ಲಿ ಗಾಳಿ ಮಳೆಗೆ ಮರಗಳು ಉರುಳಿದ್ದು ಕೆಲವು ಕಡೆಗಳಲ್ಲಿ ಅನಾಹುತ ಸಂಭವಿಸಿದ್ದು ಜನ ಜೀವನ ಸಂಕಷ್ಟದಲ್ಲಿದೆ. ಆದರೆ ಇಲ್ಲಿಯವರೆಗೆ ಮಾರುತಿಪುರದ ಕೊಟ್ಟಿಗೆ ಬಿದ್ದ ಬಗ್ಗೆ ಮಾತ್ರ ವರದಿಯಾಗಿದ್ದು ಅನಾಹುತವಾದ ಬಗ್ಗೆ ಬೇರೆ ಯಾವುದೇ ವರದಿಗಳು ತಾಲ್ಲೂಕು ಕಛೇರಿಯ ಗಮನಕ್ಕೆ ಬಂದಿಲ್ಲ.

ಯಾವುದೇ ಅನಾಹುತಗಳು ಸಂಭವಿಸಿದರೂ ತಕ್ಷಣ ಕಂದಾಯ ಇಲಾಖೆಗೆ ತಿಳಿಸಿ: ತಹಶೀಲ್ದಾರ್ ರಾಜೀವ್

ಕಂದಾಯ ಇಲಾಖೆಯ ಸಿಬ್ಬಂದಿಗಳು ಅತಿವೃಷ್ಠಿಗೆ ಸಂಪೂರ್ಣ ಸಜ್ಜಾಗಿದ್ದು ತಾಲ್ಲೂಕಿನಲ್ಲಿ ಎಲ್ಲಿಯಾದರೂ ಅನಾಹುತ ಸಂಭವಿಸಿದರೆ ಆ ಗ್ರಾಮದ ಲೆಕ್ಕಾಧಿಕಾರಿಗಳ ಅಥವಾ ಕಂದಾಯ ಇಲಾಖೆಯ ಗಮನಕ್ಕೆ ತಂದರೆ ಕಂದಾಯ ಇಲಾಖೆಯ ನೌಕರರ ವರ್ಗ ತಕ್ಷಣ ಸ್ಪಂದಿಸಲಿದ್ದು ಇನ್ನೂ ಎರಡು ಮೂರು ದಿನಗಳ ಮಳೆಯ ರಭಸ ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು ಸಾರ್ವಜನಿಕರು ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು ನಮ್ಮ ಇಲಾಖೆ ಸದಾ ನಿಮಗೆ ಸಹಾಯ ಹಸ್ತ ನೀಡಲಿದ್ದೇವೆಲ ಪ್ರತಿ ಗಾಮಗಳಿಗೆ ನಮ್ಮ ಕಂದಾಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಲಿದ್ದಾರೆ ಎಂದು ಹೊಸನಗರದ ತಹಶೀಲ್ದಾರ್ ರಾಜೀವ್‌ರವರು ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here